22nd May 2024
Share

TUMAKURU:SHAKTHIPEETA FOUNDATIN

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ತಾಂತ್ರಿಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ಮತ್ತು ಅವರ ತಂಡ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು, ಜೆಜಿ ಹಳ್ಳಿ ಹೋಬಳಿ, ವಡ್ಡನಹಳ್ಳಿ ಗ್ರಾಮದ ಪಕ್ಕವಿರುವ ಬಗ್ಗನಡು ಕಾವಲ್‌ನಲ್ಲಿ ಆರಂಭಿಸಲು ಉದ್ದೇಶಿಸಿರುವ ಜಲಭಾರತ ಕ್ಯಾಂಪಸ್‌ಗೆ  ದಿನಾಂಕ:12.09.2020 ನೇ ಶನಿವಾರ ಭೇಟಿ ನೀಡಲಿದ್ದಾರೆ.

 ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಉದ್ದೇಶಿರುವ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್‌ನ ಲೇ-ಔಟ್ ಅಂತಿಮ ಹಂತಕ್ಕೆ ಬಂದಿದ್ದು, ಸ್ಥಳ ಪರೀಶಿಲನೆ ನಡೆಸಿ ಅವರ ತಂಡದ ಅನುಮತಿಯನ್ನು ಪಡೆಯಲು ನಿರ್ಧರಿಸಲಾಗಿದೆ.

 ಆರಂಭದಲ್ಲಿ ತುಮಕೂರು ವಿಶ್ವವಿದ್ಯಾಯಲಯದಲ್ಲಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ  ಗಂಗಾಮಾತೆ(ನೀರು) ಮತ್ತು ಶಕ್ತಿಪೀಠಗಳ ಸಂಬಂದದ ಅಧ್ಯಯನಕ್ಕಾಗಿ ವಾಟರ್ ಮ್ಯೂಸಿಯಂ ಸ್ಥಾಪಿಸಲು ಚಿಂತನೆ ನಡೆಸಲಾಗಿತ್ತು.

 ತುಮಕೂರು ವಿಶ್ವವಿದ್ಯಾನಿಲಯದ ನಕರಾತ್ಮಕ ಧೋರಣೆಯಿಂದ ಬೇಸತ್ತು ಪ್ರಸ್ತುತ ಶಕ್ತಿಪೀಠ ಫೌಂಡೇಷನ್ ನೀರಾವರಿ ತಜ್ಞ ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಅಧ್ಯಯನ ಪೀಠ ಆರಂಭಿಸಬೇಕೆ ಅಥವಾ ಇನ್ನೊಮ್ಮೆ ತುಮಕೂರು ವಿಶ್ವವಿದ್ಯಾನಿಲಯದೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವ ಬಗ್ಗೆಯೂ ಚರ್ಚಿಸಲಾಗುವುದು.

  ರಾಜ್ಯ ಸರ್ಕಾರ ಈ ಕ್ಯಾಂಪಸ್‌ಗೆ ಉತ್ತಮವಾದ ಹೆಸರು ಇಡಲು ಸೂಚಿಸಿರುವುದರಿಂದ ಕ್ಯಾಂಪಸ್ ಯೋಜನೆಯ ಹೆಸರಿನ ಬಗ್ಗೆಯೂ ಸಮಾಲೋಚನೆ ನಡೆಸಲಾಗುವುದು. ವಾಣಿವಿಲಾಸ ಡ್ಯಾಂ ಕಾಲುವೆಗಳ ಅಕ್ಕ-ಪಕ್ಕ ಇರುವ ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮದ ಜಮೀನಿನಲ್ಲಿ ಅಗ್ರಿಟೂರಿಸಂ, ಗ್ರೀನ್ ಕಾರಿಡಾರ್ ನಿರ್ಮಾಣದ ಪರಿಕಲ್ಪನೆಯ ಬಗ್ಗೆಯೂ ಕೈಗೊಳ್ಳಬೇಕಾಗಿರುವ ಅಂಶಗಳ ಬಗ್ಗೆ ಚರ್ಚಿಸಲಾಗುವುದು.

 ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನಕ್ಕೆ ಪೂರಕವಾಗಿ ಜಲಗ್ರಾಮ ಕ್ಯಾಲೆಂಡರ್, ರಾಜ್ಯದ 40 ಸಂಸದರ ಆದರ್ಶ ಗ್ರಾಮಗಳಲ್ಲಿ ವಿಶೇಷವಾಗಿ ಜಲಶಕ್ತಿ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಿದ್ದು, ಫೈಲಟ್ ಯೋಜನೆಯಾಗಿ ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆಯೂ ಚರ್ಚಿಸಲಾಗುವುದು.

 ರಾಜ್ಯದ ಮತ್ತು ದೇಶದ ಹನಿನೀರಿನ ಬಳಕೆಯ ನೀರಾವರಿ ಡೇಟಾ ಪಾರ್ಕ್, ರಾಜ್ಯದ 29360 ಗ್ರಾಮಗಳ ಜಲಗ್ರಾಮ ಕ್ಯಾಲೆಂಡರ್, ರಾಜ್ಯದ ಜಲಸಂಗ್ರಹಾಗಾರಗಳ ಡಿಜಿಟಲ್ ಜಲಗಣತಿ ಬಗ್ಗೆ ಅಧ್ಯಯನ ಮತ್ತು ‘ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಬಗ್ಗೆಯೂ ಚರ್ಚಿಸಲಾಗುವುದು.

ಆಸಕ್ತರು ಕ್ಯಾಂಪಸ್‌ನ ಮಾಸ್ಟರ್ ಪ್ಲಾನ್ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಲು ಮನವಿ