19th May 2024
Share

ಈ ಟೇಬಲ್ ಗಮನಿಸಿ, ಸಂಶೋಧನೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 4062 ಕೆರೆ- ಕಟ್ಟೆಗಳಿವೆ, ಇದರಲ್ಲಿ ವಿವಿಧ ಇಲಾಖೆಗಳ ದಾಖಲೆ ಪ್ರಕಾರ 1576 ಕೆರೆ-ಕಟ್ಟೆಗಳಿಗೆ ಮಾತ್ರ ಮಾಲೀಕತ್ವ ಇಲಾಖೆಗಳು ಇವೆ. ಉಳಿದ 2486 ಕೆರೆ-ಕಟ್ಟೆಗಳಿಗೆ ಮಾಲೀಕತ್ವ ಇಲಾಖೆ ಯಾವುದು? ಇದನ್ನು ಪತ್ತೆಹಚ್ಚುವ ಕೆಲಸ ಯಾರು ಮಾಡಬೇಕು?

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಎಂಬ ಘೋಷಣೆಗೆ ಪೂರಕವಾಗಿ ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳ ಡಿಜಿಟಲ್ ಮಾಹಿತಿ, ಮಾಲೀಕತ್ವದ ಇಲಾಖೆ, ನೀರಿನ ಸಾಮಾರ್ಥ್ಯ, ಹೇಮಾವತಿ ನದಿ ನೀರಿನಿಂದ ತುಂಬುವ ಕೆರೆಗಳು, ಭದ್ರಾ ಮೇಲ್ಧಂಡೆ ಯೋಜನೆ ನೀರಿನಿಂದ ತುಂಬುವ ಕೆರೆಗಳು, ಎತ್ತಿನ ಹೊಳೆ ಯೋಜನೆ ನೀರಿನಿಂದ ತುಂಬುವ ಕೆರೆಗಳು, ತುಂಗಾ ಭಧ್ರಾ ಯೋಜನೆ ನೀರಿನಿಂದ ತುಂಬುವ ಕೆರೆಗಳು, ಕೆರೆ-ಕಟ್ಟೆಗಳಿಲ್ಲದ ಗ್ರಾಮಗಳಲ್ಲಿ ಜಲಸಂಗ್ರಹಾಗಾರ ನಿರ್ಮಾಣ, ಯಾವುದೇ ನದಿ ನೀರಿನಿಂದ ತುಂಬದೇ ಇರುವ ಕೆರೆ-ಕಟ್ಟೆಗಳ ಪಟ್ಟಿ ಸಿದ್ಧಪಡಿಸಲು ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸೂಚಿಸಿದ್ದರು.

 ’ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು?’ ಎಂಬ ಗಾದೆ ಮಾತಿನಂತೆ ಯಾವ ಇಲಾಖೆ ಈ ಕೆಲಸ ಮಾಡಬೇಕು ಎಂಬ ಚರ್ಚೆ ನಡೆಯುತ್ತಿತ್ತು. ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯ ಸ್ವಾಮಿರವರ ಗಮನಕ್ಕೆ ತಂದ ತಕ್ಷಣ ಅವರು ಸ್ಪಂದಿಸಿ, ಒಂದು ಅತ್ಯುತ್ತಮವಾದ ಮನಸ್ಸಿಗೆ ಖುಷಿ ಕೊಡುವ ಕೆಲಸವನ್ನು ಮಾಡಿದ್ದಾರೆ.

 ಇದು ಜಲ ಋಷಿ ಜಿ.ಎಸ್.ಪರಮಶಿವಯ್ಯನವರ’ ಕನಸಾಗಿತ್ತು. ಇಡೀ ಕರ್ನಾಟಕಕ್ಕೆ ಈ ರೀತಿ ವರದಿ ಸಿದ್ಧಪಡಿಸುವುದು ಅವರ ಜೀವನದ ಗುರಿಯಾಗಿತ್ತು. ಬಸವರಾಜ್ ರವರು ಈ ಕೆಲಸ ನೋಡಿ ಅವರು ಸ್ವರ್ಗದಲ್ಲಿಯೂ ಖುಷಿ ಪಡುತ್ತಿರ ಬಹುದು. ಎಂದು ತಮಾಷೆಯಾಗಿ ಹೇಳುತ್ತಿರುತ್ತಾರೆ

 ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಟ್ಸ್ ಸಂಪೂರ್ಣವಾಗಿ ವರದಿ ಸಿದ್ಧಪಡಿಸಿದೆ, ಬಹುತೇಕ ಎಲ್ಲಾ ಇಲಾಖೆಗಳು ಸ್ಪಂಧಿಸಿ ಮಾಹಿತಿ ನೀಡಿವೆ. ಇಲಾಖೆಗೆ ವರದಿ ಸಲ್ಲಿಸುವ ಮುನ್ನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಕೇಂದ್ರದ ತಾಂತ್ರಿಕ ನಿರ್ದೇಶಕರಾದ  ಶ್ರೀ ಕೆ.ಜೈಪ್ರಕಾಶ್‌ರವರ ತಂಡ ತಪಾಸಣೆ ಮಾಡಲು ಸಮಾಲೋಚನೆ ನಡೆಸಲಾಗಿದೆ.

 ಯಾವ ಗ್ರಾಮದ ಕೆರೆಗೆ ಯಾವ ನದಿ ನೀರಿನಿಂದ ಗುರುತ್ವಾಕರ್ಷಣೆಯಿಂದ ನೀರು ಹರಿಯಲಿದೆ, ಯಾವ ಕೆರೆಗೆ ಲಿಪ್ಟ್ ಮಾಡಬೇಕು, ಹಾಲಿ ಇರುವ ಅಲೋಕೇಷನ್ ಜೊತೆಗೆ ಇನ್ನೂ ಎಷ್ಟು ಪ್ರಮಾಣದ ನದಿ ನೀರು ಕೆರೆಗಳನ್ನು ತುಂಬಿಸಲು ಬೇಕಾಗುವುದು, ಯಾವ ನದಿ ನೀರನ್ನು ತರಬಹುದು ಎಂಬ ಬಗ್ಗೆಯೂ ಮಾಹಿತಿ ಇದೆ.

 ಗ್ರಾಮವಾರು, ಗ್ರಾಮ ಪಂಚಾಯಿತಿವಾರು, ವಿಧಾನಸಭಾ ಕ್ಷೇತ್ರವಾರು, ತಾಲ್ಲೂಕುವಾರು, ಲೋಕಸಭಾ ಕ್ಷೇತ್ರವಾರು, ಬೇಸಿನ್‌ವಾರು ಹೀಗೆ ಯಾವ ವ್ಯಾಪ್ತಿಯ ಮಾಹಿತಿ ಬೇಕೋ? ಅದು ಜಿಐಎಸ್ ಲೇಯರ್‍ಸ್‌ವಾರು  ಬೆರಳ ತುದಿಯಲ್ಲಿ ದೊರೆಯಲಿದೆ. 

 ದಿನಾಂಕ:29.09.2020 ನೇ ಮಂಗಳವಾರ ಮದ್ಯಾಹ್ನ 3 ಗಂಟೆಗೆ ಬೆಂಗಳೂರಿನ ಆನಂದ್‌ರಾವ್ ವೃತ್ತದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಾರ್ಪೋರೇಟ್ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಭಾಗವಹಿಸಿಲಿದ್ದಾರೆ.

   ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರು,  ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಎಲ್.ಕೆ.ಅತೀಕ್‌ರವರು ಮತ್ತು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯ ಸ್ವಾಮಿರವರು ಹಾಗೂ ಕೆರೆ-ಕಟ್ಟೆಗಳ ಮಾಲೀಕತ್ವದ ಇತರೆ ಇಲಾಖೆಯ ಉನ್ನತ ಅಧಿಕಾರಿಗಳ ಮುದ್ರೆ ಬೀಳುವುದು ಅಗತ್ಯವಾಗಿದೆ.

  ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ವರದಿ ಅವಲೋಕನ ಮಾಡಿದ ನಂತರ, ವರದಿಯನ್ನು  ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಿಸಿ, ಇಡೀ ರಾಜ್ಯಾಧ್ಯಾಂತ ರೀತಿ ವರದಿ ಸಿದ್ಧಪಡಿಸಲು ಮನವಿ ಸಲ್ಲಿಸಲಾಗುವುದು.