13th November 2024
Share

ಟಿ.ಆರ್.ರಘೋತ್ತಮರಾವ್

TUMAKURU:SHAKTHIPEETA FOUNDATION

 ನಮ್ಮ ದೇಶ ಒಪ್ಪಿಕೊಂಡಿರುವ ಆಡಳಿತ ಸೂತ್ರದ ಅಡಿಯಲ್ಲಿ ಪಂಚಾಯತ್ ಮಟ್ಟದ/ನಗರಗಳ ಮೂಲಭೂತ ಸೌಕರ್ಯ/ಅಭಿವೃಧ್ಧಿಯ ವಿಚಾರದಲ್ಲಿ ಕೆಲವು ಆಯಾಮಗಳಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಸ್ಥಳೀಯ ಆಡಳಿತ-ಈ ಮೂರು ವ್ಯವಸ್ಥೆಗಳಲ್ಲಿ ಸಮನ್ವಯ ಸಾಧಿಸಿಕೊಡು ಪ್ರತಿಯೊಂದು ಯೋಜನೆ  ಸಮರ್ಪಕವಾಗಿ ಕಾಲಮಿತಿಯಲ್ಲಿ ಜಾರಿಯಾಗಲು ಜಿಲ್ಲಾ ಸಮಿತಿ ರಚಿಸಿ ನಿಗಾ ವಹಿಸಲು ಅವಕಾಶವಿದೆ. ಈ ಹಿನ್ನಲೆಯಲ್ಲಿ ರಚನೆಯಾಗಿರುವುದೇ ದಿಶಾ – DISHA- District Development Co ordination & Advisory Committee”

DISHA- District Development Co ordination & Advisory Committee”ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಮಿತಿ ರಚನೆಗೆ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನಿರ್ದೇಶನ ನೀಡಿ, ಈ ಹಿಂದೆ ಅಂದರೆ 27.06.2016   ರಲ್ಲೇ ನೀಡಿದ್ದು, ಹಲವಾರು ವರ್ಷಗಳು ಸಂದಿದೆ. ಈ ಸಮಿತಿಯ  ಸಾಮಾನ್ಯ ಗುರಿ- ಪ್ರತಿಯೊಂದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳಿಗೆ  ವೇಗ ನೀಡಲು ಹಾಗೂ ಉತ್ತಮ ಆಡಳಿತ ಮೂಲಕ,  ಪ್ರತಿಯೊಂದು ಹಳ್ಳಿಗಳಲ್ಲಿ, ಸಮರ್ಪಕವಾಗಿ ಕಾಲಮಿತಿಯಲ್ಲಿ ಜಾರಿಯಾಗಲು ಕಾರಣವಾಗುವಂತೆ ಮಾಡುವುದೇ ದಿಶಾ ಸಮಿತಿಯ  ಮುಖ್ಯ ಉದ್ದೇಶವಾಗಿದೆ.

 ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ರಚನೆಯಾಗಿ, ಇಂದಿಗೆ [21.09.2020]  ಒಂದು ವರ್ಷವಾಗಿದೆ ಅಲ್ಲಿಂದ ಇಲ್ಲಿಯವರೆಗೆ ಈ ಸಮಿತಿಯು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರತಿಯೊಂದು ಸಚಿವಾಲಯದ ಯೋಜನೆ ಜಾರಿಗೆ ನಿಗಾ ಜೊತೆಗೆ ಆಡಳಿತ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಿ ಪ್ರಾಮಾಣಿಕೃತ ಫ಼ಲಿತಾಂಶ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳ ಜಾರಿಯ ಅಂಶ ಪ್ರಮಾಣ ಲೆಕ್ಕಾಚಾರವಾಗಬೇಕಿದೆ.

  ದಿಶಾ ಸಮಿತಿಯ ಸದಸ್ಯರ ಸ್ವಲ್ಪ ಪ್ರಮಾಣದ ಆತ್ಮ ತೃಪ್ತಿಯ ಅಂಶದಲ್ಲಿ ನಾವು ಪೂರ್ಣ ಪ್ರಮಾಣದ ಸಾಧನೆ ಕಂಡು ಕೊಳ್ಳದಿದ್ದರೂ ಯೋಜನೆಗಳ ಜಾರಿಗೆ ಕ್ರಮವಹಿಸಿದ ಉತ್ಸಾಹಿ ಅಧಿಕಾರಿಗಳಿಗೆ ಬೆನ್ನು ತಟ್ಟುವ, ಹಾಗೆಯೇ ಅನುಸರಣೆ ಕ್ರಮವಹಿಸದ ಜಡತ್ವ ಮನೋಭಾವದ ಅಧಿಕಾರಿಗಳಿಗೆ ಸಮಿತಿಯ ಅಧ್ಯಕ್ಷರ ಮೂಲಕ ಸಮಿತಿಯು ಎಚ್ಚರಿಸಿ ಜಾಗೃತರನ್ನಾಗಿ ಮಾಡಲು ಕ್ರಮವಹಿಸಿದೆ, ಈ ಮಧ್ಯೆ ಕೊರೋನ ಮಾರಿ ವೇಗಕ್ಕೆ ಕಡಿವಾಣ ಹಾಕುತ್ತಿದೆ. ಈ ಕಾರಣ ಸಾಧಿಸಬೇಕಾದಿದ್ದು ನೆಲಮಟ್ಟದಲ್ಲೇ ಇದ್ದು, ಬಾಕಿ ಇನ್ನೂ ಇದೆ.

ಒಂದು ವರ್ಷದ ಶುಭ ಸಂದರ್ಭ ದಲ್ಲಿ ನಮ್ಮ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಕುಂದರನಹಳ್ಳಿ ರಮೇಶ್ ಅವರ ಅಭಿವೃಧ್ಧಿ ದೃಷ್ಠಿ ರಾಜ್ಯವ್ಯಾಪಿ ವ್ಯಾಪಿಸಲು ಸನ್ನದ್ದವಾಗಿದೆ. ನಮ್ಮ ರಾಜ್ಯವನ್ನು ಅಭಿವೃಧ್ಧಿಪಡಿಸಿ ಶ್ರೇಯಾಂಕ -1  ಕ್ಕೆ ಏರಿಸಿಸುವುದು, ಈ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರತಿಯೊಂದು ಸಚಿವಾಲಯದ ಪ್ರತಿಯೊಂದು ಯೋಜನೆಯ  ಕನೆಕ್ಟ್ ಆಗುವುದು  ಮತ್ತು ಯೋಜನೆಯ ಲಾಭವನ್ನು ಕೊನೆಯ  ವಾರಸುದಾರವರೆಗೆ ತಲುಪುವಂತೆ ಮಾಡುವುದು ಆಗಿದೆ.

 ಶ್ರೀಯುತರು ಮುಖ್ಯವಾಗಿ ನೀರಾವರಿ ಯೋಜನೆಗಳ ಜಾರಿಗೆ ಹೆಚ್ಚಿನ ಆಶಯ ಕಂಡು ಬರುತ್ತಿದೆ, ಕಾರಣ ಹಳ್ಳಿಗಳಲ್ಲಿ ಕ್ಯಾಪಿಟಲ್ ಫ಼ಾರ್ಮೇಶನ್ ಮತ್ತು ಗ್ರಾಮೀಣ ಅಭಿವೃಧ್ಧಿ ಮೌಲ್ಯಗಳ ಸೂಚ್ಯಂಕ ಏರಿಕೆ ಆದರೆ ಮಾತ್ರ ಸಾಧ್ಯ ಎಂಬುದು ಆಗಿದೆ. ಇದು ನಮ್ಮ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ಮತ್ತು ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ಅವರುಗಳ ಮುಖ್ಯ ಗುರಿ ಅಥವಾ ಮುಖ್ಯ ಹಠ ಅಂತನೇ ಅಂತ ಹೇಳ ಬಹುದಾಗಿದೆ.

  ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಹಲವಾರು ಯೋಜನೆಗಳಿಗೆ ನೂರಕ್ಕೆ ನೂರರಷ್ಟು ಸಾಧನೆಗೆ ಇಂತಿಷ್ಟೇ ವರ್ಷದೊಳಗೆ ಅಗಬೇಕೆಂದು ನಿರ್ಧೇಶಿಸಿರುತ್ತಾರೆ, ಈ ಹಿನ್ನಲೆಯಲ್ಲಿ ದಿಶಾ ಸಮಿತಿಯ ಜವಾಬ್ದಾರಿ ಹೆಚ್ಚಿನದು ಆಗಿ ಸರ್ಕಾರಿ ಆಡಳಿತ ಯಂತ್ರವನ್ನು ಚುರುಕು ಸರ್ಕಾರ ಹಾಗೂ ಅದರ ಆಡಳಿತ ಮುಖ್ಯಸ್ಥರ ಜೊತೆ ಜೊತೆಯಾಗಿ ಮುನ್ನಡೆಯುವ ಕೆಲಸ ಆಗಬೇಕಾಗಿದೆ. ಕಾರಣ ಕೆಲವು ಯೋಜನೆಗಳಿಗೆ ಕಾಲಮಿತಿ ಘೋಶಿಸಲಾಗಿದೆ. ಈ ಯೋಜನೆಗಳ ಅನುಷ್ಠಾನ ಯಾವ ಮಟ್ಟದಲ್ಲಿ ಆಗಿದೆ ಎಂಬ ಬಗ್ಗೆ ಅನಾಲೀಸಿಸ್ ಮಾಡಲು ಎರಡನೇ ವರ್ಷದ ಜಿಲ್ಲಾ ಸಮಿತಿ ಮುಂದಾಗುವುದು ಸೂಕ್ತ.

ಮೋದಿಯವರ ಕಾಲಮಿತಿ ಯೋಜನೆಗಳು ನಮ್ಮ ಜಿಲ್ಲೆಯಲ್ಲಿ ಹೇಗೆ ಜಾರಿ ಆಗಿವೆ?

  1. 2016 ರೊಳಗೆ ದೇಶದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್.
  2. 2019 ರೊಳಗೆ ದೇಶದ ರೈಲ್ವೇ ಹಳಿಗಳಿಗೆ ರೈಲ್ವೇ ಮೇಲು ಸೇತುವೆ ಅಥವಾ ಕೆಳ ಸೇತುವೆ ನಿರ್ಮಾಣ.
  3. 2019 ರೊಳಗೆ ದೇಶದ ಎಲ್ಲಾ ಮನೆಗೆ ವಿಧ್ಯುತ್ ಸಂಪರ್ಕ ಮೂಲಕ ಬೆಳಕು-ಸೌಭಾಗ್ಯ ಯೋಜನೆ.
  4. 2019 ರೊಳಗೆ ದೇಶದ ಎಲ್ಲಾ ಗ್ರಾಮಗಳಿಗೆ ವಿಧ್ಯುತ್ ಸಂಪರ್ಕ ಮೂಲಕ ಬೆಳಕು-ಸೌಭಾಗ್ಯ ಯೋಜನೆ.
  5. 2022 ರೊಳಗೆ ರೈತರ ಅದಾಯ ದುಪ್ಪಟ್ಟು ಯೋಜನೆ.
  6. 2022 ರೊಳಗೆ ದೇಶದ ಎಲ್ಲರಿಗೂ ಸೂರು.
  7. 2022 ರೊಳಗೆ ದೇಶದ ಎಲ್ಲರಿಗೂ ನಿವೇಶನ. 
  8. 2022 ರೊಳಗೆ ಎಲ್ಲಾ ರೈಲ್ವೆ ಮಾರ್ಗಗಳ ವಿಧ್ಯುದ್ದೀಕರಣ.
  9. 2023 ರೊಳಗೆ ಜಲಜೀವನ್ ಮಿಷನ್ ಅಡಿಯಲ್ಲಿ ದೇಶದ ಎಲ್ಲಾ ಮನೆಗೆ ಕೊಳಾಯಿ ಮೂಲಕ ಕುಡಿಯುವ ನೀರು ಸರಬರಾಜು ಯೋಜನೆ.  
  10. 2022 ರೊಳಗೆ ನೀತಿ ಆಯೋಗದ ಅಜೆಂಡಾ @ 75 ಯೋಜನೆ ಜಾರಿ.
  11. ದೇಶದ ಎಲ್ಲಾ ಮನೆಗಳಿಗೂ ಶೌಚಾಲಯ ನಿರ್ಮಾಣ.
  12. 2020  ರೊಳಗೆ ದೇಶದಲ್ಲಿ 100 ಸ್ಮಾರ್ಟ್ ಸಿಟಿ ನಿರ್ಮಾಣ.
  13. 2022 ರೊಳಗೆ ದೇಶದಲ್ಲಿ 444 ಪಾಸ್ ಪೋರ್ಟ್ ಕೇಂದ್ರ ಸ್ಥಾಪನೆ.
  14. ದೇಶದ ಎಲ್ಲಾ ಜಿಲ್ಲೆಗಳಲ್ಲೂ ರಫ್ತು ಹಬ್.
  15. ದೇಶದ ಎಲ್ಲಾ ಜಿಲ್ಲೆಗಳು ಒಂದೊಂದು ಉತ್ಪನ್ನದ ಮೆಗಾ ಕ್ಲಸ್ಟರ್.
  16. ದೇಶದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ.
  17. ಭಾರತ್‌ನೆಟ್ ಯೋಜನೆಯಡಿ ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಇಂಟರ್‌ನೆಟ್ ಸಂಪರ್ಕ.
  18. ದೇಶದ ಅರ್ಹರೆಲ್ಲಾ ಪಲಾನುಭವಿಗಳಿಗೂ ಸಾಮಾನ್ಯ ಭಧ್ರತೆ ಯೋಜನೆ.
  19. ದೇಶದ ಅರ್ಹರೆಲ್ಲಾ ಪಲಾನುಭವಿಗಳಿಗೂ ಆಧಾರ್ ಕಾರ್ಡ್ ವಿತರಣೆ.
  20. ದೇಶದ ಅರ್ಹರೆಲ್ಲಾ ಪಲಾನುಭವಿಗಳಿಗೂ ಜನಧನ್ ಖಾತೆ.
  21. ದೇಶದ ಅರ್ಹರೆಲ್ಲಾ ಪಲಾನುಭವಿಗಳಿಗೂ ಆಯುಷ್ಮಾನ್ ಕಾರ್ಡ್ ವಿತರಣೆ.
  22. 2015 ರಿಂದಲೂ ದೇಶದ ಎಲ್ಲಾ ಸಂಸದರು ವರ್ಷ ಒಂದೊಂದು ಗ್ರಾಮಪಂಚಾಯಿತಿ ಸಂಸದರ ಆದರ್ಶ ಗ್ರಾಮ ಯೋಜನೆ ಜಾರಿ
  23. 2025  ರೊಳಗೆ ದೇಶದ ಜಿಡಿಪಿಯಲ್ಲಿ ಶೇ 2.5 ರಷ್ಟು ಹಣ ಆಯುಷ್ಮಾನ್ ಭಾರತ್ ಯೋಜನೆಗೆ ಮೀಸಲು.

 ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇಲಾಖಾವಾರು ನಮ್ಮ ಜಿಲ್ಲೆ, ಯಾವ ಯೋಜನೆಯಲ್ಲಿ ಯಾವ ಮಟ್ಟದಲ್ಲಿದೆ. ಇದೂ ಈ ವರ್ಷದ ಚರ್ಚಾ ವಸ್ತು ಅಗಲಿ.

  ಈ ಕಾರಣಕ್ಕಾಗಿ ಕಳೆದ ಒಂದು ವರ್ಷದ ಅವಧಿಯ ಪ್ರತಿ ಸಭೆಯಲ್ಲಿ ಕೇಂದ್ರ ಸರಕಾರ/ರಾಜ್ಯ ಸರಕಾರದ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳನ್ನು ಚರ್ಚಿಸಲಾಗುತ್ತಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆ ಅನುಷ್ಠಾನಕ್ಕೆ ಗೊತ್ತುಪಡಿಸಿದ ಮೊತ್ತ, ಬಿಡುಗಡೆಯಾದ ಅನುದಾನ, ಬಳಸಿರುವ ಮೊತ್ತಕ್ಕೆ ಭೌತಿಕ ರಿಯಲ್ ಟೈಮ್ ಪ್ರಗತಿಯನ್ನು ಸಮಿತಿಯು ತಿಳಿಯಬೇಕಿದೆ.

 ಇದಕ್ಕೆಂದೇ ಪ್ರತಿ ಹಳ್ಳಿಯ /ನಗರ ಪ್ರದೇಶ ಜಿಐಎಸ್ ಲೇಯರ್ಸ್ ಸಿದ್ದಪಡಿಸಲು ಜಿಲ್ಲೆಯ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಡೇಟಾ ಸಂಗ್ರಹಿಸಿ, ಈ ಕಾರಣಕ್ಕಾಗಿ ಸಮಿತಿಯು ನೇಮಿಸಿರುವ ಕೋ ಆರ್ಡಿನೇಟರ್ ಕಾಲ ಮಿತಿಯಲ್ಲಿ ಸಲ್ಲಿಸಲು ಸೂಚನೆ ನೀಡಿದೆ. ಹೀಗೆ ದಿಶಾ ಸಮಿತಿಯು ಹೆಚ್ಚಿನ ಉತ್ಸಾಹದಿಂದ ತನ್ನ ಪಾಲಿನ ಕೆಲಸದಲ್ಲಿ ಸಾಗಿದೆ.

 ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲೆಗೊಂದು ಒಂದು ದಿಶಾ ಸಮಿತಿ ಇದೆ ಎಂದು ಜನತೆಗೆ ಅರಿವು ಮೂಡಿಸಿದ ಪ್ರಥಮ ವರ್ಷದ ಸಾಧನೆ ನಿಜಕ್ಕೂ ತೃಪ್ತಿ ತಂದಿದೆ.