22nd November 2024
Share

TUMAKURU:SHAKTHIPEETA FOUNDATION

 ನಮ್ಮ ರಾಜ್ಯದಲ್ಲಿಯೇ ಹುಟ್ಟಿ, ನಮ್ಮ ರಾಜ್ಯದಲ್ಲಿಯೇ ಹರಿದು ಸಮುದ್ರ ಸೇರುವ ಯಾವುದೇ ವಿವಾದವಿಲ್ಲದ ನೀರಿನಲ್ಲಿ ಕನಿಷ್ಠ ಶೇ 25  ರಷ್ಟು ಅಂದರೆ ಸುಮಾರು 400 ರಿಂದ 500 ಟಿ.ಎ.ಸಿ ಅಡಿ ನೀರಿನ ಬಳಕೆಗೆ ರಾಜ್ಯದ ನದಿ ಜೋಡಣೆ ಯೋಜನೆ ಜಾರಿಗೊಳಿಸಲು ಸಂಪೂರ್ಣವಾಗಿ ನನ್ನ ಬೆಂಬಲವಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವರು, ಎಐಸಿಸಿ ಕಾರ್ಯಾಕಾರಿ ಸಮಿತಿ ಸದಸ್ಯರು ಮತ್ತು ಮಹಾರಾಷ್ಟ್ರದ ಉಸ್ತುವಾರಿಯೂ ಆದ ಶ್ರೀ ಹೆಚ್.ಕೆ.ಪಾಟೀಲ್ ರವರು ಬೆಂಬಲ ವ್ಯಕ್ತಪಡಿಸಿದರು.

 ತುಮಕೂರಿನ ಪ್ರಗತಿ ಟಿವಿ ಮತ್ತು ಪ್ರಜಾಪ್ರಗತಿ ದಿನ ಪತ್ರಿಕೆ ನೀರಾವರಿ ಶಿಲ್ಪಿ ವಿಶ್ವೇಶ್ವರಯ್ಯ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ವಿಶ್ವೇಶ್ವರಯ್ಯ ಕನಸು, ನೀರಾವರಿ ನನಸು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. 

 ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ ಸರ್ಕಾರಗಳು ದೃಢ ನಿರ್ಧಾರ ಕೈಗೊಂಡಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಬೇಧ ಮರೆತು ಬೆಂಬಲ ನೀಡಬೇಕು ಎನ್ನುವ ಧಾಟಿ ಅವರಾದಾಗಿತ್ತು.

 ಈ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ, ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರಿಗೆ  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರಧಿ ಆಧಾರಿತ ಸುಮಾರು 484 ಟಿ.ಎಂ.ಸಿ ಅಡಿ ನೀರಿನ ರಾಜ್ಯದ ನದಿಜೋಡಣೆ ಯೋಜನೆ ರೂಪಿಸಲು ಮನವಿ ಮಾಡಿದ್ದಾರೆ ಎಂದು ಕುಂದರನಹಳ್ಳಿ ರಮೇಶ್ ಸಂವಾದದಲ್ಲಿ ತಿಳಿಸಿದಾಗ ಪ್ರತಿಕ್ರಿಯೇ ನೀಡಿದರು.

 ರಾಜ್ಯದ ನದಿ ಜೋಡಣೆ ಬಗ್ಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜನತಾದಳ ಮೌನವಾಗಿರವುದು ಸರಿಯಲ್ಲ ಎಂಬ ಮಾತಿಗೆ ಸ್ಪಂಧಿಸಿದ ಮಾಜಿ ಸಚಿವರು, ಈ ಯೋಜನೆಯ ಬಗ್ಗೆ ಕಾಂಗ್ರೆಸ್  ಪಕ್ಷದ ನಿಲುವನ್ನು ವ್ಯಕ್ತಪಡಿಸಲು ಮತ್ತೊಮ್ಮೆ ಸೇರಿ ಚರ್ಚಿಸೋಣ ಎಂಬ ಅಭಿಪ್ರಾಯವನ್ನು ಕುಂದರನಹಳ್ಳಿ ರಮೇಶ್ ಅವರಿಗೆ ತಿಳಿಸಿದರು. ರಾಜ್ಯ ಸರ್ಕಾರ ಕೈಗೊಂಡಿರುವ ಯೋಜನೆಗಳ ಪ್ರಸ್ತಾವನೆಯ ಬಗ್ಗೆ ಅವಲೋಕನ ಮಾಡಲು ಅವರ ಮನಸ್ಸು ತುದಿಗಾಲಲ್ಲಿ ನಿಂತಿತ್ತು.

 ದಿವಂಗತ ಕೆ.ಹೆಚ್.ಪಾಟೀಲ್‌ರವರ ಗರಡಿಯಲ್ಲಿ ಬೆಳೆದಿರುವ ರಾಜ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರ ಮತ್ತು ಕೆ.ಹೆಚ್.ಪಾಟೀಲ್‌ರವರ ಮಾನಸ ಪುತ್ರರಂತಿದ್ದ ಜಿ.ಎಸ್.ಬಸವರಾಜ್ ರವರ ಕನಸಿನ ಯೋಜನೆಗೆ ಹೆಚ್.ಕೆ.ಪಾಟೀಲ್‌ರವರು ಬೆಂಬಲ ನೀಡಿದ್ದು. ದಿವಂಗತ ಕೆ.ಹೆಚ್.ಪಾಟೀಲ್ ರವರೇ ಅವರ ಮೂಲಕ ಹೇಳಿಸಿದಂತಿದೆ.

 ನೀರಾವರಿ ಹೋರಾಟಗಾರಾದ ಶ್ರೀ ಅಂಜನೇಯ ರೆಡ್ಡಿಯವರು ರಾಜ್ಯದ ನದಿ ಜೋಡಣೆ ಬಗ್ಗೆ ಶ್ರೀ ಜಿ.ಎಸ್.ಬಸವರಾಜ್‌ರವರು ದೆಹಲಿಯಿಂದ ಬಂದ ತಕ್ಷಣ ರೂಪುರೇಷೆ ನಿರ್ಧರಿಸೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬರೆದ ಮೂರು ಪತ್ರಕ್ಕೆ ಕೇಂದ್ರ ಸರ್ಕಾರ ಇದೂವರೆಗೂ ಯಾವುದೇ ಉತ್ತರ ನೀಡಿಲ್ಲ ಎಂಬುದೇ ಒಂದು ಯಕ್ಷ ಪ್ರಶ್ನೆಯಾಗಿದೆ. ಸಾಮಾನ್ಯರು ಬರೆದ ಪತ್ರಕ್ಕೆ ಪ್ರತಿಕ್ರಿಯೇ ನೀಡುವ ಪಿಎಂಓ ಹೀಗೇಕೆ ಮಾಡಿದೆ. ಆ ಪತ್ರಗಳ ಉತ್ತರಕ್ಕೆ ನಾವೂ ಬಿದಿಗೀಳಿಯಲೇ ಬೇಕು ಎಂಬ ವಾದ ಅವರದಾಗಿದೆ.

 ಪ್ರಜಾಪಗತಿ ಸಂಪಾದಕರಾದ ಶ್ರೀ ಎಸ್.ನಾಗಣ್ಣ, ಶ್ರೀ ಮಧು, ಶ್ರೀಮತಿ ಶಿಲ್ಪ, ಶ್ರೀ ಸಾ.ಚಿ. ರಾಜಕುಮಾರ್, ಶ್ರೀ ಹರೀಶ್ ಆಚಾರ್ಯ ರವರ ತಂಡ ಹೆಚ್.ಕೆ.ಪಾಟೀಲ್‌ರವರು ರಾಜ್ಯದ ನದಿ ಜೋಡಣೆಗೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಜನತಾದಳದ ಧುರೀಣರಾದ ಶ್ರೀ ಹೆಚ್.ಡಿ.ದೇವೆಗೌಡರವರ ಅಭಿಪ್ರಾಯಕ್ಕಾಗಿ ಕಾರ್ಯಕ್ರಮ ಆಯೋಜಿಸಲು ಸಜ್ಜಾದಂತಿದೆ.

 ಮುಂದಿನ ವರ್ಷ ಆಚರಿಸುವ ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯ ವೇಳೆಗೆ ರಾಜ್ಯ ಸರ್ಕಾರ ರಾಜ್ಯದ ನದಿ ಜೋಡಣೆಗೆ ಸ್ಪಷ್ಟ ರೂಪುರೇಷೆ ಪ್ರಕಟಿಸಲೇ ಬೇಕಿದೆ. ಕೇಂದ್ರ ಸರ್ಕಾರವೂ ಸ್ಪಷ್ಟ ಅಭಿಪ್ರಾಯ ವ್ಯಕ್ತ ಪಡಿಸಬೇಕಿದೆ. 40 ಜನ ಸಂಸದರ ನಿದ್ದೆ ಕೆಡಿಸಿದರೆ ಮಾತ್ರ ಈ ಯೋಜನೆ ಗುರಿತಲುಪಲಿದೆ.

ಸಂವಾದ ರಾಜ್ಯದ ನದಿ ಜೋಡಣೆಗೆ ರಾಜ್ಯದ ಸರ್ವಪಕ್ಷಗಳ ಅಭಿಪ್ರಾಯಕ್ಕೆ ಚಾಲನೆ ನೀಡಿದೆ ಎಂದರೆ ತಪ್ಪಾಗಲಾರದು.