12th September 2024
Share

TUMAKURU:SHAKTHIPEETA FOUNDATION

ಸಂಸದರ ಆದರ್ಶ ಗ್ರಾಮ ಯೋಜನೆ (ಎಸ್..ಜಿ.ವೈ) ಇದರ ಕಾರ್ಯಾನುಷ್ಠಾನಕ್ಕಾಗಿ

ಪ್ರವರ್ತಕರ ಸಮಿತಿ (ಪ್ರಮೂಟರ್‍ಸ್ ಕಮಿಟಿ):

ಇದು ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಯಾಗಿರುತ್ತದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರತಿ ಹಳ್ಳಿಯಿಂದಲೂ ಒಬ್ಬರು ಹಿರಿಯರು, ಒಬ್ಬ ಯುವಕ/ಯುವತಿ ಪ್ರತಿನಿಧಿಗಳಾಗಿರುತ್ತಾರೆ. ಅಗತ್ಯವೆನಿಸಿದರೆ 2/3 ಮಹಿಳೆಯರನ್ನು ತೆಗೆದುಕೊಳ್ಳಲಾಗುವುದು. ಗ್ರಾ.ಪಂ. ಅಧ್ಯಕ್ಷರ, ಉಪಾಧ್ಯಕ್ಷರ ಸಲಹೆಯಂತೆ ಇದನ್ನು ರೂಪಿಸಲಾಗುವುದು; ಒಬ್ಬರು ಸಂಚಾಲಕರಾಗಿರುತ್ತಾರೆ.

ಮೊದಲನೆಯ ಸಭೆಯಲ್ಲಿ:

                ಮಾನ್ಯ ಪ್ರಧಾನಿಯರ, ಮಾನ್ಯ ಗ್ರಾಮಾಭಿವೃದ್ಧಿ ಸಚಿವರ ಮತ್ತು ನಮ್ಮ ಸಂಸದರ ಆಶಯ ಮತ್ತು ಉದ್ದೇಶಗಳನ್ನು ಸ್ಪಷ್ಟಪಡಿಸಲಾಗುವುದು. ಮೂರು ಸಮಾಲೋಚನಾ ತಂಡಗಳನ್ನು ರೂಪಿಸಿ – ಪ್ರತಿಕಂಡವೂ

  1. ನಮ್ಮ ಗ್ರಾಮ ಪಂಚಾಯಿತಿಗೆ ಆಗಬೇಕಾದ ಕಾರ್ಯಗಳು,
  2. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಾದ ಕಾರ್ಯಗಳು,
  3. ನಮ್ಮ ಗ್ರಾಮದ ನೆಮ್ಮದಿಯನ್ನು ಕೆಡಿಸುತ್ತಿರುವ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಕೆಲವು ಸಮಸ್ಯೆಗಳು,
  4. ನಾವು ಮತ್ತು ನಮ್ಮ ಗ್ರಾಮ,  ಬೇರೆಯವರಿಗೆ ಮಾದರಿಯಾಗಿ ಕಾಣಬೇಕಾದರೆ, ನಾವು ಹೀಗೆ ನಡೆದುಕೊಳ್ಳಬೇಕಾಗಿದೆ:

ಕುರಿತು ಸಮಾಲೋಚಿಸಿ, ಪ್ರತಿಯೊಂದಕ್ಕೂ 4-5 ಸಲಹೆ ಸಂಗತಿಗಳನ್ನು ಪಟ್ಟಿಮಾಡಬೇಕು-

                (ಸುಮಾರು ಒಂದು ಗಂಟೆ ಅವಧಿಯಲ್ಲಿ)

                ವರದಿಗಳ ಮಂಡನೆ ಮತ್ತು ಚರ್ಚೆ

                ಅನಿಸಿಕೆಗಳು

                ತೀರ್ಮಾನಗಳು

ಗ್ರಾಮಕಾರ್ಯ ನಿರ್ವಾಹಕ ಸಮಿತಿಗಳು:

                ಪ್ರವರ್ತಕ ಸಮಿತಿಯಲ್ಲಿರುವ, ಆಯಾ ಗ್ರಾಮದ ಹಿರಿಯರು, ಯುವಕ/ಯುವತಿಯರ ಮುಂದಾಳುತನದಲ್ಲಿ ಈ ಗ್ರಾಮ ಕಾರ್ಯ ನಿರ್ವಾಹಕ ಸಮಿತಿಗಳನ್ನು ರಚಿಸಲಾಗುವುದು.

                ಆಯಾ ಗ್ರಾಮದಲಿರಬಹುದಾದ ಎಲ್ಲ ಜಾತಿಯ ಪ್ರಾತಿನಿಧ್ಯವಿರುವಂತೆ ರಚಿಸಲಾಗುವುದು.

                2/3 ಮಹಿಳೆಯರು ಪ್ರತಿನಿಧಿಗಳಾಗಿರಲು ಗಮನ ನೀಡಲಾಗುವುದು

                ಸಂಚಾಲಕರ ಮುಂದಾಳುತನದಲ್ಲಿ ಆಯಾ ಗ್ರಾಮದ ಸಮಿತಿ ಸಭೆ ಸೇರಿ, ಮೇಲೆ ಸೂಚಿಸಿರುವ ೨,೩ ಮತ್ತು ೪ನ್ನು ಕುರಿತು ಸಮಾಲೋಚಿಸಿ ಪಟ್ಟಿ ತಯಾರಿಸಬೇಕಾಗುತ್ತದೆ. ಪ್ರವರ್ತಕ ಸಮಿತಿ ಸಂಚಾಲಕರಿಗೆ ಸಲ್ಲಿಸಬೇಕಾಗುತ್ತದೆ.

ಸಮಗ್ರ ಗ್ರಾಮ ಸಭೆ:

ಪ್ರವರ್ತಕ ಸಮಿತಿಯವರು ಮತ್ತು ಆಯಾ ಗ್ರಾಮ ಕಾರ್ಯ ನಿರ್ವಾಹಕ ಸಮಿತಿಗಳ ಒಟ್ಟು ಸಭೆ ಇದಾಗಿರುತ್ತದೆ.

ಸಮಗ್ರ ಗ್ರಾಮ ಸಭೆಯಲ್ಲಿ:

  ಗ್ರಾಮದವರ ಉತ್ಸಾಹ ಮತ್ತು ಸಹಭಾಗಿತ್ವ ಇದ್ದ ಕಾರಣದಿಂದಲೇ, ಸಹಕಾರ ಮತ್ತು ಹೊರಗಡೆಯಿಂದ ದೊರಕಿದ ಎಲ್ಲಾ ಸೌಲಭ್ಯ, ಸಲಹೆ ಮತ್ತು ಸಹಾಯವನ್ನು ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿಯೇ ಹೆಸರು ಪಡೆದ ಗುಜರಾತಿನ ಪುನ್ಸಾರಿ ಗ್ರಾ. ಪಂ. ತೆಲಂಗಾಣದ ಗಂಗಾದೇವಿಪಳ್ಳಿ ಗ್ರಾ. ಪಂ. ಮತ್ತು ಮಹಾರಾಷ್ಟ್ರದ ಹವಾರ್ ಬಜಾರ್ ಗ್ರಾ. ಪಂ. ಗಳನ್ನು ಸಭೆಗೆ ತಿಳಿಸಲಾಗುವುದು; ಹಾಗೆಯೇ ಏನೆಲ್ಲ ಒದಗಿ ಬರುವ ಅವಕಾಶಗಳಿದ್ದರೂ, ಗ್ರಾಮದಲ್ಲಿ / ಗ್ರಾಮ ಪಂಚಾಯಿತಿಯಲ್ಲಿ ಪರಸ್ಪರ ಸಹಕಾರ, ಏಕತೆ ಕಂಡು ಬರದ ಕಾರಣ, ದುರಭ್ಯಾಸಗಳಿಂದ ದೂರವಾಗದ ಕಾರಣ, ಮೇಲಾಗಿ ತಾವೇ ಮಾಡಬಹುದಾದ ಸಾಮಾನ್ಯವಾದ ಕೆಲಸ ಕಾರ್ಯಗಳನ್ನು ಮಾಡುವ ಮನೋಧರ್ಮ ಕಂಡು ಬರದ ಕಾರಣ, ಅಭಿವೃದ್ಧಿಯನ್ನು ಕಾಣಲಾಗದೆ ಹೇಗಿದ್ದವೋ ಹಾಗೆಯೇ ಉಳಿಯುವಂತಾಗಿದೆ ಎಂಬುದನ್ನೂ ವಿವರಿಸಲಾಗುವುದು.

ಕೊನೆಯದಾಗಿ: ನಮ್ಮ ಪ್ರಧಾನಿಯವರ ಆಶಯದಂತೆ ಜನ್‌ಭಾಗೀದಾರಿ ಅಂದರೆ ಜನರ ಸಹಭಾಗಿತ್ವದಲ್ಲಿ;

                ಅಂದರೆ ನಮ್ಮ ಶ್ರಮ, ಸಹಕಾರ, ಮನೋಧರ್ಮ ಮತ್ತು ಮನೋನಿರ್ಧಾರಗಳಿಂದ ಆಗುವ ಕೆಲಸ -ಕಾರ್ಯಗಳು,

ಸರಕಾರ ಹಾಗೂ ವಿವಿಧ ಇಲಾಖೆಗಳ ನೆರವಿನಿಂದ ಆಗಬೇಕಾದವುಗಳ ಕ್ರೋಡೀಕೃತ ರೀತಿಯಲ್ಲಿ ಮಂಡಿಸಿ ಮನವಿರಿಕೆ ಮಾಡಲಾಗುವುದು, ಕಾರ್ಯೋನ್ಮುಖರಾಗಲು ಕೋರಲಾಗುವುದು.

ಆಯಾ ಗ್ರಾಮಗಳಲ್ಲಿರುವ ಯುವ ಪೀಳಿಗೆಯ ಮೂಲಕ ಪ್ರಯತ್ನಿಸಲಾಗುವುದು.

ಸಂಸದರ ಆದರ್ಶ ಗ್ರಾಮ ಯೋಜನೆ (ಎಸ್.ಎ.ಜಿ.ವೈ)

ಪ್ರತಿ ಗ್ರಾಮವೂ ಸ್ವಚ್ಛವಾಗಿರಬೇಕು, ಗ್ರಾಮದ ಎಲ್ಲರೂ ಅಕ್ಷರಸ್ಥರಾಗಿರಬೇಕು, ಅಸ್ಪೃಶ್ಯತೆ ನಿರ್ಮೂಲನವಾಗಿರಬೇಕು, ಗ್ರಾಮಸ್ಥರು ದುರಭ್ಯಾಸಗಳನ್ನು ದೂರವಿರಿಸಬೇಕು, ಗ್ರಾಮದ ವಿವಾದಗಳನ್ನು ಪಂಚಾಯತಿ ಮೂಲಕ ಇತ್ಯರ್ಥ ಮಾಡಿಕೊಳ್ಳುವಂತಹ ವಾತಾವರಣವಿರಬೇಕು, ಬೇರೆ ಗ್ರಾಮದವರಿಗೆ ಮಾದರಿಯಾಗಿರಬೇಕು.

     –ಮಹಾತ್ಮಾ ಗಾಂಧೀಜಿಯವರ ಕನಸು.

ರಾಷ್ಟ್ರಪಿತ ಗಾಂಧೀಜಿಯವರ ಈ ಕನಸನ್ನು ನನಸಾಗಿಸುವ ಮಹತ್ವಾಕಾಂಕ್ಷೆಯಿಂದ ನಮ್ಮ ರಾಷ್ಟ್ರದ ಸಂಸತ್ತು; (ಪಾರ್ಲಿಮೆಂಟ್) ನಮ್ಮ ರಾಷ್ಟ್ರದ ಪ್ರಧಾನಿಯವರಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು, ಮತ್ತು ರಾಷ್ಟ್ರದ ಗ್ರಾಮೀಣಾಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿಯವರು, ಈ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೆ ತರಬಯಸಿರುವುದನ್ನು ಕೃತಜ್ಞತಾ ಪೂರ್ವಕವಾಗಿ ಸ್ವಾಗತಿಸುತ್ತೇವೆ, ಹಾಗೆಯೇ- ಇದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಅಪರೂಪದ ಅವಕಾಶವನ್ನು ನಮ್ಮ ಸಂಸದರಾದ ಸನ್ಮಾನ್ಯ ಜಿ.ಎಸ್. ಬಸವರಾಜು ಅವರು ಗಡಿ ಭಾಗದಲ್ಲಿರುವ ನಮ್ಮ ಚಿಕ್ಕಧಾಳವಟ್ಟ ಗ್ರಾಮ ಪಂಚಾಯಿತಿಗೆ ಕಲ್ಪಿಸಿಕೊಟ್ಟಿರುವುದಕ್ಕಾಗಿ ವಂದಿಸುತ್ತ ಯಥಾ ಸಾಮರ್ಥ್ಯ ತೊಡಗಿಸಿಕೊಳ್ಳುತ್ತೇವೆ.

ಪ್ರವರ್ತಕರು (Promoters)                                                           ಸಮಾಲೋಚನಾ ಸಭೆ / ದಿನಾಂಕ:

ಹೆಸರು                                                                                                     ಗ್ರಾಮ

ನಮ್ಮ ಗ್ರಾಮ ಪಂಚಾಯಿತಿಗೆ ಆಗಬೇಕಾದ ಕೆಲಸಗಳು:      

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಕೆಸಲಗಳು:

ನಮ್ಮ ಹಳ್ಳಿಗಳ ನೆಮ್ಮದಿಯನ್ನು ಕೆಡಿಸುತ್ತಿರುವ ಕೆಲವು ಸಮಸ್ಯೆಗಳು:  

ನಾವು ಮತ್ತು ನಮ್ಮ ಗ್ರಾಮ, ಬೇರೆಯವರಿಗೆ ಮಾದರಿಯಾಗಿ ಕಾಣಬೇಕಾದರೆ ನಮ್ಮ ಅಭಿಪ್ರಾಯದಲ್ಲಿ ಹೀಗೆ ನಡೆದುಕೊಳ್ಳಬೇಕಾಗಿದೆ:         

                ವರದಿಗಳ ಮಂಡನೆ ಮತ್ತು ಚರ್ಚೆ

                ಅನಿಸಿಕೆಗಳು

                ತೀರ್ಮಾನಗಳು