TUMAKURU:SHAKTHI PEETA FOUNDATION
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ರಾಜ್ಯದ 26 ಜಿಲ್ಲೆಗಳ 143 ತಾಲ್ಲೂಕುಗಳಿಗೆ ಸುಮಾರು 1450 ಟಿ.ಎಂ.ಸಿ ಅಡಿ ನೀರಿನ ಯೋಜನೆ ರೂಪಿಸಿ ದಿನಾಂಕ: 01.06.2010 ರಂದು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿ ಪ್ರಕಾರ ಸಮಗ್ರ ಅಭಿವೃದ್ಧಿಗೆ ನೀರಿನ ಬೇಡಿಕೆ.
- 15860 ಕೆರೆಗಳಿಗೆ ವರ್ಷದಲ್ಲಿ ಎರಡು ಸಾರಿ ತುಂಬಿಸಲು: 205.20 ಟಿ.ಎಂ.ಸಿ ಅಡಿ ನೀರು.
- 15860 ಕೆರೆಗಳ 609777 ಹೆಕ್ಟೆರ್ ಜಮೀನಿಗೆ ನೀರು : 82.50 ಟಿ.ಎಂ.ಸಿ ಅಡಿ ನೀರು.
- ಊರಿಗೊಂದು ಕೆರೆ- ಆಕೆರೆಗೆ ನದಿ ನೀರು ಯೋಜನೆ ಪ್ರಕಾರ ಕೆರೆಗಳಿಲ್ಲದ ಗ್ರಾಮಗಳಲ್ಲಿ ಹೊಸಕೆರೆ ನಿರ್ಮಾಣ : 42.30 ಟಿ.ಎಂ.ಸಿ ಅಡಿ ನೀರು.
- ನೀರಾವರಿ ಸೌಲಭ್ಯವಿಲ್ಲದ 65.94 ಲಕ್ಷ ಹೆಕ್ಟೇರ್ ಒಣ ಭೂಮಿಗೆ = 968.00 ಟಿ.ಎಂ.ಸಿ ಅಡಿ ನೀರು.
- ಬೆಂಗಳೂರು ನಗರಕ್ಕೆ ಕುಡಿಯುವ ನೀರು :12.೦೦ ಟಿ.ಎಂ.ಸಿ ಅಡಿ ನೀರು.
- ಅರಣ್ಯ ಅಭಿವೃದ್ಧಿಗೆ: 5೦.೦೦ ಟಿ.ಎಂ.ಸಿ ಅಡಿ ನೀರು.
- ವಿದ್ಯುತ್ ಸ್ಥಾವರಗಳಿಗೆ:25.೦೦ ಟಿ.ಎಂ.ಸಿ ಅಡಿ ನೀರು.
- ಕೈಗಾರಿಕೆಗಳಿಗೆ :6೦.೦೦ ಟಿ.ಎಂ.ಸಿ ಅಡಿ ನೀರು.
ಒಟ್ಟು ಬೇಡಿಕೆ ನೀರು : 1450 ಟಿ.ಎಂ.ಸಿ ಅಡಿ ನೀರು.
ಈ ನೀರನ್ನು ಯಾವ ನದಿ ಮೂಲದಿಂದ ಬಳಸಬಹುದು
- ಪಶ್ಚಿಮಕ್ಕೆ ಹರಿಯುತ್ತಿರುವ ಹಳ್ಳಗಳ ನೀರು ಗುರುತ್ವಾಕಾರ್ಷಣೆಯಿಂದ : 268 ಟಿ.ಎಂ.ಸಿ ಅಡಿ ನೀರು.
- ಪಶ್ಚಿಮಕ್ಕೆ ಹರಿಯುತ್ತಿರುವ ಹಳ್ಳಗಳ ನೀರು ಲಿಫ್ಟ್ : 140 ಟಿ.ಎಂ.ಸಿ ಅಡಿ ನೀರು.
- ಕಾವೇರಿ ಪಾತ್ರಗಳಲ್ಲಿನ ಹೆಚ್ಚುವರಿ ನೀರು- ಗ್ರಾವಿಟಿ : 148 ಟಿ.ಎಂ.ಸಿ ಅಡಿ ನೀರು.
- ತುಂಗಾಭದ್ರಾ ಪಾತ್ರದಲ್ಲಿನ ಹೆಚ್ಚುವರಿ ನೀರು ಲಿಪ್ಟ್ : 136 ಟಿ.ಎಂ.ಸಿ ಅಡಿ ನೀರು.
- ಕೃಷ್ಣ ಜಲಾನಯನ ಪ್ರದೇಶಗಳ ಬಿ. ಸ್ಕೀಂ ನೀರು : 278 ಟಿ.ಎಂ.ಸಿ ಅಡಿ ನೀರು.
- ಕಬಿನಿ ನದಿಯಲ್ಲಿನ ಹೆಚ್ಚುವರಿ ನೀರು : 60 ಟಿ.ಎಂ.ಸಿ ಅಡಿ ನೀರು.
- ರಾಷ್ಟ್ರೀಯ ನದಿ ಜೋಡಣೆ ಗೋದಾವರಿ ಮತ್ತು ಮಹಾನದಿ ನೀರು:308 ಟಿ.ಎಂ.ಸಿ ಅಡಿ ನೀರು.
- ಸೋರಿಕೆಯಾಗುವ ನೀರು:112 ಟಿ.ಎಂ.ಸಿ ಅಡಿ ನೀರು.
ಒಟ್ಟು ಲಭ್ಯವಾಗುವ ನೀರು : 1450 ಟಿ.ಎಂ.ಸಿ ಅಡಿ ನೀರು.
ಈ ಪುಣ್ಯಾತ್ಮ ಯಾವ ಜಿಲ್ಲೆಯ, ಯಾವ ತಾಲ್ಲೂಕಿಗೆ, ಯಾವ ನದಿ ನೀರು ಕೊಡಬಹುದು ಎಂಬ ಬಗ್ಗೆ ಟೋಪೋಶಿಟ್‌ನಲ್ಲಿ ಗುರುತು ಮಾಡಿ, ಅದೇ ರೀತಿ ಯಾವ ನದಿ ನೀರನ್ನು ಯಾವ ನಂಬರಿನ ಟೀಪೋ ಶೀಟ್ ವ್ಯಾಪ್ತಿಯಲ್ಲಿ ಪಡೆಯ ಬಹುದು ಎಂಬ ಬಗ್ಗೆಯೂ ದಾಖಲಿಸಿದ್ದಾರೆ.
ಈ ವರದಿ ಅರ್ಥ ಮಾಡಿಕೊಳ್ಳುವ ಪುಣ್ಯಾತ್ಮ ಯಾರಾದರೂ ಇದ್ದಾರೆಯೇ?
ಇದು ಸರಿಯಾಗಿದೆ ಅಥವಾ ಸರಿಯಾಗಿಲ್ಲ ಎಂದು ಹೇಳುವ ತಾಕತ್ತು ಇರುವವರು ಯಾರಾದರೂ ಇದ್ದಾರೆಯೇ?