TUMAKURU:SHAKTHI PEETA FOUNDATION
ಇಂದು ನೀರಾವರಿ ಶಿಲ್ಪಿ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನ, ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ದೃಢ ಸಂಕಲ್ಪ ಮಾಡಿ ಒಂದು ವರ್ಷದೊಳಗೆ ’ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಜಾರಿಗೊಳಿಸಿ ರಾಜ್ಯದ ನದಿ ನೀರನ್ನು ಪ್ರತಿಯೊಂದು ಗ್ರಾಮಕ್ಕೂ ಹಂಸಕ್ಷೀರ ನ್ಯಾಯದಂತೆ ಹಂಚಿಕೆ ಮಾಡುವ ಮೂಲಕ ’ನದಿ ನೀರಿನ ಭಗವದ್ಗೀತೆ’ ಸಿದ್ಧಗೊಳಿಸಲು ಮುಂದಾಗುವರೇ? ಕಾದು ನೋಡಬೇಕು.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೂ ಕುಡಿಯುವ ನೀರು ಯೋಜನೆಯನ್ನು 2023 ರೊಳಗೆ ಪೂರ್ಣಗೊಳಿಸಲು ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಎಲ್ಲಾ ರಾಜ್ಯಗಳಿಗೂ ಖಡಕ್ ಸಂದೇಶ ರವಾನಿಸಿದ್ದಾರೆ.
ಇದೇ ತಿಂಗಳು ಅಂದರೆ ದಿನಾಂಕ:17.09.2020 ರಂದು ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಜನ್ಮ ದಿನದಂದು ‘ರಾಜ್ಯದ ನದಿ ಜೋಡಣೆ’ ಯೋಜನೆ ಘೋಶಿಸಲು ಕೆಲವರು ಮುಖ್ಯ ಮಂತ್ರಿಗಳಿಗೆ ಸಲಹೆ ನೀಡಿದ್ದಾರಂತೆ.
ರಾಜ್ಯದ ನೀರಾವರಿ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ಬಹುತೇಕ ಮುಖ್ಯ ಇಂಜಿನಿಯರ್‌ಗಳು ನಿವೃತ್ತ ರಾಗಲು ಒಂದೆರಡು ವರ್ಷಗಳು ಮಾತ್ರ ಇವೆ. ಅವರಿಗೂ ಸಹ ನಮ್ಮ ಅವಧಿಯಲ್ಲಿಯೇ ನದಿ ನೀರಿನ ಹಂಚಿಕೆ ಮಾಡಿದ ತೃಪ್ತಿಕರ ಜೀವನ ನಮ್ಮದಾಗಲಿ ಎನ್ನುವ ಹಂಬಲದಲ್ಲಿದ್ದಾರೆ ಎಂಬ ವದಂತಿಯಿದೆ.
ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಈ ಅವಧಿಯಲ್ಲಿ ಬೃಹತ್ ನೀರಾವರಿ ಯೋಜನೆಗಳಿಗೆ ಆರ್ಥಿಕ ಸಂಕಷ್ಟವಾದರೂ, ನದಿ ನೀರಿನ ಹಂಚಿಕೆ ಮಾಡಲು ಯಾವುದೇ ತೊಂದರೆಯಿಲ್ಲ. ಹಠ ಮಾಡಿ ಜಲಸಂಪನ್ಮೂಲ ಸಚಿವಾರಾಗಿದ್ದು, ಸಮರೋಪಾದಿಯಲ್ಲಿ ‘ರಾಜ್ಯದ ಪಾಲಿನ ನದಿ ನೀರಿನ ಮಾಸ್ಟರ್ ಪ್ಲಾನ್ ರೂಪಿಸಲು ಕೊಲ್ಲಾಪುರದ ಶಕ್ತಿದೇವತೆ ಮಹಾಲಕ್ಷ್ಮೀಯ ಮುಂದೆ ಸಂಕಲ್ಪ ಮಾಡಿದ್ದಾರೆ ‘ ಎಂಬ ಸುದ್ಧಿಯೂ ಇದೆ.
ಮಾನ್ಯ ಮುಖ್ಯ ಮಂತ್ರಿಗಳು ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿ ಮೇರೆಗೆ ಈಗಾಗಲೇ ನದಿ ನೀರಿನ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಲು ಆದೇಶಿಸಿದ್ದಾರೆ. ಕಳೆದ ಆಯವ್ಯಯದಲ್ಲೂ ಮಂಡಿಸಿದ್ದಾರೆ.
ರಾಜ್ಯದ ಯೋಜನಾ ಇಲಾಖೆ ನೀತಿ ಆಯೋಗದಲ್ಲೂ ನೀರಾವರಿ ಯೋಜನೆ ಮಾಡುವುದಾಗಿ ಘೋಶಿಸಿದೆ. ಮಾನ್ಯ ಮುಖ್ಯ ಮಂತ್ರಿಗಳು ಕೆರೆಗಳಿಗೆ ನದಿ ನೀರು, ನದಿ ಜೋಡಣೆ ಮತ್ತು ಇಸ್ರೇಲ್ ಮಾದರಿ ನೀರಾವರಿ ಯೋಜನೆ ರೂಪಿಸಲು ಅನುದಾನ ನೀಡಲು ಮಾನ್ಯ ಪ್ರಧಾನಿವರಿಗೆ ಮೂರು ಪತ್ರಗಳನ್ನು ಬರೆದಿದ್ದಾರೆ.
ಈ ಎಲ್ಲಾ ಹಿನ್ನಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ರಾಜ್ಯ ಮಟ್ಟದ ದಿಶಾ ಪ್ರಥಮ ಸಭೆಯನ್ನು ದಿನಾಂಕ:06.10.2020 ರಂದು ನಡೆಸಲಿದ್ದಾರೆ. ಅಂದು ಗ್ರಾಮಪಂಚಾಯತ್‌ವಾರು ಕುಡಿಯುವ ನೀರಿಗೆ ನದಿ ನೀರು ನಿಗದಿಗೊಳಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ಜೊತೆಗೆ ಬಳಸಲು ಸಾಧ್ಯತೆ ಇರುವ ನದಿ ನೀರಿನ ಅಲೋಕೇಷನ್ ಮಾಡಿ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು ಮಹತ್ವದ ನಿರ್ಣಯ ಕೈಗೊಳ್ಳುವ ಭರವಸೆಯಿದೆ.
‘ನದಿ ನೀರಿನ ಭಗವದ್ಗೀತೆಗೆ ಸಿದ್ಧತೆ’ ಯಾಗುವವರೆಗೂ ನಮ್ಮ ಸಂಸ್ಥೆ ನಿರಂತರವಾಗಿ ಕಡತದ ಅನುಸರಣೆ ಮಾಡಲು, ಆಯಾ ಅಧಿಕಾರಿಗಳ ಟೇಬಲ್ ಮುಂದೆ ಕುಳಿತು ಕೊಳ್ಳುವ ನಿನೂತನ ಚಳುವಳಿ ಮಾಲಕ ಶ್ರಮಿಸಲು ಇಂದು ದೃಢ ಸಂಕಲ್ಪ ಮಾಡಿದೆ.