27th September 2023
Share

TUMAKURU:SHAKTHIPEETA FOUNDATION

ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ತುಮಕೂರು ಲೋಕಸಭಾ ಸದಸ್ಯರು ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಲ್ಲಿಸಿರುವ ಮನವಿ ಪತ್ರ.

 ಮಾರಶೆಟ್ಟಿಹಳ್ಳಿ ಸಂಸದರ ಆದರ್ಶ ಗ್ರಾಮ, ತುಮಕೂರು ಸ್ಮಾರ್ಟ್ ಸಿಟಿ, ತುಮಕೂರು ಡೇಟಾ ಸಿಟಿ ಮತ್ತು ತುಮಕೂರು ಡೇಟಾ ಜಿಲ್ಲೆಯಾಗಿ ಮಾರ್ಪಾಡು ಮಾಡಲು ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿ ದೇಶದ ಅತ್ಯುತ್ತಮ ಸಮಿತಿಯಾಗಿ ಕಾರ್ಯನಿರ್ವಹಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂಸದರು ರಾಜ್ಯ ಮಟ್ಟದ ದಿಶಾ ಸಮಿತಿಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ.

 ರಾಜ್ಯ ಮಟ್ಟದ ದಿಶಾ ಸಮಿತಿ ರಚಿಸಲು, ಸದಸ್ಯ ಕಾರ್ಯದರ್ಶಿಯಾಗಿ ಯೋಜನಾ ಇಲಾಖೆಯ ಅಪರ ಮುಖ್ಯದರ್ಶಿಗಳ ನೇಮಕ ಮಾಡುವುದು, ದೇಶದಲ್ಲಿಯ ಇತರೆ ರಾಜ್ಯಗಳಲ್ಲಿರುವ ಇರುವ ಹಾಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗುವುದು ಸೂಕ್ತ ಎಂಬ ವಿಷಯವನ್ನು ಈಗಾಗಲೇ ಮಾನ್ಯ ಮುಖ್ಯ ಮಂತ್ರಿಯವರ ಗಮನ ತಂದಿದ್ದಾರೆ.

  ಪ್ರಸ್ತುತ ರಾಜ್ಯ ಮಟ್ಟದ ದಿಶಾ ಸಮಿತಿಯು ದೇಶದಲ್ಲಿಯೇ ಅತ್ಯುತ್ತಮ ಸಮಿತಿಯಾಗ ಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಕಾರ್ಯ ಪ್ರವೃತ್ತರಾಗಿದ್ದಾರೆ.

ಆಸಕ್ತರು ಸಲಹೆ ಸೂಚನೆ ನೀಡಲು ಮನವಿ.