23rd June 2024
Share

 TUMAKURU:SHAKTHIPEETA FOUNDATION

    ವರದಿ:ಟಿ.ಆರ್.ರಘೋತ್ತಮ ರಾವ್, ದಿಶಾ ಸಮಿತಿ ಸದಸ್ಯರು, ತುಮಕೂರು ಜಿಲ್ಲೆ.

 ನಾ ಕಂಡಂತೆ ನಿರಂತರ ಅಭಿವೃಧ್ಧಿ ಪರ ಚಿಂತನೆಗಳು ಅದರಲ್ಲೂ ಸ್ಪಷ್ಟತೆ ಇರುವ ನಿಲವು ಮತ್ತು ಗುಣ ಮಟ್ಟದ ಚಿಂತನೆಗಳು, ವ್ಯೆಯಕ್ತಿಕ ಶಿಸ್ತು, ಕಾರ್ಯತತ್ಪರತೆ ಈ ಮೂಲ ಮಂತ್ರ ಹಿಡಿದು ಐದು ದಶಕಗಳ ದಣಿವು ಅರಿಯದ ನಿಲ್ಲದ ಪಯಣ, ಇವು ಶ್ರೀಯುತ ಕುಂದರನಹಳ್ಳಿ ರಮೇಶ್ ಅವರದು  ಅಂತಹ ಈ ವ್ಯಕ್ತಿಗೆ ಸವಾಲಿನ ಜವಾಬ್ದಾರಿ.

 ಇಂದು ಮಾನ್ಯ ಮುಖ್ಯಮಂತ್ರಿಗಳು ಶ್ರೀ ಬಿ.ಎಸ್. ಯಡಿಯೂರಪ್ಪನವರು  ಅಧ್ಯಕ್ಷ್ಷರಾಗಿರುವ ರಾಜ್ಯ ಮಟ್ಟದ ದಿಶಾ ಸದಸ್ಯತ್ವ ಶ್ರೀಯುತ ಕುಂದರನಹಳ್ಳಿ ರಮೇಶ್ ಅವರಿಗೆ ಅರ್ಹತೆಯಿಂದ ದಕ್ಕಿದೆ.  ಇದು ಅವರ ಮನೋಧರ್ಮ ಹತ್ತಿರದ ಕಾಯಕ ವಾಗಲಿದೆ ಎಂಬುದು ನನ್ನ ಅನಿಸಿಕೆ.

 ಅವರಿಗೆ ನನ್ನ ಪರಿಚಯ ಆಗಿ ನಾಲ್ಕು ದಶಕ ಕಳೆದಿದ್ದರೂ, ಅವರ ಜೊತೆ ನನ್ನ ಒಡನಾಟ ಹೆಚ್ಚು ಆಗಿದ್ದು ನಮ್ಮಿಬ್ಬರ ನಡುವೆ ಸಮಾನ  ಅಭಿವೃಧ್ಧಿ ಚಿಂತನೆ, ಪಾರದರ್ಶತೆ ಸದೃಡ ನಿಲವು, ಗುಂಪಿನಲ್ಲಿಯೂ ಸದಾ ಪ್ರತ್ಯೇಕವಾಗಿ ಎದ್ದು ನಿಲ್ಲುವ ವ್ಯಕ್ತಿತ್ವ. ಇವು  ನನ್ನ ವಿಶ್ರಾಂತಿ ಜೀವನದಲ್ಲಿನ ನನ್ನ ಅಭಿವೃದ್ಧಿ ಅಲೋಚನೆಗೆ ಫ಼್ಲಾಟ್ ಫಾರಂ ಸರಿ ಎನಿಸಿದ್ದರಿಂದ ಕನೆಕ್ಟ್ ಆದೆ.

 ರಾಜ್ಯ ಮಟ್ಟದ ದಿಶಾ ಸದಸ್ಯತ್ವ ಅಧಿಕಾರ ಸಿಕ್ಕಿದೆ, ಅವರ ಚಿಂತನೆಗಳಿಗೆ/ಕನಸುಗಳಿಗೆ  ಭೌಧಿಕ ಆಕಾರದ ಪಲಿತಾಂಶ/ಉತ್ತರ ಕಂಡುಕೊಳ್ಳುವ ಸಮಯ ಒದಗಿ ಬಂದಿದೆ. ಹೊಣೆಯಿಂದ ನುಣಿಚಿಕೊಳ್ಳುವ ಮನುಷ್ಯ ಈತನಲ್ಲ. ಏನೇನು ಮಾಡಬಲ್ಲ, ರಾಜಕಾರಣಿ ಹಾಗೂ ಆಡಳಿತ ಯಂತ್ರ ಈ ಎರಡು ಆಯಾಮವನ್ನು ಬಳಸಿಕೊಂಡು ವೇಗದಲ್ಲಿ ಚಲಿಸುವ ಅವರ ಅಭಿವೃಧ್ಧಿ ಪರ ಚಿಂತನೆಗಳಿಗೆ ಹೇಗೆ ಆಕಾರ ಕಂಡುಕೊಳ್ಳುತ್ತಾರೆ ಎಂಬುದೇ ನನ್ನ ಅಲೋಚನೆಗೆ ಹೊಳೆದ ಮುಂದೆ ಚರ್ಚಿತ ವಿಷಯ ಆಗಿದೆ.

 ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ, ರಾಜ್ಯ ಮಟ್ಟದ ಎಲ್ಲಾ ಸಚಿವಾಲಯದ ಮುಖ್ಯಸ್ಥರು ಅಲ್ಲದೇ, ಕೇಂದ್ರ ಸರಕಾರದ ಇಲಾಖಾ ಮುಖ್ಯಸ್ಥರು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಸ್ವಾಯಸ್ಥ ಸಂಸ್ಧೆಗಳ ಮುಖ್ಯಸ್ಥರೂ ಇದ್ದು ಜೊತೆಗೆ ನಾಲ್ಕು ಮಂದಿ ಲೋಕಸಭಾ ಸದಸ್ಯರು, ಒಬ್ಬರು ರಾಜ್ಯಸಭಾ ಸದಸ್ಯರು, ಆರು ವಿಧಾನಾಸಭಾ ಸದಸ್ಯರು ಅಲ್ಲದೇ ಅಧಿಕಾರೇತರ ಸದಸ್ಯರು ನಾಮಿನೇಟ್ ಆಧಾರದ ಮೇಲೆ ಇರುತ್ತಾರೆ. ಪಕ್ಷೇತರ ಸದಸ್ಯರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳಿಗೂ ಪ್ರಾತಿನಿಧ್ಯವಿದೆ.

 ಈ ಕಾರಣಕ್ಕಾಗಿ ಬಲಿಷ್ಠ ಮತ್ತು ಹೆಚ್ಚಿನ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಪಡೆದಿರುವ ಸಮಿತಿ ಇದಾಗಿದೆ. ಪ್ರತಿ ಸಭೆಯಲ್ಲಿ ನಿರ್ಧಿಷ್ಠವಾಗಿ ಗೊತ್ತು ಪಡಿಸಿರುವ ಕೇಂದ್ರ ಸರಕಾರ 41 ಯೋಜನೆಗಳು ಮತ್ತು ಮೂಲಭೂತ ಸೌಕರ್ಯ ಸಂಬಂಧ ರೈಲ್ವೆ, ಹೆದ್ದಾರಿ, ವಿಧ್ಯುತ್, ನೀರಾವರಿ ಯೋಜನೆಗಳ ಮೇಲೆ ಕೇಂದ್ರೀಕೃತವಾಗಿ ಚರ್ಚೆ ನಡೆಯುವುದರಿಂದ ದಿಶಾ ಸೇನಾನಿ ಶ್ರೀ ಕುಂದರನಹಳ್ಳಿ ರಮೇಶ್ ಅವರಿಗೆ ರಾಜ್ಯಕ್ಕೆ ಅನುಕೂಲವಾಗುವ ಅತ್ಯುತ್ತಮ ಅಭಿಪ್ರಾಯ ಸಮಗ್ರವಾಗಿ ಮಂಡಿಸಲು ಸಕ್ರಿಯವಾಗಿ ಭಾಗವಹಿಸ ಬೇಕಾಗಿದೆ. ಇಲ್ಲಿನ ನಿರ್ಣಯಗಳು ರಾಜ್ಯದ ಅಭಿವೃಧ್ಧಿ ಪರ ದಿಕ್ಕನ್ನೆ ಬಲಿಸುವ ಶಕ್ತಿ ಇದೆ.

 ಆದ್ದರಿಂದ ಸಮಾಜದ ಅಗತ್ಯತೆಯನ್ನು ಅವರು ಗುರುತಿಸಿ ಹೇಗೆ ಸಮರ್ಥವಾಗಿ  ಚರ್ಚೆಯಲ್ಲಿ ತೊಡಗಿಸುಕೊಳ್ಳುತ್ತಾರೆ ಎಂಬುದು, ಇದರಿಂದ ಅವರ ಸಾಮರ್ಥ್ಯ ಅನಾವರಣಗೊಳಿಸುತ್ತಾ ಹೋಗುತ್ತದೆ. ಅವರ ಭಾಗವಹಿಸುವಿಕೆ ತಮ್ಮ ಅನುಭವದ ಸಾರ ಇಲ್ಲಿ ಕೆಲಸ ಮಾಡಬೇಕು, ಆಗ ಮಾತ್ರ ತಾವು ನಂಬಿದ ಮಾರ್ಗದಲ್ಲಿ ಹೆಜ್ಜೆ ಗುರುತು ಮೂಡುತ್ತದೆ. ‘ಇಲ್ಲದಿದ್ದರೆ ಬರೀ ಮಾತಿನ ಯಂತ್ರವಾಗುತ್ತದೆ’

 ನಾನು ಗಮನಿಸಿದ ಹಾಗೆ, ಅವರಿಗೆ ನೀರಾವರಿ ಯೋಜನೆಗಳನ್ನು ರಾಜ್ಯದಲ್ಲಿ ಸಮರ್ಥವಾಗಿ ಪರಿಚಯಿಸಲು ಅನುಸರಣೆ ಮಾಡಿ ಗ್ರಾಮೀಣ ಸಂಪತ್ತು ಬೆಳೆಸಬೇಕೆಂಬ ಹೆಚ್ಚಿನ ಒಲವು ಇದನ್ನು ಅವರು ಬರೆದ ಊರಿಗೊಂದು ಕೆರೆ ಕೆರೆಗೆ ನದಿ ನೀರು’ ಕಿರು ಪುಸ್ತಕದಲ್ಲಿ ಕಾಣಬಹುದು. ಆದಾಗ್ಯೂ  ವಿಶಾಲ ತಳಹದಿಯಲ್ಲಿ ಎಲ್ಲಾ ಅಭಿವೃಧ್ಧಿ ವಿಚಾರದಲ್ಲಿ ಆಸಕ್ತಿ ಇಲ್ಲವೆಂದಲ್ಲ.

  ಹಿನ್ನಲೆಯಲ್ಲಿ ನನ್ನ ನೆಚ್ಚಿನ ಯೋಜನೆಗಳಾದ  ವಿಧ್ಯುತ್ ಗ್ರಾಹಕರಿಗೆ ಅನುಕೂಲ ದೃಷ್ಠಿಯಿಂದ ತುಮಕೂರು ಸ್ಮಾರ್ಟ್ ಸಿಟಿ ಸೀಮಿತವಾಗಿ ಪ್ರತ್ಯೇಕ ಬೆಸ್ಕಾಂ ವಿಭಾಗ ಪರಿಚಯಿಸುವುದು, ಕೇಂದ್ರದ ನೀತಿ ಅನುಸಾರ ತುಮಕೂರು ನಗರಕ್ಕೆ ಹಿಂದೆ ಮಂಜೂರಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜ್.

 ರೈಲ್ವೆ ಯೋಜನೆಗಳಾದ ತುಮಕೂರು-ದಾವಣಗೆರೆ/ರಾಯದುರ್ಗ ಗಳಿಗೆ ಭೂಸ್ವಾಧೀನಕ್ಕೆ ವೇಗದ ಕ್ರಮ, ಬೆಂಗಳೂರು[ಚಿಕ್ಕಬಾಣಾವರ]-ತುಮಕೂರು-ಅರಸೀಕೆರೆ ರೈಲ್ವೆ ಮಾರ್ಗ ವಿಧ್ಯುದ್ದೀಕರಣ ಕಾಮಗಾರಿಗೆ ವೇಗ, ಎಂ,ಎಸ್.ಎಂ.ಇ. ಟೆಕ್ನಾಲಜಿ ಸೆಂಟರ್‌ಗೆ ಭೂಮಿ ನೀಡಿದ್ದರೂ ಇನ್ನೂ ವಿಲೆ ಇರುವುದು.

  ಬೆಂಗಳೂರು ರೀಜನ್ ಇಂಡಸ್ಟ್ರಿಯಲ್ ರೈಲ್ ಕಾರಿಡಾರ್, ಉಪನಗರ ರೈಲು ವ್ಯವಸ್ಥೆಯನ್ನು ಕೆ.ರೈಡ್ ಮೂಲಕ ಜಾರಿಗೆ ಒತ್ತಾಯ, ತುಮಕೂರಿಗೆ ಐ.ಟಿ ಹಬ್, ಎಲೆಟ್ರಾನಿಕ್ಸ್ ಸಾಫ಼್ಟ್ ವೇರ್‌ಡಿಸೈನ್ ಕ್ಲಸ್ಟರ್ ಹಿಂದೆ ಮಂಜೂರು ಆಗಿದ್ದು, ಸಾಕರ ಅಗದೆ ಇರುವುದನ್ನು ಆಗಲು ಕ್ರಮ ವಹಿಸುವಂತೆ ಒತ್ತಾಯ.

 ಕರ್ನಾಟಕ ಐಟಿ ಪಾಲಿಸಿ 2020-25 ಕರಡು ಪ್ರಸ್ಥಾವದಲ್ಲಿ ಜಿಲ್ಲೆಗೆ ಆಗಿರುವ ನ್ಯೂನತೆಯನ್ನು ಅಂತಿಮ ಆದೇಶದಲ್ಲಿ ಸರಿಪಡಿಸಲು ಒತ್ತಾಯ, ಹೀಗೆ ರಾಜ್ಯ ಮಟ್ಟದ ರಾಜ್ಯ ಮಟ್ಟದ ದಿಶಾ ಸದಸ್ಯತ್ವ ಪಡೆದಿರುವ ಶ್ರೀಯುತರು  ದಿಶಾ ಸಮಿತಿಯಲಿ ಇದಕ್ಕೆಲ್ಲಾ  ನನ್ನ ಕನಸಿಗೆ  ಸಾಥ್ ನೀಡುತ್ತಾರೆಂದು ಭರವಸೆಯಿಂದ ಇದ್ದೇನೆ.

 ಇನ್ನು ಅವರ ಕನಸಿನ ಯೋಜನೆಗಳಿಗೆ ಅದರಲ್ಲೂ ಕರ್ನಾಟಕ ಗ್ರಿಡ್ ಕೆನಾಲ್ ಯೊಜನೆ, ಬಯಲು ಸೀಮೆಗೆ ನದಿ ನೀರು, ಕೊಕೊನೆಟ್ ಎಸ್‌ಇಜೆಡ್, ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ನಿರ್ಮಾಣದ ಪರಿಕಲ್ಪನೆ, ತುಮಕೂರು ಜಿಲ್ಲೆ ಎಲ್ಲಾ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲಿಸಲು ಜಿಐಎಸ್ ಲೇಯರ್ಸ್ ಸಿದ್ದಪಡಿಸುವ ಕ್ರಮ, ಹೀಗೆ ಇನ್ನೂ ಹಲವಾರು ಯೋಜನೆಗಳು ವೇಗದ ಜಾರಿಗೆ ಮತ್ತು ಇವುಗಳ ಬಗ್ಗೆ ಶ್ರೀಯುತರು ರಾಜ್ಯದ/ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಅವರು ಆಕ್ರಮಣಾಕಾರಿಯಾಗಿ ಚರ್ಚೆಯಲ್ಲಿ ಭಾಗವಹಿಸುವಿಕೆ ಯಾಗಲಿದೆಯೇ ನೋಡಬೇಕಾಗಿದೆ.

 ಒಟ್ಟಿನಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅವರ ಅಭಿವೃದ್ಧಿ ಪರಿಕಲ್ಪನೆಗಳು. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅವರ ಅಭಿವೃದ್ಧಿ ಕನಸುಗಳಿಗೆ ಇನ್ನೂ ವೇಗ ಸಿಗಲಿದೆ.

ಸುಮಾರು ವರ್ಷಗಳಿಂದ ಸಂಸದರ ಜೊತೆಯಲ್ಲಿ ನಿರಂತರವಾಗಿ ಅಭಿವೃದ್ಧಿ ಚಟುವಟಿಕೆಯಲ್ಲಿ ಸದಾ ಸಕ್ರೀಯವಾಗಿ ಭಾಗವಹಿಸುತ್ತಿದ್ದ ರಮೇಶ್‌ರವರು ಮಾನ್ಯ ಮುಖ್ಯ ಮಂತ್ರಿಗಳು, ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರ ಪರಿಕಲ್ಪನೆಗಳು ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿಯ ಆಶೋತ್ತರಗಳಿಗೆ  ಕೆಟಾಲಿಸ್ಟ್ ಆಗಲಿ ಎಂಬುದು ನನ್ನ ಅನಿಸಿಕೆ.