23rd April 2024
Share
G.S.BASAVARAJ, K.JAIPRAKASH. MANJAPPA, SHANKARALIGEGOWDA, MAHESH & KUNDARANAHALLI RAMESH

TUMAKURU:SHAKTHIPEETA FOUNDATION

‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 21 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-18  ದಿನಾಂಕ: 30.11.2020

 ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ ರಾಜ್ಯ ಜಲಸಂಪನ್ಮೂಲ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರು ಕರೆದಿರುವ ಸಭೆ ಹಿನ್ನಲೆಯಲ್ಲಿ ಕಾವೇರಿ ನೀರಾವರಿ ನಿಗಮ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಸದಸ್ಯರು ಹಾಗೂ ಸಂಸದರಾದ  ಶ್ರೀ ಜಿ.ಎಸ್.ಬಸವರಾಜ್ ರವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರೊಂದಿಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.

  ದಿನಾಂಕ:30.11.2020 ರಂದು ನಿಗಮದ ಕಚೇರಿಗೆ ತೆರಳಿ, ಕೇಂದ್ರ ಸರ್ಕಾರದ ನದಿಜೋಡಣೆ ಯೋಜನೆಯಡಿಯಿಂದ ರಾಜ್ಯಕ್ಕೆ ಆಗುವ ಅನೂಕೂಲಗಳು ಮತ್ತು ರಾಜ್ಯದ ಯಾವ, ಯಾವ ನದಿಜೋಡಣೆ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಚರ್ಚಿಸಲಾಯಿತು.

 ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವ ಸುಮಾರು 11 ಜಿಲ್ಲೆಗಳಾದ ತುಮಕೂರು, ಹಾಸನ, ಚಿಕ್ಕಮಂಗಳೂರು, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ಮಡಕೇರಿ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ವಾಟರ್ ಬಡ್ಜೆಟ್ ಯಾರು ಮಾಡಿದ್ದಾರೆ? Sir

 ಕೇಂದ್ರ ಸರ್ಕಾರದ ಅಟಲ್ ಭೂಜಲ್ ಯೋಜನೆಯಡಿ ಏನೇನು ಮಾಡಿದ್ದಾರೆ. ಜಲಾಮೃತ ಯೋಜನೆಯಡಿ ಕೈಗೊಂಡಿರುವ ಸಮೀಕ್ಷೆಗಳು ಏನು?  ಪ್ರಧಾನ ಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಡಿಸ್ಟ್ರಿಕ್ಟ್ ಇರ್ರಿಗೇಷನ್ ಪ್ಲಾನ್‌ನಲ್ಲಿರುವ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೀರಾ? ಕೇಂದ್ರದ ಜಲಜೀವನ್ ಮಿಷನ್ ಅಡಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ನೀರು ನೀಡಲು ಮಾಸ್ಟರ್ ಪ್ಲಾನ್ ನೀಡಿದ್ದೀರಾ? Sir

 ಕೇಂದ್ರ ನದಿ ಜೋಡಣೆ ಯೋಜನೆಯಿಂದ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಯಾವ ಯೋಜನೆಯಡಿ, ಎಷ್ಟೆಷ್ಟು ಪ್ರಮಾಣದ ನೀರು ದೊರೆಯಲಿದೆ, ಆ ನೀರನ್ನು ಯಾವ ಭಾಗಕ್ಕೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಅಧ್ಯಯನ ಮಾಡಿದ್ದೀರಾ? Sir

 ಕೇಂದ್ರ ಅಂತರ್ಜಲ ಅಭಿವೃದ್ಧಿ ಸಂಸ್ಥೆ ಮತ್ತು ರಾಜ್ಯ ಅಂತರ್ಜಲ ಅಭಿವೃದ್ಧಿ ಸಂಸ್ಥೆ, ಕೇಂದ್ರ ಸರ್ಕಾರದ  NWDA & CWC ಸಂಸ್ಥೆಗಳು ಪ್ರಸ್ತುತ ನಿಗಮದ ವ್ಯಾಪ್ತಿಗೆ ಮಾಡಿರುವ ವರದಿಗಳು ಯಾವುವು ಎಂಬ ಎಲ್ಲಾ ಅಂಶಗಳನ್ನು ಒಂದೆಡೆ ಕಲೆ ಹಾಕಿ, ಅತ್ಯಂತ ಉತ್ತಮವಾದ ಯೋಜನೆ ರೂಪಿಸುವುದು ಅಗತ್ಯವಾಗಿದೆ.Sir

ಕೇಂದ್ರ ಸರ್ಕಾರದಿಂದ ಅತಿ ಹೆಚ್ಚಿನ ಅನುದಾನ ಪಡೆಯ ಬೇಕಾದರೆ ಇವೆಲ್ಲಾ ಕಸರತ್ತು ಮಾಡಬೇಕಾಗುವುದು. ಕೇಂದ್ರ ನದಿ ಜೋಡಣೆ ಯೋಜನೆಯ ಮಾರ್ಗದರ್ಶಿಯ ಅಂಶಗಳ ಬಗ್ಗೆ ಆಳವಾದ ಅಧ್ಯಯನ ಅಗತ್ಯವಾಗಿದೆ, ನಮ್ಮ ದಿಶಾ ಸಮಿತಿಯ ಮುಖ್ಯ ಉದ್ದೇಶವೇ ಇದಾಗಿದೆ. ಎಂದು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ವಿಷಯ ಮಂಡಿಸಿದರು.’

 ಶ್ರೀ ಜಿ.ಎಸ್.ಬಸವರಾಜ್‌ರವರು ಮಾತನಾಡಿ, ಇಲಾಖೆಗಳ ಸಮನ್ವಯ ಕೊರತೆಯಿಂದ ಯಾರು, ಯಾರು ಏನು ಮಾಡಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ, ನಿಗಮ ಈ ಎಲ್ಲಾ ಮಾಹಿತಿಗಳನ್ನು ಕ್ರೋಡೀಕರಿಸಿ ಒಂದು ಉತ್ತಮವಾದ ಕಲ್ಪನಾ ವರದಿ ಮಾಡಿ, ಜೊತೆಗೆ ನಿಗಮದ ಒಬ್ಬ ಜೂನಿಯರ್ ಇಂಜಿನಿಯರ್‌ನಿಂದ ಆರಂಭಿಸಿ, ಮುಖ್ಯ ಇಂಜಿನಿಯರ್‌ವರೆಗೂ  ಪ್ರತಿಯೊಬ್ಬರೂ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಅವರ ಪ್ರದೇಶಗಳ ಯೋಜನೆ ಬಗ್ಗೆ ಬೆರಳ ತುದಿಯಲ್ಲಿ ಡಿಜಿಟಲ್ ತಾಜಾ ಮಾಹಿತಿ ಇರುವಂತೆ ಯೋಜನೆ ರೂಪಿಸಿ. ಎಂದು ಸಲಹೆ ನೀಡಿದರು. 

 ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಡಿಯಲ್ಲಿನ ಜಿಯೋಮೆಟಿಕ್ ಸೆಂಟರ್,  ಮೈಸೂರಿನಲ್ಲಿರುವ ಇನ್‌ವೆಸ್ಟಿಗೇಷನ್ ಸಂಸ್ಥೆ, ಬೆಂಗಳೂರಿನಲ್ಲಿರುವ IWARM ಸಂಸ್ಥೆ ಮತ್ತು ಧಾರವಾಢದಲ್ಲಿರುವ ವಾಲ್ಮಿ ಸಂಸ್ಥೆಗಳು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಏನೇನು ಕೆಲಸ ಮಾಡಿವೆ.

 ಇವರೆಲ್ಲಾ ಕುಂಭಕರ್ಣನ ಹಾಗೆ ನಿದ್ದೆ ಮಾಡುತ್ತಿದ್ದಾರೆ, ಇವರನ್ನು ಸಮರ್ಪಕವಾಗಿ ಬಳಸಿಕೊಳ್ಳಲೇ ಬೇಕು. ಇವರಿಗೆ ಈ ಕೆಲಸ ಮಾಡಿ ಎಂದು ಹೇಳುವವರೇ ಇಲ್ಲದಂತಾಗಿದೆ. ಈ ಸಂಸ್ಥೆಗಳು ಇದೂವರೆಗೂ ರಾಜ್ಯಾಧ್ಯಾಂತ ಏನೇನು ಮಾಡಿದ್ದಾರೆ. ಎಂಬ ಮಾಹಿತಿ ಸಂಗ್ರಹ ಮಾಡುವುದು ಸೂಕ್ತವಾಗಿದೆ.

 ನಾನಂತು ದೃಢ ನಿರ್ಧಾರ ಮಾಡಿದ್ದೇನೆ, ಯೋಜನೆ ಪೂರ್ಣಗೊಳ್ಳುವವರೆಗೂ, ಕೇಂದ್ರ ಮತ್ತು ರಾಜ್ಯದ  ಎಲ್ಲಾ ಇಲಾಖೆಗಳ ಅಧಿಕಾರಿಗಳ ಮನವೊಲಿಸಿ, ದೇಶಕ್ಕೆ ಮಾದರಿ ಯೋಜನೆ ಸಿದ್ಧಪಡಿಸುವವರೆಗೂ ಬಿಡುವುದಿಲ್ಲ ಎಂದು ಘೋಶಿಸಿದರು.’

 ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರು ಮಾತನಾಡಿ, ಹಾಜರಿದ್ದ ಮೂರು ಜನ ಮುಖ್ಯ ಇಂಜಿನಿಯರ್‌ಗಳಾದ ತುಮಕೂರಿನ ಶ್ರೀ ಮಹೇಶ್‌ರವರು, ಹಾಸನದ ಶ್ರೀ ಮಂಜಪ್ಪನವರು ಮತ್ತು ಮೈಸೂರಿನ ಶ್ರೀ ಶಂಕರಲಿಂಗೇಗೌಡರಿಗೆ ಸೂಚಿಸಿ, ಇದೂವರೆಗೂ ಕೇಂದ್ರ ಜಲಶಕ್ತಿ ಸಚಿವಾಲಯದ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ರಾಜ್ಯ ದಿಶಾ ಸಮಿತಿ ಸದಸ್ಯರಾದ  ಕುಂದರನಹಳ್ಳಿ ರಮೇಶ್‌ರವರು ಹೇಳಿದ ಪ್ರತಿಯೊಂದು ಅಂಶಗಳ ಮಾಹಿತಿ ಸಂಗ್ರಹಸಿ, ಇಡೀ ದೇಶಕ್ಕೆ ಉತ್ತಮವಾದ ಯೋಜನೆ ರೂಪಿಸೋಣ.

 ದೇಶದ ಬೆಸ್ಟ್ ಪ್ರಾಕ್ಟಿಸ್ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸೋಣ, ಮಾನ್ಯ ಪ್ರಧಾನಿಗಳ, ಮಾನ್ಯ ಕೇಂದ್ರ ಜಲಶಕ್ತಿ ಸಚಿವರ, ಮಾನ್ಯ ಮುಖ್ಯ ಮಂತ್ರಿಗಳ ಮತ್ತು ಮಾನ್ಯ ರಾಜ್ಯ ಜಲಸಂಪನ್ಮೂಲ ಸಚಿವರ ಆಶಯಗಳಿಗೆ ಸ್ಪಂಧಿಸುವಂತಹ ಬಹುಪಯೋಗಿ ಯೋಜನೆ ರೂಪಿಸೋಣ.

 ಊರಿಗೊಂದು ಕೆರೆ – ಕೆರೆಗೆ ನದಿ ನೀರು ಯೋಜನೆ’ ಗೆ ಪೂರಕವಾಗಿ, ತುಮಕೂರು ಜಿಲ್ಲಾ ದಿಶಾ ಸಮಿತಿ ಸಿದ್ಧಪಡಿಸಿರುವ ಮಾಹಿತಿಯಂತೆ ಉಳಿದ 10 ಜಿಲ್ಲೆಗಳಿಗೂ ಸಿದ್ಧಪಡಿಸಿ, ಮಾನ್ಯ ಮುಖ್ಯ ಮಂತ್ರಿಯವರು, ಮಾನ್ಯ ಪ್ರಧಾನ ಮಂತ್ರಿಯವರೆಗೆ ಪತ್ರ ಬರೆದಿರುವ ಪ್ರಕಾರ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ಸಿದ್ಧಪಡಿಸ ಬೇಕಿದೆ.

 ಮಾನ್ಯ ಮುಖ್ಯ ಮಂತ್ರಿಯವರು ಸೂಚನೆ ನೀಡಿರುವಂತೆ, ಪ್ರಸ್ತುತ ನಾವೂ ನಿಗಮದ ವ್ಯಾಪ್ತಿಯ 11 ಜಿಲ್ಲೆಗಳಿಗೂ ಸಮಗ್ರವಾದ ಯೋಜನೆ ರೂಪಿಸಲೇ ಬೇಕಿದೆ. ಡಿಪಿಆರ್ ಮಾಡುವ ಮುನ್ನ ಕಲ್ಪನಾ ವರದಿ’ ಯನ್ನು ನಾವೂ ಸಿದ್ಧಪಡಿಸಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸೋಣ ಎಂದು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಮೂರು ಜನ ಮುಖ್ಯ ಇಂಜಿನಿಯರ್‌ಗಳು ನಾವು ಇಂದಿನಿಂದಲೇ ಕಾರ್ಯ ಆರಂಭಿಸಿಸುತ್ತೇವೆ, ನಮಗೂ ಈ ಯೋಜನೆಯ ಬಗ್ಗೆ ವಿಶೇಷ ಆಸಕ್ತಿ ಇದೆ. ಪೂರಕವಾದ ಎಲ್ಲಾ ಮಾಹಿತಿಗಳನ್ನು ಕ್ರೋಡೀಕರಿಸಿ ಕಲ್ಪನಾ ವರದಿ ತಯಾರಿಸುತ್ತೇವೆ ಎಂದು ಹೇಳಿದ ಮಾತುಗಳು ನನಗೆ ಮೂರು ಜನರು ಪ್ರತಿಜ್ಞೆ’ ಮಾಡಿದಂತೆ ಭಾಸವಾಯಿತು.

 ಎಂಡಿಯವರು ನಮ್ಮ ನಿಗಮದ ಎಲ್ಲಾ ಇಂಜಿನಿಯರ್‌ಗಳ ಸಭೆ ಕರೆದು, ಈ ಯೋಜನೆ ಬಗ್ಗೆ ಒಂದು ಸಂವಾದ’ ಮಾಡೋಣ, ಎಲ್ಲರ ಅಭಿಪ್ರಾಯ ಸಂಗ್ರಹಿಸೋಣ, ಯಾರ ತಲೆಯಲ್ಲಿ ಯಾವ ಯೋಜನೆಗಳು ಅಡಗಿವೆ ಎಂಬ ಪ್ರತಿಭೆ ಗುರುತಿಸೋಣ’. ನಮ್ಮ ಎಲ್ಲಾ ಟೀಂ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಒಂದು ಕಾಮನ್ ವೇದಿಕೆ’ ಯಾಗಲಿದೆ ಎಂಬ ನಿಲುವು ಬಹಳ ಉತ್ತಮವಾಗಿದೆ. 

ಎಲ್ಲಾ ನಿಗಮಗಳು ಅವರವರ ವ್ಯಾಪ್ತಿಯಲ್ಲಿ ಕೆಲಸ ಆರಂಭ ಮಾಡುವುದು ಸಮಯೋಚಿತವಾಗಿದೆ.