12th September 2024
Share

TUMAKURU: SHAKTHI PEETA FOUNDATION

  1. ಜಲಸಂಪನ್ಮೂಲ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ನಮ್ಮ ರಾಜ್ಯದಲ್ಲಿರುವ ನೀರಿನ ಪ್ರಮಾಣ 3458 ರಿಂದ 4000 (ಪ್ರವಾಹದ ಸಂದರ್ಭದಲ್ಲಿ) ಟಿ.ಎಂ.ಸಿ ಅಡಿ ನೀರು.
  2. ಈಗ ನಮ್ಮ ರಾಜ್ಯದಲ್ಲಿ ಬಳಸಲು ಯೋಜನೆ ರೂಪಿಸಿರುವುದು 1246 ಟಿ.ಎಂ.ಸಿ ಅಡಿ ನೀರು.
  3. ಇಷ್ಟು ನೀರನ್ನು ಬಳಕೆ ಮಾಡುತ್ತಿದ್ದೇವೆಯೇ ಇಲ್ಲ ಸಾದ್ಯಾವೇ ಆಗಿಲ್ಲ. ಇದೂವರೆಗೂ ಆಳ್ವಿಕೆ ಮಾಡಿರುವ ಎಲ್ಲಾ ಪಕ್ಷಗಳ ಸರ್ಕಾರಗಳು ನೀರಿನ ಬುರುಡೆ ಬಿಡುತ್ತಲೇ ಇವೆ.
  4. ಜಲಜೀವನ್ ಮಿಷನ್ ಯೋಜನೆಯಡಿ ನಮ್ಮ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು 2023 ರೊಳಗೆ ದೇಶದ ಎಲ್ಲಾ ಮನೆಗಳಿಗೂ ಶಾಶ್ವತವಾದ ಕುಡಿಯುವ ನೀರನ್ನು ನಲ್ಲಿ ಮೂಲಕ ಕೊಡುತ್ತೇವೆ ಎಂದು ಘೋಶಿಸಿದ್ದಾರೆ.
  5. ಈ ಯೋಜನೆ ಅವರ ಅನುಭವದ ಕಸರತ್ತು. ಕಾರಣ ಒಬ್ಬ ಮುಖ್ಯ ಮಂತ್ರಿಯಾಗಿ ಅವರು ಕುಡಿಯುವ ನೀರಿಗೋಸ್ಕರ ಪ್ರತಿ ಗ್ರಾಮಗಳಲ್ಲಿ ಬೋರ್‌ವೆಲ್‌ಗಳಿಗೆ ಮತ್ತು ಇತರೆ ಕುಡಿಯುವ ನೀರಿನ ಸೌಲಭ್ಯಗಳಿಗೆ ಖರ್ಚು ಮಾಡಿರುವ ಹಣ ಮತ್ತು ಪಲಿತಾಂಶ ಗುಜರಾತ್ ಲೆಕ್ಕ ಹಾಕಿ ಯೋಜನೆ ರೂಪಿಸಿದ್ದಾರೆ.
  6. ನಮ್ಮ ರಾಜ್ಯದಲ್ಲಿ ಕುಡಿಯುವ ನೀರಿಗೆ 72 ಟಿ.ಎಂ.ಸಿ ಅಡಿ ನೀರು. ಸಾಕು ಎಂದು ಲೆಕ್ಕ ಹಾಕಿದ್ದಾರೆ.
  7. ಹೌದು ನದಿ ನೀರನ್ನು ಬ್ಯಾರಲ್‌ಗೆ ತುಂಬಿ, ಮನೆ ಮನೆಗೆ ಸರಬರಾಜು ಮಾಡಿದರೆ ಸಾಕು.
  8. ಕಾಲುವೆ ಮೂಲಕ ನೀರು ಹರಿದು, ಜಲಸಂಗ್ರಹಾರಗಳಲ್ಲಿ ನೀರು ಆವಿಯಾಗಿ, ಭೂಮಿಯಲ್ಲಿ ಬೋರ್‌ವೆಲ್ ಬಕಾಸುರಗಳಿಂದ ನೀರು ಹಿಂಗುವುದು, ನೀರಿನ ಕಳ್ಳತನ ಇವೆಲ್ಲವನ್ನು ಲೆಕ್ಕ ಹಾಕಿದರೆ. ಕುಡಿಯುವ ನೀರಿನ ಯೋಜನೆಗೆ ಸುಮಾರು 350 ರಿಂದ 500 ಟಿ.ಎಂ.ಸಿ ಅಡಿ ನೀರಿನ ಯೋಜನೆ ರೂಪಿಸ ಬೇಕಾಗ ಬಹುದು.
  9. ನಮ್ಮ ರಾಜ್ಯದಲ್ಲಿರುವ ಎಲ್ಲಾ ಕೆರೆ-ಕಟ್ಟೆಗಳ ಸಾಮಾರ್ಥ್ಯ ಸುಮಾರು 350  ಟಿ.ಎಂ.ಸಿ ಅಡಿ ನೀರು.
  10. ಈ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸಿದರೆ ಶಾಶ್ವತವಾದ ಕುಡಿಯುವ ನೀರನ್ನು ವರ್ಷ ಪೂರ್ತಿ ಸರಬರಾಜು ಮಾಡಲು ಸಾಧ್ಯಾವೇ ಎಂದು ನೋಡಿದಾಗ ಇದು ಅಸಾಧ್ಯದ ಮಾತು.
  11. ಮತ್ತೆ ಇನ್ನೇನು ಮಾಡಬೇಕು? ಅಂದರೆ ಒಂದು ಗ್ರಾಮ ಪಂಚಾಯಿತಿಗೆ ಒಂದು ಅಥವಾ ಹೋಬಳಿಗೆ ಒಂದು ದೊಡ್ಡ ಕೆರೆ ಆಯ್ಕೆ ಮಾಡಿ, ಕೆರೆ ಇಲ್ಲದಿದ್ದಲ್ಲಿ ಹೊಸದಾಗಿ ನಿರ್ಮಾಣ ಮಾಡಿ ನದಿ ನೀರು ತುಂಬಿಸದರೇ ಮಾತ್ರ ಸಾಧ್ಯ.
  12. ಈಗಾಗಲೇ ಕುಡಿಯುವ ನೀರಿಗೂ ನದಿ ನೀರಿನ ಸ್ವಲ್ಪ ಅಲೋಕೇಷನ್ ಮಾಡಿದ್ದಾರೆ.
  13. ರಾಜ್ಯದ ಎಲ್ಲಾ ಜನರಿಗೂ ವರ್ಷ ಪೂರ್ತಿ ಕುಡಿಯುವ ನೀರು ನೀಡಬೇಕಾದರೆ, ಮೋದಿಯವರ ಮಾತಿನಂತೆ 2023 ರೊಳಗೆ ಯೋಜನೆ ರೂಪಿಸಬೇಕಾದರೆ. ರಾಜ್ಯದ ನದಿ ಜೋಡಣೆ ಮಾಡಿ ಪ್ರತಿ ಗ್ರಾಮಗಳಿಗೂ ಅಗತ್ಯವಿರುವ ನದಿ ನೀರಿನ ಅಲೋಕೇಷನ್ ಮಾಡಲೇ ಬೇಕು.
  14. ಇಲ್ಲವಾದಲ್ಲಿ ಹೇಗೆ ಯೋಜನೆ ಜಾರಿಗೊಳಿಸಬಹುದು ಎಂಬ ಸತ್ಯವನ್ನು ರಾಜ್ಯದ ಯಾವುದೇ ರಾಜಕಾರಣಿ ಅಥವಾ ಅಧಿಕಾರಿಗಳು ಹೇಳಲಿ?
  15. ಇದು ಮೋದಿಯವರಿಗೂ ಗೊತ್ತು? ಈ ಯೋಜನೆಯ ಅಡಿಯಲ್ಲಿ ರಾಜ್ಯದ ನದಿ ಜೋಡಣೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲೇ ಬೇಕು ಎಂಬುದು ನಮ್ಮ ವಾದ ನೀವೇನಂತೀರಿ?