1st January 2025
Share

TUMAKURU:SHAKTHIPEETA FOUNDATION

 ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಘೋಶಿಸಿರುವಂತೆ 2022 ರೊಳಗೆ ಜಿಲ್ಲೆಯ ಎಲ್ಲರಿಗೂ ಸೂರು ಯೋಜನೆ ಶೇ 100 ರಷ್ಟು ಜಾರಿಯಾಗಲೇ ಬೇಕು. ಮುಂದಿನ 100 ದಿನಗಳು ಜಿಲ್ಲಾಧ್ಯಾಂತ HOUSING FOR ALL-2022 ಆಂದೋಲನ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲು ಕರೆ ನೀಡಿದರು.

 ಅವರು ದಿನಾಂಕ:06.09.2020 ರಂದು ಅವರ ಗೃಹ ಕಚೇರಿಯಲ್ಲಿ ನಡೆದ  ತುಮಕೂರು ಮಹಾನಗರ ಪಾಲಿಕೆಯ, ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ತಾಲ್ಲೂಕು ವ್ಯಾಪ್ತಿಯ ನಿವೇಶನ ರಹಿತರಿಗೆ ಸರ್ಕಾರಿ ಜಮೀನು ಹುಡಕುವ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

HOUSING FOR ALL-2022(URBUN) ಯೋಜನೆಗೆ ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿ ರಹಿತರ ಪಟ್ಟಿಯನ್ನು ಬೂತ್ ವ್ಯಾಪ್ತಿಯಲ್ಲಿ ಅಥವಾ ಬಡಾವಾಣೆ ವ್ಯಾಪ್ತಿಯಲ್ಲಿ ಅಥವಾ ವಾರ್ಡ್ ವ್ಯಾಪ್ತಿಯಲ್ಲಿ ಪ್ರಕಟಿಸ ಬೇಕು.

 ಅವರಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಇದ್ದಲ್ಲಿ ಯಾರ್‍ಯಾರಿಗೆ ಎಲ್ಲೆಲ್ಲಿ ನಿವೇಶನ ನೀಡಲಾಗುವುದು ಎಂಬ ಬಗ್ಗೆ ಜಿಐಎಸ್ ಲೇಯರ್ ಸಹಿತ ನಕ್ಷೆಯಲ್ಲಿ ಪ್ರಕಟಣೆ ಮಾಡುವುದು. ಒಂದು ವೇಳೆ ಸರ್ಕಾರಿ ಜಮೀನು ಇಲ್ಲದೆ ಇದ್ದಲ್ಲಿ ಯಾರ್‍ಯಾರಿಗೆ  ನಿವೇಶನ ನೀಡಲು ಯಾವ ಖಾಸಗಿ ಜಮೀನು ಭೂ ಸ್ವಾಧೀನ ಮಾಡಬೇಕು ಎಂಬ ಬಗ್ಗೆ ಸರ್ವೇನಂಬರ್ ಸಹಿತ ಜಿಐಎಸ್ ಲೇಯರ್ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕು.

HOUSING FOR ALL-2022 (RURAL) ಯೋಜನೆಗೆ ಜಿಲ್ಲಾ ಪಂಚಾಯತ್ ಸಿಇಓ ಶ್ರೀ ಮತಿ ಶುಭಕಲ್ಯಾಣ್ ರವರ  ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಜಿಲ್ಲೆಯ 330 ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿ ರಹಿತರ ಪಟ್ಟಿಯನ್ನು ಬೂತ್ ವ್ಯಾಪ್ತಿಯಲ್ಲಿ ಅಥವಾ ಗ್ರಾಮ ವ್ಯಾಪ್ತಿಯಲ್ಲಿ ಪ್ರಕಟಿಸ ಬೇಕು.

  ಅವರಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಇದ್ದಲ್ಲಿ ಯಾರ್‍ಯಾರಿಗೆ ಎಲ್ಲೆಲ್ಲಿ ನಿವೇಶನ ನೀಡಲಾಗುವುದು ಎಂಬ ಬಗ್ಗೆ ಜಿಐಎಸ್ ಲೇಯರ್ ಸಹಿತ ನಕ್ಷೆಯಲ್ಲಿ ಪ್ರಕಟಣೆ ಮಾಡುವುದು. ಒಂದು ವೇಳೆ ಸರ್ಕಾರಿ ಜಮೀನು ಇಲ್ಲದೆ ಇದ್ದಲ್ಲಿ ಯಾರ್‍ಯಾರಿಗೆ  ನಿವೇಶನ ನೀಡಲು ಯಾವ ಖಾಸಗಿ ಜಮೀನು ಭೂ ಸ್ವಾಧೀನ ಮಾಡಬೇಕು ಎಂಬ ಬಗ್ಗೆ ಸರ್ವೇನಂಬರ್ ಸಹಿತ ಜಿಐಎಸ್ ಲೇಯರ್ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕು.

  ಗ್ರಾಮ ಲೆಕ್ಕಿಗರು, ರೆವಿನ್ಯೂ ಇನ್‌ಸ್ಪೆಕ್ಟರ್, ಸರ್ವೆಯರ್‍ಸ್, ತಹಶೀಲ್ದಾರ್‌ರವರು ಮತ್ತು ಉಪವಿಭಾಗಾಧಿಕಾರಿಗಳು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿರುವ ಸರ್ಕಾರಿ ಜಮೀನು ಗುರುತಿಸಿ ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಡಿ ಪ್ರಕಟಿಸಬೇಕು.

 ಈ ಜಮೀನುಗಳಿಗೆ ಬಗರ್ ಹುಕುಂ ಅರ್ಜಿಗಳನ್ನು ಹಾಕಿದಲ್ಲಿ ಅವುಗಳ ಬಗ್ಗೆಯೂ ದಾಖಲಿಸಬೇಕು. ಸುಪ್ರೀಂ ಕೋರ್ಟ್ ನಗರ ವ್ಯಾಪ್ತಿಯ ಸುತ್ತಮುತ್ತ ಬಗರ್ ಹುಕುಂ ಯೋಜನೆಯಡಿ ಜಮೀನು ಮಂಜೂರು ಮಾಡಬಾರದು ಎಂಬ ಆದೇಶದ ಮೇಲೆ ಸರ್ಕಾರ ನಿಗದಿ ಮಾಡಿರುವ ನಿಯಮಗಳನ್ನು ಪಾಲಿಸಬೇಕು.

  ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಓ ಮತ್ತು ಇಓ ನಿವೇಶನ ರಹಿತರ ಮತ್ತು ವಸತಿ ರಹಿತರ ಪಟ್ಟಿಯನ್ನು ಗ್ರಾಮವಾರು ಅಥವಾ ಬೂತ್‌ವಾರು ನಿಯಾಮಾನುಸಾರ ಪ್ರಕಟಿಬೇಕು.

 ನಗರ ಪ್ರದೇಶಗಳಲ್ಲಿ ಆರ್.ಓ ಮತ್ತು ಆಯುಕ್ತರು, ಚೀಫ್ ಆಫೀಸರ್ ನಿವೇಶನ ರಹಿತರ ಮತ್ತು ವಸತಿ ರಹಿತರ ಪಟ್ಟಿಯನ್ನು ವಾರ್ಡ್‌ವಾರು ಅಥವಾ ರೆವಿನ್ಯೂ ವಾರ್ಡ್‌ವಾರು ಅಥವಾ ಬಡವಾಣೆ ವಾರು ಅಥವಾ ಬೂತ್‌ವಾರು ನಿಯಾಮಾನುಸಾರ ಪ್ರಕಟಿಬೇಕು. ಕೊಳಚೆ ಪ್ರದೇಶಗಳಲ್ಲಿ ಇಂಜಿನಿಯರ್ ಪ್ರಕಟಿಸಿಬೇಕು.

ಕಾಲಮಿತಿಯಲ್ಲಿ ಪಲಾನುಭವಿಗಳ ಆಯ್ಕೆಗೆ ತಾಕೀತು.

 ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಈಗಾಗಲೇ ಜಿಲ್ಲೆಗೆ ಅಲೇಮಾರಿ ಜನಾಂಗದವರಿಗೆ, ಕೊಳಚೆ ಪ್ರದೇಶದವರಿಗೆ ಮತ್ತು ಗ್ರಾಮ ಪಂಚಾಯ್ತಿವಾರು ಮನೆಗಳನ್ನು ಮಂಜೂರು ಮಾಡಿದ್ದಾರೆ, ಇವುಗಳ ಪಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು ಮತ್ತು ನಿವೇಶನ ಹಾಗೂ ವಸತಿ ರಹಿತರ ಪ್ರಕಟಿಸಿದ ಪಟ್ಟಿಯೇ ಮೂಲಮಂತ್ರವಾಗಬೇಕು. ಕಾಲಮಿತಿಯ ಅಡಿಯಲ್ಲಿ ಪಲಾನುಭವಿಗಳ ಆಯ್ಕೆ ಪೂರ್ಣಗೊಳ್ಳಲೇ ಬೇಕು.

 ಇವೆಲ್ಲಾ ಪ್ರಕ್ರೀಯೇ ಮುಂದಿನ 100 ದಿವಸದೊಳಗೆ ಪೂರ್ಣವಾಗಬೇಕು. ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ  ನೊಂದಾಯಿಸಿಕೊಂಡಿರುವ ಪಲಾನುಭವಿಗಳನ್ನು ಹೊರತುಪಡಿಸಿ, ಇತರೆ ಪಲಾನುಭವಿಗಳು ಇದ್ದಲ್ಲಿ ಅವುಗಳನ್ನು ಸಹ ಪ್ರಕಟಿಬೇಕು.

ಮಾಹಿತಿ ಹಕ್ಕು ಅಧಿನಿಯಮದ ಕಾರ್ಯಕರ್ತರಿಗೆ ಆನೆ ಬಲ

  ಒಂದು ವೇಳೆ ಸರ್ಕಾರಿ ಜಮೀನು ಗುರುತಿಸುವಲ್ಲಿ ಹಾಗೂ ನೈಜ ಪಲಾನುಭವಿಗಳನ್ನು ಆಯ್ಕೆ ಮಾಡುವಾಗ ನಿಯಮ ಉಲ್ಲಂಘಿಸಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಕಾರ್ಯಕರ್ತರು ದೂರು ನೀಡಿದಲ್ಲಿ ಅಂಥಹವರ ವಿರುದ್ಧ ನಿಯಾಮುನುಸಾರ   ಕ್ರಮಕ್ಕೆ  ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಲಾಗುವುದು.

 ಪ್ರಧಾನಿಯವರು ಘೋಶಿಸಿರುವ ಗಡುವಿನೊಳಗೆ ಶೇ 100 ರಷ್ಟು ಸಾಧನೆ ಮಾಡಲೇ ಬೇಕು. ಕೆಲಸ ಮಾಡದೇ ಮೌನವಾಗಿ ಇರುವ ನೌಕರರು, ಅಧಿಕಾರಿಗಳಿಗೂ ಇದೇ ಮಾನದಂಡವಾಗಲಿದೆ. ಈ ಅಧಿಕಾರವನ್ನು ಕೇಂದ್ರ ಸರ್ಕಾರ ದಿಶಾ ಸಮಿತಿಗೆ ನೀಡಿದೆ ಎಂದು ಎಚ್ಚರಿಸಿದರು.

  ಜಿಲ್ಲೆಯ ಮೂರು ಉಪವಿಭಾಗಾಧಿಕಾರಿಗಳಿಗೂ ಹೊಣೆಗಾರಿಕೆ ನೀಡಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು, ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕ, ತಹಶೀಲ್ಧಾರ್‌ಗಳಾದ ಶ್ರೀ ಮೋಹನ್, ಶ್ರೀ ಪ್ರದೀಪ್, ತುಮಕೂರು ಇಓ ಶ್ರೀ ಜೈಪಾಲ್, ಗುಬ್ಬಿ ಚೀಪ್ ಆಫೀಸರ್ ಶ್ರೀ ತೀರ್ಥಪ್ರಸಾದ್ ಮತ್ತು ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸೇರಿದಂತೆ ವಿವಿದ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.