27th July 2024
Share

TUMAKURU:SHAKTHI PEETA FOUNDATION

 ದೇಶದಲ್ಲಿ ಅರಣ್ಯ ಸಂರಕ್ಷಣೆಗೆ ಇರುವ ಕಾನೂನುಗಳು ಮತ್ತು ಅರಣ್ಯ ಇಲಾಖೆಯವರಿಗೆ ಕೇಸ್ ಹಾಕಲು ಅಧಿಕಾರವಿರುವುದರಿಂದ  ಸಾರ್ವಜನಿಕರು ಮತ್ತು ಚುನಾಯಿತ ಜನಪ್ರತಿನಿಧಿಗಳು ಯಾವುದೇ ಒಂದು ಸಣ್ಣ ಮರಗಳನ್ನು ನಾಶಪಡಿಸಲು ಭಯಪಡುತ್ತಾರೆ.

ಅದೇ ಜನರು ನೀರಾವರಿ ಆಸ್ತಿಗಳ ಸಂರಕ್ಷಣೆಯನ್ನು ಮಾಡದೇ ನೀರಾವರಿ ರಚನೆಗಳನ್ನು ನಾಶಗೊಳಿಸಲು ಧೈರ್ಯ ಹೊಂದಿದ್ದಾರೆ. ಈ ಅಸಹಜತೆಯನ್ನು ಶಾಸಕಾಂಗದ ಮೂಲಕ ನಾವೇಕೆ ಪ್ರತಿಪಾದಿಸಬಾರದು, ಒಂದು ಸಾಮಾನ್ಯ ಮರಕ್ಕಿರುವ ಭಯ ನೀರಿನ ಯೋಜನೆಗಳಿಗೇಕೆ ಇಲ್ಲ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಪ್ರತಿಪಾದಿಸಿದರು.

 ನೀರಿನ ಬಳಕೆಯಲ್ಲಿ ನಾವು ಎಚ್ಚರವಹಿಸದೇ ಇದ್ದರೆ, ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ನೀರನ್ನು ಹಂಚದಿದ್ದರೆ ಯಾವುದೇ ಸರ್ಕಾರಗಳು ಇದ್ದರೆಷ್ಟು ಬಿಟ್ಟರೆಷ್ಟು ಎಂದು ಕಿಡಿಕಾರಿದರು. ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತುಮಕೂರು ಜಿಲ್ಲೆ ಸಮಗ್ರ ನೀರಾವರಿ ಯೋಜನೆ ರೂಪಿಸಲು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೆಂದ್ರಮೋದಿಯವರಿಗೆ ಈಗಾಗಲೇ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಒಂದು ಪ್ರಸ್ತಾವನೆ ಸಿದ್ಧಪಡಿಸುವುದು ಅಗತ್ಯವಾಗಿದೆ ಎಂದರು.

 ಅವರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ವರದಿ ಆಧಾರಿತ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯಡಿ ತುಮಕೂರು ಜಿಲ್ಲೆಯ ಫೈಲಟ್ ವರದಿ ಪ್ರಗತಿ ಪರಿಶೀಲನಾ ಸಭೆ ದಿನಾಂಕ:29.09.2020 ರಂದು ಬೆಂಗಳೂರಿನ ಆನಂದ್‌ರಾವ್ ವೃತ್ತದಲ್ಲಿರುವ ಕಾವೇರಿ ನೀರಾವರಿ ನಿಗಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

  ತುಮಕೂರು ಜಿಲ್ಲೆಯಲ್ಲಿರುವ 2715  ಗ್ರಾಮಗಳಲ್ಲಿ ಸುಮಾರು 4062 ಕೆರೆ-ಕಟ್ಟೆಗಳಿವೆ ಎಂದು ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಟ್ಸ್ ಅಧ್ಯಯನ ವರದಿಯಲ್ಲಿ ತಿಳಿಸಿದೆ. ಇದರಲ್ಲಿ ಎಲ್ಲಾ ಇಲಾಖೆಗಳಲ್ಲಿರುವ ದಾಖಲೆಗಳ ಪ್ರಕಾರ 1576 ಕೆರೆ-ಕಟ್ಟೆಗಳಿಗೆ ಮಾತ್ರ ಇಲಾಖೆಗಳಲ್ಲಿ ದಾಖಲೆ ಇದೆ. ಆದರೆ ಉಳಿದ 2486  ಜಲಸಂಗ್ರಹಾಗಾರಗಳಿಗೆ ದಾಖಲೆಗಳನ್ನು ಯಾರು ಇಟ್ಟುಕೊಳ್ಳಬೇಕು. ಇವುಗಳ ಮಾಲೀಕತ್ವ ಇಲಾಖೆ ಯಾವುದು ಎಂದು ಪ್ರಶ್ನಿಸಿದರು?

 ತುಮಕೂರು ಜಿಲ್ಲೆಯ ಸುಮಾರು 712 ಗ್ರಾಮಗಳಲ್ಲಿ ಯಾವುದೇ ಜಲಸಂಗ್ರಹಾಗಾರಗಳಿಲ್ಲ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ. ಈ ಗ್ರಾಮಗಳಲ್ಲಿ ಯಾವ ವಿಧವಾದ ಜಲಸಂಗ್ರಹಾಗಾರಗಳನ್ನು ನಿರ್ಮಾಣ ಮಾಡಬಹುದು ಎಂಬ ಬಗ್ಗೆ ಶೀಘ್ರವೇ ಆಯಾ ಗ್ರಾಮ ಪಂಚಾಯಿತಿಗಳು ವರದಿ ನೀಡುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

 ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ತಾಂತ್ರಿಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರು ಮಾತನಾಡಿ, ಈ ವರದಿ ಪ್ರಕಾರ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಗೆ ಸುಮಾರು 35 ರಿಂದ 40 ಟಿ.ಎಂ.ಸಿ ಅಡಿ ನೀರಿನ ಅಗತ್ಯವಿದೆ. ಹಾಲಿ ಹೇಮಾವತಿ ಯೋಜನೆ, ಎತ್ತಿನಹೊಳೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಮತ್ತು ತುಂಗಭಧ್ರಾ ಯೋಜನೆಯಡಿ ಜಿಲ್ಲೆಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ಸುಮಾರು 13 ಟಿ.ಎಂ.ಸಿ ಅಡಿ ನೀರು ಅಲೋಕೇಷನ್ ಇದೆ. ಕೊರತೆಯಿರುವ ಸುಮಾರು 27 ಟಿ.ಎಂ.ಸಿ ಅಡಿ ನೀರನ್ನು ಯಾವ ನದಿ ಮೂಲದಿಂದ ಪಡೆಯ ಬಹುದು ಎಂಬ ಬಗ್ಗೆ ಪರಿಕಲ್ಪನಾ ವರದಿಯನ್ನು ಅಂತಿಮಗೊಳಿಸಲೇ ಬೇಕು ಎಂದು ಪ್ರತಿ ಪಾದಿಸಿದರು.

 ಪ್ಲಡ್ ಇರ್ರಿಗೇಷನ್‌ಗೆ ಬದಲಾಗಿ ಇಸ್ರೇಲ್ ಮಾದರಿ ಪದ್ಧತಿ ಅಳವಡಿಸಿದರೆ, ಉಳಿಯುವ ನೀರಿನಲ್ಲಿ ಕೆರೆ-ಕಟ್ಟೆಗಳಿಗೆ ಅಲೋಕೇಷನ್ ಮಾಡಬುದು. ಆದರೇ ಇಸ್ರೇಲ್ ಮಾದರಿ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಗಳ  ಬಗ್ಗೆ ಮಾಹಿತಿ ಸಂಗ್ರಹಿಸಲು ಎಸ್.ಇ ಶ್ರೀ ವರದಯ್ಯನವರು ಮತ್ತು ಇಇ ಶ್ರೀ ಮೋಹನ್ ಕುಮಾರ್ ರವರಿಗೆ ಸೂಚಿಸಿದರು. ಅವರಿಬ್ಬರು ಮಾತನಾಡಿ ನಾವು ಈಗಾಗಲೇ ಪ್ರಸ್ತಾವನೆಗೆ ಅನುಮತಿ ನೀಡಲು ತಮ್ಮ ಕಚೇರಿಗೆ ಸಲ್ಲಿಸಲಾಗಿದೆ, ತಾವು ಅನುಮತಿ ನೀಡಿದ ನಂತರ ವರದಿ ಸಿದ್ಧಪಡಿಸುವುದಾಗಿ ತಿಳಿಸಿದರು.

  ಈ ಜಲಸಂಗ್ರಹಾಗಾರಗಳಿಗೆ ಮಳೆಯಿಂದ ವಾರ್ಷಿಕ ಎಷ್ಟು ನೀರು ಬರಬಹುದು, ಕರಾಬುಹಳ್ಳಗಳ ಅಭಿವೃದ್ಧಿ ಪಡಿಸುವುದರಿಂದ   ಎಷ್ಟು ನೀರನ್ನು ಅಧಿಕೃತವಾಗಿ ಪಡೆಯ ಬಹುದು, ಇದರಲ್ಲಿ ಹಾಳಾಗಿರುವ ಕೆರೆಗಳು ಎಷ್ಟಿವೆ. ಶೇ. ಎಷ್ಟು ಪ್ರಮಾಣದ ನೀರನ್ನು ಕೆರೆಗಳಿಗೆ ಅಲೋಕೇಷನ್ ಮಾಡಬೇಕು ಎಂಬ ಬಗ್ಗೆ ನಿರ್ಧಿಷ್ಠ ರೂಪು ರೇಷೆಗಳನ್ನು ನಿಗದಿ ಪಡಿಸುವುದು ಅಗತ್ಯವಾಗಿದೆ ಎಂದು ತುಮಕೂರು ಹೇಮಾವತಿ ನಾಲಾವಲಯದ ಮುಖ್ಯ ಇಂಜನಿಯರ್ ಶ್ರೀ ಮಹೇಶ್ ಅಭಿಪ್ರಾಯ ಪಟ್ಟರು.

  ಇ-ಐ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎನ್.ರಂಗನಾಥ್‌ರವರು ಮಾತನಾಡಿ, ತುಮಕೂರು ಜಿಲ್ಲೆಗೆ ಕೊರತೆಯಿರುವ ನದಿ ನೀರನ್ನು ಜಿ.ಎಸ್.ಪರಮಶಿವಯ್ಯನವರ ವರಧಿ ಆಧಾರಿತ ಮತ್ತು ಕೇಂದ್ರ ಸರ್ಕಾರದ ನ್ಯಾಷನಲ್ ವಾಟರ್ ಡೆವಲಪ್‌ಮೆಂಟ್ ಅಥಾರಿಟಿ ಅಧ್ಯಯನ ಮಾಡಿರುವ ಪ್ರಕಾರ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ ನದಿ ನೀರು, ಕುಮಾರಧಾರ ಯೋಜನೆ ನೀರು, ಶರಾವತಿ ನೀರು, ಬೇಡ್ತಿ ಮತ್ತು ಅಘಿನಾಶಿನಿ ನೀರು ಸೇರಿದಂತೆ ಹಲವಾರು ನದಿ ಮೂಲಗಳಿಂದ ಪಡೆಯಲು ಅವಕಾಶಗಳಿವೆ ಎಂದು ಸಲಹೆ ನೀಡಿದರು.

 ರಾಜ್ಯ ದಿಶಾ ಸಮಿತಿ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರು ಮಾತನಾಡಿ, ಈ ವರದಿಯ ಕರಡನ್ನು ಮೂರನೇ ವ್ಯಕ್ತಿ ಆಧಾರದಲ್ಲಿ ತಪಾಸಣೆ ಮಾಡಿಸಿ, ಇನ್ನೂ ಯಾವ ಅಂಶಗಳ ಅಗತ್ಯವಿದೆ ಎಂಬ ಬಗ್ಗೆ ಪರಿಶೀಲಿಸಿ, ಜಿಲ್ಲೆಯ 330 ಗ್ರಾಮ ಪಂಚಾತಿಯಿಗಳು, 11 ನಗರ ಸ್ಥಳೀಯ ಸಂಸ್ಥೆಗಳಿಗೂ ಸಲ್ಲಿಸಿ ತಪಾಸಣೆ ಮಾಡಿಸುವುದು ಅಗತ್ಯವಾಗಿದೆ, ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಲಿಖಿತ ಅಭಿಪ್ರಾಯ ಪಡೆಯ ಪಡೆಯಲು ಸಲಹೆ ನೀಡಿದರು.

 ಇದೊಂದು ದೇಶದಲ್ಲಿಯೇ ವಿನೂತನವಾದ ಯೋಜನೆ, ಫೈಲಟ್ ಆಗಿ ಸಂಸದರ ಆದರ್ಶ ಗ್ರಾಮ ಯೋಜನೆಯ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ ಮಾಡಲು ಕಾಮಗಾರಿ ಆರಂಭಿಸುವುದು ಮತ್ತು ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಮಾನ್ಯ ಪ್ರಧಾನ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದು ಸೂಕ್ತ ಎಂದರು.

  ಜಿಯೋಮೆಟಿಕ್ ಸೆಂಟರ್ ಮತ್ತು ಶ್ರೀ ಸತ್ಯಾನಂದ್‌ರವರು ಕುಳಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲು, ಇ-ಟೆಕ್ನಾಲಜಿ ಶ್ರೀ ರಂಗನಾಥ್‌ರವರು ಪರಿಶೀಲಿಸಿ ಸೂಕ್ತ ಸಲಹೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಶ್ರೀ ಕೆ.ಜೈಪ್ರಕಾಶ್‌ರವರಿಗೆ ಬಸವರಾಜ್‌ರವರು ಸಲಹೆ ನೀಡಿದರು. 

 ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಟ್ಸ್ ಅಧ್ಯಯನ ವರದಿ ನಿಜಕ್ಕೂ ಅರ್ಥಪೂರ್ಣವಾಗಿದೆ, ಗ್ರಾಸ್ ರೂಟ್ ಮಟ್ಟದ ತಾಜಾ ಜಿಐಎಸ್ ಆಧಾರಿತ ಮಾಹಿತಿ ಸಂಗ್ರಹಣೆ ಬಹಳ ಚೆನ್ನಾಗಿ ಮಾಡಿದ್ದಾರೆ. ವರದಿಗೆ ಇನ್ನೂ ಸ್ವಲ್ಪ ಮೇಕಫ್ ಮಾಡಬೇಕು. ಶ್ರೀ ಸತ್ಯಾನಂದ್‌ರವರನ್ನು ಇಂಜಿನಿಯರ್‍ಸ್ ಡೇಯಲ್ಲಿ ಸನ್ಮಾನ ಮಾಡುವ ಮೂಲಕ ಅವರಿಗೆ ಸ್ಪೂರ್ತಿ ತುಂಬಲು ಅಗತ್ಯ ಕ್ರಮ ಕೈಗೊಳ್ಳಲು  ಕೆ.ಜೈಪ್ರಕಾಶ್‌ರವರು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ವಿವಿಧ ಹಂತದ ಅಧಿಕಾರಿಗಳು ಬಾಗವಹಿಸಿದ್ದರು.