19th April 2024
Share

TUMAKURU:SHAKTHI PEETA FOUNDATION

ಬಹಳ ವರ್ಷಗಳಿಂದ ತುಮಕೂರು ನಗರದ ಘನತ್ಯಾಜ್ಯವಸ್ತು ಸಾಗಿಸುವ ಆಟೋಗಳು ಮತ್ತು ಲಾರಿಗಳ ಹೆಸರಿನಲ್ಲಿ ಕೋಟಿಗಟ್ಟಲೆ ಹಣದ ಲೂಟಿ ನಡೆಯುತ್ತಿದೆ ಎಂಬ ಕೂಗು ಇತ್ತು. ಇದು ದೇಶದ ಎಲ್ಲಾ ನಗರಗಳ ಬಹು ದೊಡ್ಡ ಹಗರಣ.

ತುಮಕೂರು ಸ್ಮಾರ್ಟ್ ಸಿಟಿ ಇವುಗಳಿಗೆ ಕಡಿವಾಣ ಹಾಕಬೇಕು, ಪ್ರತಿ ದಿನವೂ ನಗರದ ಜನತೆಯ ಮನೆಬಾಗಿಲಿಗೆ ಹೋಗಿ ಕಸವನ್ನು ತರಬೇಕು. ತಪ್ಪಿದಲ್ಲಿ ನಿರ್ಧಿಷ್ಠ ಆಟೋ/ಲಾರಿಗಳ ದಿನ ಬಾಡಿಗೆ ಕಡಿತ ಮಾಡಬೇಕು ಈ ಮೂಲಕ ಜನತೆಗೆ ಸೌಕರ್ಯ ಒದಗಿಸಬೇಕು ಎಂಬ ಕನಸು ಕಂಡಿತ್ತು.

 ಯೋಜನೆಯಂತು ಜಾರಿಯಾಗಿದೆ, ಆದರೆ ನಗರದ ಜನತೆ ಇದೂವರೆಗೂ ಈ ಪ್ರಯೋಜನ ಪಡೆದಿಲ್ಲ, ಜನತೆಗೆ ಮೊದಲು ಮಾಹಿತಿಯೇ ಇಲ್ಲ, ಆಟೋ ಬಂದರೆ ಕಸಹಾಕುತ್ತಾರೆ, ಇಲ್ಲದಿದ್ದರೆ ಕಸದ ವಾಸನೆ ಕುಡಿಯುತ್ತಾರೆ. ಮನೆಯ ಮುಂದೆ ಬಾಗಿಲ ಪಕ್ಕದಲ್ಲಿ ಕಸದ ಟಬ್ ಆರಾಮವಾಗಿ ಕೂರುತ್ತವೆ.

 ನಗರದ ಜನತೆಯೂ ನಮ್ಮ ಮನೆಯ ಕಸ ತೆಗೆದುಕೊಂಡು ಹೋಗುವ ಕಸದ ಆಟೋ ಈಗ ಎಲ್ಲಿದೆ, ದಿನ ಆಟೋ ಬರುತ್ತದೆ ಅಥವಾ ಬರುವುದಿಲ್ಲಾ ಎಂಬ ತಾಜಾ ಜಿಐಎಸ್ ಆಧಾರಿತ ಮಾಹಿತಿಯನ್ನು ತಮ್ಮ ಮೊಬೈಲ್‌ನಲ್ಲಿಯೇ ಮಾಹಿತಿ ಪಡೆಯಬಹುದಂತೆ.

 ಅಷ್ಟೆ ಏಕೆ ತುಮಕೂರು ಮಹಾನಗರ ಪಾಲಿಕೆ ಪ್ರತಿ ದಿನದ ರೀಡಿಂಗ್ ನೋಡಿ, ಯಾವ ಆಟೋ ಈ ದಿನ ಕೆಲಸ ಮಾಡಿಲ್ಲ ಅಥವಾ ಕಡಿಮೆ ಕೀಲೋಮೀಟರ್ ಓಡಿದೆ, ಕೆಲವು ಪ್ರದೇಶಗಳ ರಸ್ತೆಗೆ ಹೋಗಿಲ್ಲ ಎಂಬ ಮಾಹಿತಿ ಆಧರಿಸಿ ಗುತ್ತಿಗೆದಾರರ ಮೇಲೆ ಕ್ರಮವಹಿಸಬೇಕು. ಅಷ್ಟು ಹಣವನ್ನು ಕಡಿತಗೊಳಿಸಬೇಕು. ಅವರ ಮೇಲೆ ನಿಯಮ ಪ್ರಕಾರ ಕ್ರಮ ತೆಗೆದು ಗೊಳ್ಳಬೇಕು.

 ತುಮಕೂರು ಸ್ಮಾರ್ಟ್ ಸಿಟಿ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಶ್ರೀ ಅಶ್ವಿನ್ ಹೇಳುತ್ತಾರೆ. ಈ ಬಗ್ಗೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರಿಗೆ  ಮಾತನಾಡಿದಾಗ, ಈ ಬಗ್ಗೆ ಜನತೆಗೆ ಜಾಗೃತಿ ಮಾಡುವುದು ಹಾಗೂ ಕಡಿಮೆ ಕೀಲೋಮೀಟರ್ ಓಡಿರುವ ಆಟೋಗಳ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

 ಪ್ರತಿ ದಿನ ಅನಾಲೀಸಿಸ್ ಮಾಡದೇ ಇದ್ದಲ್ಲಿ ಜಿಪಿಎಸ್/ ಜಿಐಎಸ್ ಲೇಯರ್ ಮಾಡುವ ಉದ್ದೇಶ ಏನು? ಎಂಬ ಪ್ರಶ್ನೆ ಸಹಜವಾಗಿ ಮೂಡಲಿದೆ. ಯೋಜನೆಯ ಪಲಿತಾಂಶವನ್ನು ಕಾದು ನೋಡೋಣ?