13th June 2024
Share

TUMAKURU:SHAKTHI PEETA FOUNDATION

STATE AND DISTRICT LEVEL DISHA COMMITTEES

DISHA- DISTRICT DEVELOPMENT CO ORDINATION & MONITARING COMMITTEE

 ಈ ಹೆಸರಿಗೂ ಸಮಿತಿಗೂ ಹೊಂದಾಣಿಕೆಯಾಗುತ್ತಿಲ್ಲಾ ಇದೇನು ಹೀಗೆ ಇದೆ ಎಂದು ಕೆಲವರು ನನ್ನನ್ನು ಪ್ರಶ್ನಿಸಿದ್ದಾರೆ. ದಿಶಾ ಅಂದರೆ ಸಂಸ್ಕೃತದಲ್ಲಿ ದಿಕ್ಕು’ ಎಂದು ಅರ್ಥವಂತೆ, ಅಬ್ರಿವೇಷನ್ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ.

 1999 ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಶ್ರೀ ಜಿ.ಎಸ್.ಬಸವರಾಜ್‌ರವರು ಸಂಸದರಾಗಿ ಆಯ್ಕೆಯಾಗಿದ್ದರು. ನನ್ನ ಗಮನಕ್ಕೆ ಅಂದು ಬಂದಿದ್ದು ಲೋಕಸಭಾ ಸದಸ್ಯರು ಜಿಲ್ಲೆಯಲ್ಲಿ ಯಾವುದೇ ಒಂದು ಕಮಿಟಿಗೂ ಅಧ್ಯಕ್ಷರಾಗಿಲ್ಲ. ಕೇವಲ ಸದಸ್ಯರಾಗಿ ಎಲ್ಲಾ ಸಭೆಗಳಿಗೆ ಭಾಗವಹಿಸುತ್ತಿದ್ದರು.

 ನಾನೂ ಅಂದಿನ ಪ್ರಧಾನಿಯವರಾದ ಶ್ರೀ ಅಟಲ್ ಬಿಹಾರಿ ವಾಜಪೇಯಿರವರು ಸೇರಿದಂತೆ ಕೇಂದ್ರ ಸರ್ಕಾರದ ಆನೇಕ ಸಚಿವರಿಗೆ ಎಂಪಿಯವರಿಂದ ಪತ್ರವನ್ನು ಬರೆಸಿದೆ. ಕಾಕತಾಳೀಯ ಬರೆಸಿದ ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ವಿಜಿಲೆನ್ಸ್ & ಮಾನಿಟರಿಂಗ್ ಸಮಿತಿ’ ರಚನೆಯಾಗಿ ಆದೇಶ ಬಂದಿದ್ದು ಇತಿಹಾಸ.

 ತುಮಕೂರು ಜಿಲ್ಲಾ ಮಟ್ಟದ ಸಮಿತಿಗೆ ನನ್ನನ್ನು ಅಂದು ಸಹ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಶ್ರೀ ಜಿ.ಎಸ್.ಬಸವರಾಜ್‌ರವರು  ನೇಮಿಸಿದ್ದರು. ನಂತರ ದಿನಾಂಕ:27.06.2016 ರಲ್ಲಿ ಈ ಸಮಿತಿಯ ಹೆಸರು ಬದಲಾಯಿಸಿ ದಿಶಾ ಹೆಸರಿಟ್ಟಿದ್ದು ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಸರ್ಕಾರ.

 ಈ ಭಾರಿ ಸಂಸದರಾದ ನಂತರ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತೆ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ತುಮಕೂರು ಜಿಲ್ಲಾ ಮಟ್ಟದ ಸಮಿತಿಗೆ ನೇಮಿಸಿದರು. ಬಹುಷಃ ಪ್ರಥಮ ಸಭೆ ನಡೆದು ನನ್ನನ್ನು ನೇಮಿಸಿದ ದಿವಸ(21.09.2020) ನಾನು ಉತ್ತರಖಂಡದಲ್ಲಿ ಶಕ್ತಿಪೀಠಗಳ ದರ್ಶನದ ಪ್ರವಾಸದಲ್ಲಿದ್ದೆ.

 ನಾನೂ ಮೊದಲು ದಿಶಾ ಮಾರ್ಗದರ್ಶಿ ಸೂತ್ರಗಳನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಂಡೆ. ದಿಶಾ ಸಮಿತಿಯ ಪವರ್ ಏನು? ಎಂಬ ಬಗ್ಗೆ ಅಧಿಕಾರಿಗಳಿಗೆ ಮತ್ತು ಜಿಲ್ಲೆಯ ಜನತೆಯ ಅರಿವಿಗೆ ತರಲಾರಂಭಿಸಿದೆ.

 ಜನ ಮೊದ ಮೊದಲು ನಾನು ಯಾವೊದೋ ಇನ್ನೊಂದು ಸಮಿತಿ ರಚಿಸಿದ್ದಾನೆ, ಎಂದು ತಿಳಿದು ಕೊಂಡಿದ್ದರು, ಇದು ಕೇಂದ್ರ ಸರ್ಕಾರದ ಸಮಿತಿ, ಇಷ್ಟೊಂದು ಪವರ್ ಈ ಸಮಿತಿಗೆ ಇದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ.

 ಸ್ವತಃ ಜಿ.ಎಸ್.ಬಸವರಾಜ್‌ರವರೇ ಗೈಡ್‌ಲೈನ್ ಪಡೆದು ಓದಿದರು. ತುಮಕೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ಅವರು ಸಹ ಗೈಡ್‌ಲೈನ್ ಓದುತ್ತಿರುವ ವಿಷಯವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಕಾಕತಾಳೀಯವಾಗಿ ಅವರೇ ಇಂದು ರಾಜ್ಯಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

 ದೇಶದ ಎಲ್ಲಾ ರಾಜ್ಯಗಳಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಯದ ಪ್ರಧಾನ ಕಾರ್ಯದರ್ಶಿರವರು ರಾಜ್ಯಮಟ್ಟದ ದಿಶಾ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ದೇಶದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿಯಾಗಿದ್ದಾರೆ, ನಮ್ಮ ರಾಜ್ಯದಲ್ಲಿ ಮಾತ್ರ ಜಿಲ್ಲಾಪಂಚಾಯತ್ ಸಿಇಓ ರವರು ಸದಸ್ಯಕಾರ್ಯದರ್ಶಿಯಾಗಿದ್ದಾರೆ ಇದು ಸರಿಯಲ್ಲ ಎಂಬುದು ನನ್ನ ಅನಿಸಿಕೆ.

 ಈ ಒಂದು ವರ್ಷದ(21.09.2020 ರಿಂದ 21.09.2020) ಅವಧಿಯಲ್ಲಿ ನಾನು ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದೀರಿ ಎಂದು ಅಧಿಕಾರಿಯೊಬ್ಬರು ನನಗೆ ಹೇಳಿದ ಮಾತು. ಸಾರ್ ಅಧಿಕಾರಿಗಳ ದೃಷ್ಠಿಯಲ್ಲಿ ನೀವು ಖಳನಾಯಕರಾಗಿದ್ದೀರಿ, ಅಧಿಕಾರಿಗಳು ಎಂಪಿಯವರು ಮತ್ತು ಎಂಎಲ್‌ಎ ರವರ ಮೇಲೆ ಕುಂದರನಹಳ್ಳಿ ರಮೇಶ್ ರವರಿಗೆ ಬೇಸರ ಇರಬಹುದು ಹೀಗೆಕೆ ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಎಂದು ಜಿಲ್ಲಾ ಸ್ಲಂ ನಿರ್ಮೂಲನ ಸಮಿತಿಯ ಅಧ್ಯಕ್ಷರಾದ ಶ್ರೀ ನರಸಿಂಹಮೂರ್ತಿಯವರ ಅನಿಸಿಕೆ.

 ನಮ್ಮ ಸಮಿತಿಯ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್ ರವರು ನಿಮ್ಮ ಹೆಸರೇ ಬದಾಲಾಯಿಸುತ್ತಾರೆ ನೋಡಿ, ನಾವೂ ಇನ್ನೂ ಮುಂದೆ ದಿಶಾ ರಮೇಶ್ ಎನ್ನ ಬೇಕಾಗುತ್ತದೆ ಎಂದು ಹಾಸ್ಯಮಾಡಿದ್ದು ಉಂಟು.

 ಯಾರು ಏನೇ ಹೇಳಲಿ ನಮ್ಮ ಜಿಲ್ಲೆಯ ದಿಶಾ ಸಮಿತಿ ಚುರುಕಾಗಿದೆ. ಪ್ರಥಮ ವರ್ಷದ ಕಾರ್ಯ ಚಟುವಟಿಕೆ ತೃಪ್ತಿ ತಂದಿದೆ. ಇದರ ಕೊಡುಗೆ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್, ಸಿಇಓರವರಾದ ಶ್ರೀಮತಿ ಶುಭಕಲ್ಯಾಣ್ ರವರು ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸಲ್ಲುತ್ತದೆ.

 ನನಗೆ ಅರ್ಥವಾಗದೇ ಇರುವ ವಿಚಾರ ಜಿಲ್ಲಾಮಟ್ಟದ ದಿಶಾ ಸಮಿತಿಗೆ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಸದಸ್ಯರಾಗಿದ್ದರೂ ಅವರುಗಳು ಏಕೆ ಭಾಗವಹಿಸುತ್ತಿಲ್ಲಾ ಎಂಬುದು. ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪೆಸ್ವಾಮಿರುವರು ಮಾತ್ರ ಭಾಗವಹಿಸಿ ಸಮರ್ಥವಾಗಿ ಸಭೆಯ ಗಮನ ಸೆಳೆಯುತ್ತಿದ್ದಾರೆ.

 ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿ ಮತ್ತು ರಾಜ್ಯಮಟ್ಟದ ದಿಶಾ ಸಮಿತಿ ಚುರುಕುಗೊಳಿಸ ಬೇಕಿದೆ. ಕಳೆದ ಸರ್ಕಾರ ರಾಜ್ಯ ಮಟ್ಟದ ದಿಶಾ ಸಮಿತಿಯನ್ನೆ ರಚಿಸಿಲ್ಲ. ಶ್ರೀ ಜಿ.ಎಸ್.ಬಸವರಾಜ್ ರವರು ಕಡತದ ಅನುಸರಣೆ ಮಾಡಿದರೂ ರಾಜ್ಯಮಟ್ಟದಲ್ಲಿ ದಿಶಾ ಸಮಿತಿ ರಚನೆಯಾಗಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿಯೇ ಒಂದು ವರ್ಷ ತೆಗೆದುಕೊಂಡಿತು.

 ಇದರ ಮಹತ್ವ ಅಧಿಕಾರಿಗಳಿಗೆ ತಿಳಿದಿದೆ, ಚುನಾಯಿತ ಜನಪ್ರತಿನಿಧಿಗಳಿಗೆ ತಿಳಿದಿಲ್ಲ, ಎಂಬುದು ಒಂದು ವಾದ ಅದೇನೇ ಇರಲಿ, ದಿನಾಂಕ:06.10.2020 ರಂದು ಪ್ರಥಮ ಸಭೆ ನಿಗದಿಯಾಗಿದೆ. ವರ್ಷ ರಾಜ್ಯಮಟ್ಟದ ದಿಶಾ ಸಮಿತಿ ದೇಶದಲ್ಲಿಯೇ ನಂಬರ್-1  ಸ್ಥಾನಕ್ಕೆ ಬರಬೇಕೆನ್ನುವುದು ನಮ್ಮ ಸಂಸ್ಥೆಯ ಗುರಿ.

 ದಿಶಾ ಮಾರ್ಗದರ್ಶಿ ಸೂತ್ರದ ಪ್ರತಿಯೊಂದು ಅಂಶಗಳ ಜಾರಿ ಈ ಸರ್ಕಾರದ ಪ್ರಥಮ ಗುರಿಯಾಗಬೇಕಿದೆ. ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶವೂ ಇದೆ ಆಗಿದೆ. ಇದಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ನಾಮನಿರ್ಧೇಶಿತ ಸದಸ್ಯರ ತಂಡ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಬೇಕಿದೆ.

 ನನ್ನ ಅನುಭವದ ಪ್ರಕಾರ ಯಾವುದೇ ಇಲಾಖೆಯ ಅಧಿಕಾರಿಗಳು ಪ್ರಶ್ನೆ ಮಾಡಿದಾಗ ಮಾತ್ರ ವಿಶೇಷ ಗಮನ ಹರಿಸುತ್ತಾರೆ, ಇಲ್ಲದೆ ಇದ್ದಲ್ಲಿ ನಾವು ಮಾಡುತ್ತಿರುವುದೇ ಸರಿ ಎಂದು ಇರುತ್ತಾರೆ.

 ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆಗೆ ಪರಿಣಿತರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವರ್ಗವಾರು ಸದಸ್ಯರನ್ನು ನೇಮಕ ಮಾಡುವ ಸರ್ಕಾರಗಳ ಉದ್ದೇಶವೂ ಇದೆ ಆಗಿದೆ. ಆ ಎರಡು ವರ್ಗ ಮಾಡುವ ಕೆಲಸಗಳ ಗಮನ ಸೆಳೆಯುವುದಾಗಿದೆ.

 ತಿಂಡಿ ತಿಂದು, ಕಾಫಿ ಕುಡಿದು ವಿಸಿಟಿಂಗ್ ಕಾರ್ಡ್ ಪ್ರದರ್ಶಿಸಲು ಅಲ್ಲ ಎಂಬ ಮನವರಿಕೆ ಎಲ್ಲ ನಾಮನಿರ್ದೇಶಿತ ಸದಸ್ಯರಿಗೂ ಅರ್ಥವಾದರೆ  ಸಾಕು? ನಮ್ಮ ರಾಜ್ಯ ನಂಬರ್ –1  ಆಗಲಿದೆ, ಇದೇ ನಮ್ಮ ಸಂಸ್ಥೆಯ ಮನವಿ.

ಪಲಿತಾಂಶ ಕಾದು ನೋಡೋಣ?