11th December 2024
Share

TUMAKURU:SHAKTHI PEETA FOUNDATION

ಸ್ಟೇಟ್ ಇರ್ರಿಗೇಷನ್ ಪ್ಲಾನ್ :- ನಮ್ಮ ರಾಜ್ಯ ಸರ್ಕಾರವೂ ದಿನಾಂಕ:26.12.2016   ರಂದು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸ್ಟೇಟ್ ಇರ್ರಿಗೇಷನ್ ಪ್ಲಾನ್’ ಮಾಡಿದ್ದು, ಈ ವರದಿ ಪ್ರಕಾರ ರಾಜ್ಯಕ್ಕೆ 2020 ಇಸವಿ ವೇಳೆಗೆ ಜನತೆಗೆ

  1. ಕುಡಿಯುವ ನೀರಿಗಾಗಿ 119.75   ಟಿ.ಎಂ.ಸಿ ಅಡಿ ನೀರು,
  2. ಜಾನುವಾರುಗಳಿಗೆ 15.970   ಟಿ.ಎಂ.ಸಿ ಅಡಿ ನೀರು,
  3. ಕೃಷಿಗೆ 2569.964   ಟಿ.ಎಂ.ಸಿ ಅಡಿ ನೀರು,
  4. ಕೈಗಾರಿಕೆಗಳಿಗೆ  130.180   ಟಿ.ಎಂ.ಸಿ ಅಡಿ ನೀರು
  5. ಒಟ್ಟು 2829.77   ಟಿ.ಎಂ.ಸಿ ಅಡಿ ನೀರಿನ ಅಗತ್ಯವಿದೆ ಎಂದು ವರದಿ ಸಿದ್ಧಪಡಿಸಿದ್ದಾರೆ. 

ರಾಜ್ಯದ ನೀರಿನ ಬಜೆಟ್:- ಪಿಎಂಕೆಎಸ್‌ವೈ ಯೋಜನೆಯಡಿ ರಾಜ್ಯದ ನೀರಿನ ಬಜೆಟ್ ಮಾಡಿ ಅಂತರ್ಜಲ, ಮಳೆ, ಕೆರೆ, ನದಿ ಮೂಲ ಎಲ್ಲಾ ಸೇರಿ  1475.119   ಟಿ.ಎಂ.ಸಿ ಅಡಿ ನೀರು ಬಳಸಲಾಗುತ್ತಿದೆ ಎಂದು ವರದಿ ಮಾಡಲಾಗಿದೆ. ಈ ಲೆಕ್ಕದ ಆಧಾರದಲ್ಲಿ ರಾಜ್ಯಕ್ಕೆ ಸುಮಾರು 1352.665   ಟಿ.ಎಂ.ಸಿ ಅಡಿ ನೀರು ಕೊರೆತೆಯಾಗಲಿದೆ ಎಂದಿದ್ದಾರೆ.

ಇದು ಸರಿನಾ? ತಪ್ಪಾ ? ಯಾರು ಹೇಳಬೇಕು? ಯಾರು ಏನು ಹೇಳಿದ್ದಾರೆ? ವರದಿ ಗತಿ ಏನಾಗಿದೆ?

ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಘೋಷಣೆ

  ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ೨ ನೇ ಅವಧಿಯ  ದಿನಾಂಕ:30.06.2019 ರಂದು ನಡೆದ ಪ್ರಥಮ ಮನ್ ಕಿ ಭಾತ್’ ಕಾರ್ಯಕ್ರಮದಲ್ಲಿ ದೇಶಾದ್ಯಾಂತ ಜಲ ನಿರ್ವಹಣೆ ಬಗ್ಗೆ ಜಲಾಂದೋಲನ ಆರಂಭಿಸಲು ಕರೆ ನೀಡಿದ್ದಾರೆ.

  ಕರ್ನಾಟಕ ರಾಜ್ಯವು ದೇಶದಲ್ಲಿ ರಾಜಸ್ಥಾನದ ನಂತರದ ಜಲ ಸಮಸ್ಯೆ ಎದುರಿಸುತ್ತಿರುವ 2 ನೇ ರಾಜ್ಯವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಕಣ್ಣೀರು ಇಡುವ ಪರಿಸ್ಥಿತಿ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರವೆಂದರೆ ನಮ್ಮಲ್ಲಿರುವ ಜಲ ಸಂರಕ್ಷಣೆ, ವೈಜ್ಞಾನಿಕ ರೀತಿ ಜಲ ಬಳಕೆ ಮತ್ತು ಹಸೀರಿಕರಣ’ ಮಾತ್ರ.

ಜಲಶಕ್ತಿ ಸಚಿವಾಲಯ: ಜಲಸಂಪನ್ಮೂಲ ಇಲಾಖೆ ನೀರಿನ ಮಾತೃ ಇಲಾಖೆ’ ನೀರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಂದೇ ಸೂರಿನಡಿ ತರಲು ಅಗತ್ಯ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರದ ಮಾದರಿಗೆ ಚಿಂತನೆ’ ಮಾಡುವುದು ಸೂಕ್ತವಾಗಿದೆ.

  ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್  ಲ  ಜಾರಕಿಹೊಳೆರವರು, ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರು ಹೀಗೆ ನೀರಿಗೆ ಸಂಬಂಧಿಸಿದ ಸಚಿವರ ಅಭಿಪ್ರಾಯ ಕ್ರೋಢಿಕರಣಕ್ಕೆ ಚಿಂತನೆ.

ಜಲಶಕ್ತಿ ಅಭಿಯಾನ: ರಾಜ್ಯದ 29340 ಗ್ರಾಮಗಳ ಮತ್ತು ಎಲ್ಲಾ 224   ವಿಧಾನಸಭಾ ಕ್ಷೇತ್ರಗಳ  WATER BUDGET- WATER AUDIT- WATER STRATAGY ಸಮೀಕ್ಷೆ ಮಾಡಿಸಲು ಪ್ರತಿಯೊಂದು ಗ್ರಾಮಕ್ಕೂ ಅಗತ್ಯವಿರುವ ನದಿ ನೀರಿನ ಅಲೋಕೇಷನ್’ ಮಾಡಲು ನಿರಂತರವಾಗಿ ಶ್ರಮಿಸುವ ಮೂಲಕ ಶ್ರೀ ನರೇಂದ್ರಮೋದಿಯವರ ಮಹತ್ವಾಕಾಂಕ್ಷೆಯ ಜಲಶಕ್ತಿ ಅಭಿಯಾನ’ ಕ್ಕೆ ಚಾಲನೆ ನೀಡುವುದು ಸಾಂದರ್ಭಿಕವಾಗಿದೆ.

 ಜೊತೆಗೆ ಜಲಜೀವನ್ ಮಿಷನ್ ಯೋಜನೆಯಡಿ ’2023  ರೊಳಗೆ ದೇಶದ ಪ್ರತಿ ಮನೆಗೂ ಕುಡಿಯುವ ನೀರು’ ನೀಡಲು ಮತ್ತು ವಾಟರ್ ಗ್ರಿಡ್’ ಯೋಜನೆಗೂ ಸಿದ್ಧತೆ ನಡೆಸುತ್ತಿದ್ದಾರೆ.

ರೈತರ ಆದಾಯ ದುಪ್ಪಟ್ಟು ಯೋಜನೆ:- ಕೇಂದ್ರ ಸರ್ಕಾರದ 2022   ರೊಳಗೆ   ರೈತರ ಆದಾಯ ದುಪ್ಪಟ್ಟು ಯೋಜನೆ’ ಯಡಿ ಕೃಷಿಗೆ ಪ್ಲಡ್ ಇರ್ರಿಗೇಷನ್ ರದ್ದು ಪಡಿಸಿ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಲು ಮತ್ತು ಕೆರೆಗಳಿಂದ ಕುಡಿಯುವ ನೀರಿಗಾಗಿ ಬಹುಗ್ರಾಮ ಯೋಜನೆ’ ರೂಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಾಗಿದೆ. 

ಈಗಾಗಲೇ ಕೇಂದ್ರ ಸರ್ಕಾರದ ನೀತಿ ಆಯೋಗಕ್ಕೆ ರಾಜ್ಯ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿರಜನೀಶ್‌ರವರ ಮುಖಾಂತರ ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳನ್ನು ರೂ 1.93   ಲಕ್ಷ ಕೋಟಿಯಲ್ಲಿ ಕೈಗೊಳ್ಳಲಾಗುವುದು ಎಂದು ಅಫ್‌ಲೋಡ್ ಮಾಡಲಾಗಿದೆ.

 ಕೇಂದ್ರ ಸರ್ಕಾರದ   NPP- National Perspective Plan      ಅಡಿಯಲ್ಲಿ ರಾಜ್ಯದ ನದಿ ಜೋಡಣೆ ಯೋಜನೆ ಜಾರಿಗೊಳಿಸುವುದು ಮಾನ್ಯ ಮುಖ್ಯ ಮಂತ್ರಿಯವರ ಕನಸಾಗಿದೆ.

 ’ಭಾರತದ ಸಂವಿಧಾನ, ಭಗವದ್ಗೀತೆ, ಬೈಬಲ್ ಮತ್ತು ಕುರಾನಾ ಗ್ರಂಥಗಳಿದ್ದಂತೆ’ ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮ ಮತ್ತು ನಗರ ಪ್ರದೇಶಗಳ ಪ್ರತಿಯೊಂದು ಬಡಾವಣೆಯ ನೀರಿನ ಲೆಕ್ಕಮಾಡಿ, ಕೊರತೆ ಇರುವ ಕಡೆ ನದಿ ನೀರಿನ ಅಲೋಕೇಷನ್’ ಮಾಡಿ ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ಎಂಬ ಯೋಜನೆಯ ಮೂಲಕ ದಾಖಲೆ ಬರೆಯಲು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಜಲ ಸಂಪನ್ಮೂಲ ಸಚಿವರು ಮುಂದಾಗಿದ್ದಾರೆ. 

 ಯೋಜನೆ ರೂಪಿಸುವಾಗ ಪ್ರತಿಯೊಂದು ವರ್ಗದವರ ಅಭಿಪ್ರಾಯ, ಸಲಹೆ, ಮಾರ್ಗದರ್ಶನ ಪಡೆದು ಪಾರದರ್ಶಕವಾಗಿ ರೂಪಿಸಲು ಅಗತ್ಯವಿರುವ ಅನುದಾನ ನೀಡಲು ಮುಂದಾಗಿದ್ದಾರೆ. ಜಲಸಂಪನ್ಮೂಲ ಸಚಿವರು ಕಾಲಮಿತಿ ನಿಗದಿಗೊಳಿಸಿ ನೀರಿನ ಗ್ರಂಥ ಸಿದ್ಧಪಡಿಸಲು ಚಾಲನೆ ನೀಡಿದ್ದಾರೆ.