15th September 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ರಾಜ್ಯ ಮಟ್ಟದ ದಿಶಾ ಸಮಿತಿಗೆ ರಾಜ್ಯದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಪಕ್ಷೇತರ ಸದಸ್ಯರು ತಲಾ ಒಬ್ಬರು ಸದಸ್ಯರು ಸೇರಿದಂತೆ ನಾಲ್ಕು ಜನ ಲೋಕಸಭಾ ಸದಸ್ಯರನ್ನು ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುತ್ತದೆ. ಒಬ್ಬರು ರಾಜ್ಯಸಭಾ ಸದಸ್ಯರು ಇರಲಿದ್ದಾರೆ.

 ಅದೇ ರೀತಿ ರಾಜ್ಯ ಸರ್ಕಾರದಿಂದ ಕನಿಷ್ಟ ಆರು ಜನ ಶಾಸಕರನ್ನು ಆಯಾ ರಾಜ್ಯದ ಮುಖ್ಯ ಮಂತ್ರಿಗಳು ನಾಮನಿರ್ದೇಶನ ಮಾಡುತ್ತಾರೆ. ಇದರಲ್ಲಿ ವಿರೋಧ ಪಕ್ಷದ ಕನಿಷ್ಟ ಇಬ್ಬರು ಶಾಸಕರುಗಳು ಇರಬೇಕು.

 ಕೇಂದ್ರ ಸರ್ಕಾರ ಈ ಸಮಿತಿಯ ಮಾರ್ಗ ಸೂಚಿಗಳಲ್ಲಿಯೇ ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಾತಿನಿಧ್ಯ ನೀಡಿದೆ. ಕೇಂದ್ರ ಸರ್ಕಾರದ ಅನುದಾನದ ಸದ್ಭಳಕೆಗೆ ಎಲ್ಲಾ ಪಕ್ಷಗಳು ಹೊಣೆಹೊರಬೇಕಾಗುತ್ತದೆ.

 ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಇದ್ದಾಗ ಅವರದೇ ಪಕ್ಷದ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್‌ರವರು ಒಂದು ಗಂಭೀರ ಆರೋಪ ಮಾಡಿದ್ದರು.

 ಕಳ್ಳಗಂಟು ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳಲ್ಲಿಯೂ ಇದೆ. ಬಡ್ಡಿ ಆಸೆಗಾಗಿ ಸಾವಿರಾರು ಕೋಟಿ ಹಣವನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡುತ್ತಾರೆ. ಕಾಲಮಿತಿಯಲ್ಲಿ ಹಣವನ್ನು ಖರ್ಚು ಮಾಡುವುದಿಲ್ಲಾ ಎಂಬ ಸುದ್ಧಿ ಮುನ್ನಲೆಗೆ ಬಂದಿತ್ತು.

 ಅಫೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣವರು ಸಹ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅನುದಾನ ಸುಮಾರು ಒಂದು ಲಕ್ಷ ಕೋಟಿ ಹಣ ಬ್ಯಾಂಕಿನಲ್ಲಿ ಡಿಪಾಸಿಟ್ ಇದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

 ದಿನಾಂಕ:06.10.2020 ರಂದು ನಡೆಯುವ ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ಈ ವಿಷಯವನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಚರ್ಚೆಗೆ ಮಂಡಿಸಿದ್ದಾರೆ. ಕೆಲವು ಅಧಿಕಾರಿಗಳು ಖಾಸಗಿಯಾಗಿ ಹೇಳುವ ಪ್ರಕಾರ ಈ ತರಹದ ಡಿಪಾಸಿಟ್ ಹಣದ ಮಾಹಿತಿಯನ್ನು ಸಂಗ್ರಹಿಸಲೇ ಬೇಕು. ಅನಗತ್ಯವಾಗಿ ಠೇವಣೆ ಇಡುವ ಚಾಳಿಗೆ ಇತಿಶ್ರೀ ಆಡಬೇಕು ಎನ್ನುತ್ತಾರೆ.

 ಕೊರೊನಾ ಮಹಾಮಾರಿಯ ಅವಧಿಯಲ್ಲಿ ಇಂತಹ ಸಾವಿರಾರು ಕೋಟಿ ಹಣ ಬಿ.ಎಸ್.ಯಡಿಯೂಪ್ಪನವರಿಗೆ ವರದಾನವಾಗಲಿದೆ. ಇದೊಂದು ಆಪರೇಷನ್ ಡಿಪಾಸಿಟ್ ಆಂದೋಲನ ರೂಪದಲ್ಲಿ ಪತ್ತೆ ಹಚ್ಚ ಬೇಕು ಎಂಬ ಸಲಹೆಗಳು ಆರಂಭವಾಗಿವೆಯಂತೆ.

 ಸರ್ವಪಕ್ಷಗಳ ಪ್ರತಿನಿಧಿಗಳು ಯಾವ ರೀತಿ ಯೋಜನೆ ರೂಪಿಸುತ್ತಾರೆ ಕಾದು ನೋಡಬೇಕು.