22nd December 2024
Share
SIDDARA BETTA.
TOP OF THE HILL M.P.MAHESH, LOKESH & KUNDARANAHALII RAMESH
ಆಯುಷ್ ಪಾರ್ಕ್ ಸ್ಥಾಪನೆ ಮತ್ತು ಸಂಸದರ ಆದರ್ಶ ಗ್ರಾಮ ಯೋಜನೆ ಬಗ್ಗೆ ಚರ್ಚೆ

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕುರುಂಕೋಟೆ ಗ್ರಾಮ ಪಂಚಾಯಿತಿಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದಾರೆ.

  ಸಂಸದರು ಈ ಗ್ರಾಮಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡಿರುವ ಪ್ರಮುಖ ಉದ್ದೇಶ  ಗಿಡಮೂಲಿಕೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿದ್ಧರಬೆಟ್ಟದ ಸಮಗ್ರ ಅಭಿವೃದ್ಧಿ ಮತ್ತು ಆಯುಷ್ ಪಾರ್ಕ್ ಮಾಡುವ ಮೂಲಕ, ಈ ಭಾಗದ ರೈತರ ಮತ್ತು ನಿರುದ್ಯೋಗಿಗಳಿಗೆ ಆಸರೆ ಯಾಗಲು ಚಿಂತನೆ ನಡೆಸಿದ್ದಾರೆ.

  ಕೇಂದ್ರ ಸರ್ಕಾರ ಆಯುಷ್ ಪಾರ್ಕ್ ಮಾಡುವವರಿಗೆ ಎಲ್ಲಾ ಸೌಲಭ್ಯ ನೀಡುತ್ತದೆ. ಆದರೇ ಸರ್ಕಾರಿ ಯೋಜನೆಯಾಗಿ ಮಾಡುವುದು ಬಹಳ ವಿರಳ. ಗತಕಾಲದ ವೈಭವ ಆಯುಷ್ ಯುಗವಾಗಿತ್ತು. ನಂತರ ಆಧುನಿಕ ಪ್ರಪಂಚದಲ್ಲಿ ಬಹುತೇಕ ಕಣ್ಮರೆಯಾಗುವ ಹಂಚಿನಲ್ಲಿದ್ದ ಆಯುಷ್‌ಗೆ ಕೊರೊನಾ ಮಹಾಮಾರಿ ಮತ್ತೆ ಚಾಲನೆ ನೀಡಿದೆ. ಇನ್ನೂ ಮುಂದೆ ಆಯುಷ್ ಯುಗ  ಎರಡು ಮಾತಿಲ್ಲ.

  ಹಿಂದೆ ಬಸವರಾಜ್‌ರವರು ಸಂಸದರಾಗಿದ್ದ ಅವಧಿಯಲ್ಲಿ ಸಿದ್ಧರಬೆಟ್ಟದಲ್ಲಿ ಆಯುಷ್ ಪಾರ್ಕ್ ಮಾಡಲು ಆಲೋಚನೆ ಮಾಡಿದ್ದರು. ಆಗಿನ ಆಯುಷ್ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀ ಗಾ.ನಂ.ಶ್ರೀ ಕಂಠಯ್ಯನವರು ವಿಶೇಷ ಆಸಕ್ತಿ ವಹಿಸಿದ್ದರು. ಆಗಿನ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಗುಲಾಂನಭಿ ಆಜಾದ್‌ರವರು ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದರು.

  ಸಚಿವರು ಶೀಘ್ರವಾಗಿ ಯೋಜನೆಗೆ ಚಾಲನೆ ನೀಡಲು ಸೂಚಿಸಿದ್ದ ಹಿನ್ನಲೆಯಲ್ಲಿ, ಸಂಸದರು ಸಚಿವರಿಗೆ ಮನವಿ ನೀಡಿ, ದೆಹಲಿಯಿಂದ ತುಮಕೂರಿಗೆ ಬರುವ ವೇಳೆಗೆ ಕೇಂದ್ರದ ಅಧಿಕಾರಿಗಳೂ ಬೆಂಗಳೂರಿಗೆ ಬಂದು ಸಭೆ ನಡೆಸಿದ್ದರು.

  ಅಂದಿನ ಸಭೆಯಲ್ಲಿ ಗಾ.ನಂ.ಶ್ರೀ ಕಂಠಯ್ಯನವರು ಸೇರಿದಂತೆ ಆನೇಕ ಅಧಿಕಾರಿಗಳು ಭಾಗವಹಿಸಿದ್ದರು. ಶ್ರೀಮತಿ ಮೀನಾಕ್ಷಿ ನೇಗಿಯವರು ಕೇಂದ್ರ ಸರ್ಕಾರದಿಂದ ಪ್ರತಿನಿಧಿಸಿದ್ದರು. ನಾನೂ ಸಹಭಾಗಿಯಾಗಿದ್ದೆ. ಚಾಲನೆ ನೀಡುವ ವೇಳೆಗೆ ಚುನಾವಣೆ ಬಂದು ಬಸವರಾಜ್‌ರವರು ಮಾಜಿಯಾದರು ಯೋಜನೆ ನೆನೆಗುದಿಗೆ ಬಿತ್ತು.

 ನಂತರ ಆಗಿನ ಕೊರಟಗೆರೆ ಶಾಸಕರಾದ ಶ್ರೀ ಸುಧಾಕರ್‌ಲಾಲ್‌ರವರು ಪ್ರಯತ್ನ ಪಟ್ಟರು ಫಲಪ್ರಧವಾಗಲಿಲ್ಲ. ಪ್ರಸ್ತುತ ಮತ್ತೆ ಚಾಲನೆ ಬರುವ ಆಶಾಭಾವನೆಯಿದೆ. ಹೂಡಿಕೆದಾರರು ಮುಂದೆ ಬಂದಲ್ಲಿ ಮಾತ್ರ ಯೋಜನೆ ಗುರಿ ತಲುಪಲಿದೆ.

 ದಿನಾಂಕ:12.09.2020 ರಂದು ಸಿದ್ಧರಬೆಟ್ಟದ ಸುತ್ತ ಮುತ್ತಲಿನ ಅವಕಾಶಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿದೆವು.  ಜೊತೆಯಲ್ಲಿ ಕುರುಂಕೋಟೆ ಗ್ರಾಮಪಂಚಾಯಿತಿಯ ಸಂಸದರ ಆದರ್ಶ ಗ್ರಾಮ ಯೋಜನೆಯ ಕನಸುಗಾರ ಶ್ರೀ ಶಿವರುದ್ರಯ್ಯನವರು, ತುಮಕೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶ್ರೀ ಎಂ.ಪಿ.ಮಹೇಶ್ ರವರು, ತುಮಕೂರು ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾದ ಶ್ರೀ ವಿಜಯ್‌ಕುಮಾರ್ ರವರು, ವಕೀಲರಾದ ಶ್ರೀ ಲೋಕೇಶ್‌ರವರು ಇನ್ನೂ ಮಂತಾದವರು ಇದ್ದರು.

 ಸ್ನೇಹಿತರಾದ ಶ್ರೀ ಸತ್ಯಾನಂದ್‌ರವರು ಸಾರ್ ಇಂದು 10.45 ರಿಂದ 12.45 ರವರೆಗೆ ವಿಶೇಷ ದಿನ, ನಾವು ಸಂಕಲ್ಪ ಮಾಡಿದ್ದು ನೆರವೇರುತ್ತದೆ ಎಂದು ಕರೆಮಾಡಿದಾಗ, ಅಲ್ಲಿದ್ದ ಎಲ್ಲರೂ ಭೂಮಿತಾಯಿಗೆ ನಮಿಸಿ ಆಯುಷ್ ಪಾರ್ಕ್ ಸ್ಥಾಪನೆಯಾಗಲಿ ಎಂದು ಸಂಕಲ್ಪ ಮಾಡಿದ್ದೇವೆ. ಪಲಿತಾಂಶ ಕಾದು ನೋಡೋಣ.