2nd December 2023
Share

TUMAKURU:SHAKTHI PEETA FOUNDATION

 ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ , ಕಾವೇರಿ,   ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರು , ಗೋದಾವರಿ, ಉತ್ತರ ಪೆನ್ನಾರ್, ದಕ್ಷಿಣ ಪೆನ್ನಾರ್ ಮತ್ತು ಪಾಲಾರ್   7 ನದಿ ಪಾತ್ರಗಳಿವೆ.  ’ರಾಜ್ಯದ 7 ನದಿ ಪಾತ್ರಗಳ ಜೋಡಣೆಯೇ ರಾಜ್ಯ ನದಿ ಜೋಡಣೆ ಯೋಜನೆ’

 ಟೇಬಲ್‌ನಲ್ಲಿರುವ ಪ್ರಕಾರ ರಾಜ್ಯದಲ್ಲಿ ದೊರೆಯುವ ನೀರು ಸುಮಾರು 3425.27 ಟಿ.ಎಂ.ಸಿ ಅಡಿ ನೀರು. ಅಂತರ್ ರಾಜ್ಯದ ವಿವಾದಗಳು ಬಗೆ ಹರಿದ ನಂತರ  ರಾಜ್ಯ ಸರ್ಕಾರ ಬಳಸುತ್ತಿರುವ ಮತ್ತು ಬಳಸಲು ಯೋಜನೆ ರೂಪಿಸಿರುವ ಒಟ್ಟು ನೀರು 1246.38 ಟಿ.ಎಂ.ಸಿ ಅಡಿ ನೀರು, ಯಾವುದೇ ಯೋಜನೆಗೆ ಬಳಸದೆ ನೇರವಾಗಿ ಸಮುದ್ರ ಸೇರುತ್ತಿರುವ ನೀರು ಸುಮಾರು 2178.89  ಟಿ.ಎಂ.ಸಿ ಅಡಿ ನೀರು

 ಪ್ರವಾಹದ ಸಂದರ್ಭಗಳಲ್ಲಿ ಸುಮಾರು ೫೦೦ ಟಿ.ಎಂ.ಸಿ ಅಡಿ ನೀರು ಹೆಚ್ಚಾಗಿ ಹರಿದಿವೆ ಎಂದು ತಜ್ಞರು ಹೇಳುತ್ತಾರೆ. ಆದರೇ ಸರ್ಕಾರಿ ದಾಖಲೆಗಳ ಪ್ರಕಾರ ನಿಖರವಾದ ಮಾಹಿತಿ ನನಗೆ ದೊರೆತಿಲ್ಲ. ರಾಜ್ಯ ಸರ್ಕಾರ ಇದರ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು.

  ಅಂತರ ರಾಜ್ಯ ವಿವಾದಗಳಲ್ಲಿ ಪ್ರವಾಹದ ನೀರಿನ ಬಗ್ಗೆ ಚರ್ಚೆಯಾಗಿಲ್ಲ ಎನ್ನುತ್ತಾರೆ. ಈ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ ಎನ್ನುವ ಮಾಹಿತಿಯನ್ನು ವಿವಾದಗಳ ಸಲಹಗಾರರ ಸಂದರ್ಶನದಲ್ಲಿ ತಿಳಿಯೋಣ.

 ಉಳಿದಿರುವ ಸುಮಾರು 2178.89  ಟಿ.ಎಂ.ಸಿ ಅಡಿ ನೀರು ಮತ್ತು ಪ್ರವಾಹದ ಸಂದರ್ಭದಲ್ಲಿನ ನೀರು ಸೇರಿ ರಾಜ್ಯದ ನದಿ ಜೋಡಣೆ ಯೋಜನೆಗೆ’ ಎಷ್ಟು ನೀರನ್ನು ಬಳಸಬೇಕು ಎಂದು ರಾಜ್ಯ ಸರ್ಕಾರ ಖಚಿತ ನಿರ್ಧಾರಕ್ಕೆ ಬರಬೇಕು.

 ಗ್ರಾಮೀಣ ಭಾಗದಲ್ಲಿನ ಗಾದೆಯಂತೆ ಸರ್ಕಾರ ಉಪ್ಪುಪ್ಪು ಕಡ್ಡಿ ಆಟ ಆಡಬಾರದು’ ಸ್ಪಷ್ಟವಾಗಿ ಅಭಿಪ್ರಾಯ ಪ್ರಕಟಿಸ ಬೇಕು.

About The Author