16th September 2024
Share

TUMAKURU:SHAKTHIPEETA FOUNDATION

 ಡಾ.ಡಿ.ಎಂ.ನಂಜುಡಪ್ಪನವರು 2002 ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿಯ ವರದಿ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಪ್ರತಿಯೊಂದು ವಿಭಾಗದಲ್ಲೂ ಯಾವ ಯೋಜನೆ ಕೊರತೆ ಇತ್ತು. ಪ್ರಸ್ತುತ ಯಾವ ಯೋಜನೆಗಳು ಸುಧಾರಣೆಯಾಗಿದೆ. ಇನ್ನೂ ಅಗತ್ಯವಿರುವ ಯೋಜನೆಗಳು ಯಾವು.

  ಇದೇ ರೀತಿ ಪ್ರತಿಯೊಂದು ಇಲಾಖೆಗಳಲ್ಲೂ ಕೇಂದ್ರ ಅಥವಾ ರಾಜ್ಯ ಸರ್ಕಾರ ಹಲವಾರು ವರದಿಗಳನ್ನು ಸಿದ್ಧಪಡಿಸಿದೆ. ಈ ವರದಿಗಳ ಪ್ರಕಾರ ಸಂಸದರ ಆದರ್ಶ ಗ್ರಾಮ ಯೋಜನೆಯ ವ್ಯಾಪ್ತಿಯಲ್ಲಿ ಯಾವ ಯೋಜನೆ ಕೈಗೊಳ್ಳ ಬಹುದು ಎಂಬ ಬಗ್ಗೆ ಅವಲೋಕನ ಮಾಡುವುದು ಸೂಕ್ತವಾಗಿದೆ.

 ರಾಜ್ಯ ಸರ್ಕಾರದ ವಿಷನ್ ಡಾಕ್ಯುಮೆಂಟ್‌ನಲ್ಲಿ ಹಲವಾರು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದೆ. ಕೇಂದ್ರ ಸರ್ಕಾರವಂತೂ ರೂಪಿಸಿರುವ ಪ್ರತಿಯೊಂದು ಯೋಜನೆಗಳಲ್ಲೂ ಯಾವ ಮಾಹಿತಿ ಹೇಗೆ ಸಂಗ್ರಹಿಸಬೇಕು ಎಂದು ವಿವರವಾಗಿ ಹೇಳಿದೆ.

 ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಇಂತಹ ಎಲ್ಲಾ ಯೋಜನೆಗಳನ್ನು ಅನಾಲೀಸಿಸ್ ಮಾಡಿ ಪ್ರತಿಯೊಂದು ಗ್ರಾಮದ ಅಗತ್ಯದ ಬಗ್ಗೆ ಜಿಐಎಸ್ ಲೇಯರ್ ಮಾಡಿ ಇಟ್ಟುಕೊಳ್ಳುವುದು ನಿಯಮವಾಗಿದೆ.

 ಆದರೇ ಇದೂವರೆಗೂ  ಈ ಕೆಲಸ ಆಗಿಲ್ಲ ಎಂದರೆ ಏನರ್ಥ. ಈ ಎಲ್ಲಾ ಪ್ರಶ್ನೆಗಳಿಗೆ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಮರ್ಪಕವಾಗಿ ಉತ್ತರ ನೀಡುವ ಪ್ರತಿಯೊಂದು ಡಿಜಿಟಲ್ ಮಾಹಿತಿ ಶೀಘ್ರವಾಗಿ ಸಿದ್ಧವಾಗಲಿದೆ.

  ಮುಂದಿನ ವರ್ಷಗಳಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಕೈಗೊಳ್ಳುವ ಯೋಜನೆಗಳ ವಿಲೇಜ್ ಡೆವಲಪ್‌ಮೆಂಟ್ ಪ್ಲಾನ್’ ತಯಾರಿಸುವ ಮುನ್ನ ಈ ಎಲ್ಲಾ ಅಂಶಗಳನ್ನು ಗುಬ್ಬಿ ತಾಲ್ಲೂಕಿನ ಅಧಿಕಾರಿಗಳು ಅಧ್ಯಯನ ಆರಂಭಿಸಿದ್ದಾರೆ.

 ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಸಂಸದರ ಆದರ್ಶ ಗ್ರಾಮ ವಿಡಿಪಿಯಲ್ಲಿ ಬಹುತೇಕ ಎಲ್ಲಾ ವರದಿಗಳ ಅಂಶಗಳನ್ನು ಸೇರ್ಪಡೆ ಮಾಡಲು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ, ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಯಾವ ವರದಿಗಳು ಏನು ಹೇಳುತ್ತಿವೆ, ವರದಿ ಪ್ರತಿಯನ್ನು ನೀಡಿ ಎಂದು ವರದಿಗಳ ಸಂಗ್ರಹಣೆಯಲ್ಲಿ ತೊಡಗಿ ಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಶ್ರೀ ಗುರುಮೂರ್ತಿರವರು ಈ ಎಲ್ಲಾ ವರದಿಗಳ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯವನ್ನು ಒಳಗೊಂಡ ಸಾಗಿಭವನ’ ವನ್ನು ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಆಸಕ್ತಿ ಇರುವವರನ್ನು ಹುಡುಕುತ್ತಿದ್ದಾರಂತೆ.

 ವ್ಯಕ್ತಿಗಳು, ಕುಟುಂಬಗಳು ಮತ್ತು ಸಂಘಸಂಸ್ಥೆಗಳು ಮುಂದೆ ಬಂದಲ್ಲಿ ಗ್ರಾಮಪಂಚಾಯಿತಿ ಆಸ್ತಿಯಲ್ಲಿ ಅಥವಾ ಸರ್ಕಾರಿ ಜಮೀನಿನಲ್ಲಿ ’ಸಾಗಿಭವನ’ ಕ್ಕೆ ಅಗತ್ಯವಿರುವ ಜಮೀನು ಕಾಯ್ದಿರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಕೊಗೊಳ್ಳಲು ಮುಂದಾಗಬಹುದು.

  ಗುಬ್ಬಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಯಾವುದಾದರೊಂದು ಸಂಘ ಸಂಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಆರಂಭಿಸಲು ಚರ್ಚೆಗಳು ಆರಂಭವಾಗಿವೆ.