TUMAKURU:SHAKTHIPEETA FOUNDATION
‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’
ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 25 ದಿವಸ.
ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-19 ದಿನಾಂಕ: 04.02.2020
ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೊಂದಿಗೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ರಾಜ್ಯದ ನದಿ ಜೋಡಣೆ ಯೋಜನೆಯ ಬಗ್ಗೆ ವಿವರವಾಗಿ ಸಮಾಲೋಚನೆ ನಡೆಸಿದರು.
ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಲೋಕಸಭಾ ಸದಸ್ಯರ ಸಭೆಯಲ್ಲಿ ನದಿಜೋಡಣೆ ಬಗ್ಗೆ ಬಹುತೇಕ ಎಲ್ಲಾ ಸಂಸದರ ಅಭಿಪ್ರಾಯವೂ ಒಮ್ಮತವಾಗಿತ್ತು. ಕೇಂದ್ರ ಸರ್ಕಾರ ಎನ್.ಪಿ.ಪಿ ಯೋಜನೆಯಡಿಯಲ್ಲಿ ಶೇ 90 ರಷ್ಟು ಅನುದಾನ ನೀಡಲಿದೆ.
ಜೊತೆಗೆ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಶೇ ೪೭ ರಷ್ಟು ಹಣ ನೀಡಲಿದೆ. ನಮ್ಮ ಸರ್ಕಾರ ಬುದ್ದಿವಂತಿಕೆಯಿಂದ ಯೋಜನೆ ರೂಪಿಸಿದಲ್ಲಿ ಯಶಸ್ವಿ ಆಗಬಹುದು. ಬೆಂಗಳೂರು ಮತ್ತು ಇತರ ನಗರ ಪ್ರದೇಶಗಳಿಗೂ ಕುಡಿಯುವ ನೀರಿನ ಸರಬರಾಜಿಗಾಗಿಯೂ ಯೋಜನೆ ರೂಪಿಸಲೇ ಬೇಕಿದೆ.
ಎಲ್ಲಾ ಇಲಾಖೆಗಳು ಸಮನ್ವಯದಿಂದ ಯೋಜನೆ ರೂಪಿಸಬೇಕು. ಅಗತ್ಯ ಬಿದ್ದಲ್ಲಿ ನಮ್ಮ ರಾಜ್ಯ ಸರ್ಕಾರದ ಪಾಲಿನ ಹಣವನ್ನು ಸಾಲದ ರೂಪದಲ್ಲಿ ಅಥವಾ ಬಾಂಡ್ ರೂಪದಲ್ಲಿ ಪಡೆಯ ಬಹುದಾಗಿದೆ ಎಂಬ ಅಂಶದ ಬಗ್ಗೆ ವಿವರವಾಗಿ ಸಮಾಲೋಚನೆ ನಡೆಸಿದರು.
ಕೇಂದ್ರ ಸರ್ಕಾರದ ನದಿಜೋಡಣೆ ಮತ್ತು ರಾಜ್ಯ ಸರ್ಕಾರದ ನದಿ ಜೋಡಣೆ ಬಗ್ಗೆ ಕೇಂದ್ರ ಸರ್ಕಾರದ ಎನ್.ಪಿ.ಪಿ ಯೋಜನೆಯಡಿಯಲ್ಲಿ ಅನುದಾನ ಪಡೆಯಲು ವಿವರವಾದ ಯೋಜನಾ ವರದಿ ತಯಾರಿಸಲು, ತಾವು ಈಗಾಗಲೇ ದಿನಾಂಕ:09.11.2020 ರಂದು ಆದೇಶ ನೀಡಿರುವುದರಿಂದ ಶೀಘ್ರವಾಗಿ ಡಿಪಿಆರ್ ಮಾಡಲು ಸಂಭಂಧಿಸಿದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ’ಊರಿಗೊಂದು ಕೆರೆ- ಆಕೆರೆಗೆ ನದಿ ನೀರು’ ಯೋಜನೆಯಡಿಯಲ್ಲಿ ನದಿ ನೀರು ಅಲೋಕೇಷನ್ ಮಾಡುವ ಮೂಲಕ ಇತಿಹಾಸ ಸೃಷ್ಠಿಸ ಬಹುದು.
‘ಭಧ್ರಾ ಮೇಲ್ದಂಡೆ’ ಯೋಜನೆಗೆ ಕೇಂದ್ರ ಸರ್ಕಾರದ ಎನ್.ಪಿ.ಪಿ ಯೋಜನೆಯಡಿಯಲ್ಲಿ ಅನುದಾನ ಪಡೆಯಲು ಕೇಂದ್ರ ಸರ್ಕಾರ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಚಿಸಿರುವುದರಿಂದ ಫೈನಾನ್ಸ್ ಕ್ಲಿಯರೆನ್ಸ್ ಕೊಡಿಸಿ ಬೇಗ ಈ ಯೋಜನೆ ಮಂಜೂರಾತಿಗೆ ಅಧಿಕಾರಿಗಳಿಗೆ ಸೂಚಿಸಬೇಕಿದೆ.
’ಎತ್ತಿನಹೊಳೆ’ ಯೋಜನೆಗೆ ಕೇಂದ್ರ ಸರ್ಕಾರದ ಎನ್.ಪಿ.ಪಿ ಯೋಜನೆಯಡಿಯಲ್ಲಿ ಅನುದಾನ ಪಡೆಯಲು ಅಗತ್ಯಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವುದು ಅಗತ್ಯವಾಗಿದೆ ಎಂದು ವಿಷಯ ಹಂಚಿಕೊಂಡರು.
ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನಾವು ಈ ಯೋಜನೆಯನ್ನು ಮಾಡಲೇ ಬೇಕಿದೆ, ತಿಂಗಳಿಗೊಂದು ಸಂಸದರ ಸಭೆ ಮಾಡಲು ನಾನು ರೆಡಿಯಾಗಿದ್ದೇನೆ. ನೀವೂ ಮತ್ತು ಹಾವೇರಿ ಸಂಸದ ಶ್ರೀ ಶಿವಕುಮಾರಉದಾಸಿ ಸೇರಿದಂತೆ ಇಬ್ಬರು ಕೇಂದ್ರ ಜಲಶಕ್ತಿಯ ಸಮಿತಿಯಲ್ಲಿ ಸದಸ್ಯರಾಗಿದ್ದೀರಿ ಅಂತೀರಿ.
ರಾಜ್ಯದ ಜಲಸಂಪನ್ಮೂಲ ಸಚಿವರು ಮತ್ತು ನೀವೂ ಕುಳಿತು ಅಧಿಕಾರಿಗಳಿಗೊಂದಿಗೆ ಚರ್ಚಿಸಿ, ಶೀಘ್ರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳಿ, ನಮ್ಮ ನಾಯಕರಾದ ಅಟಲ್ ಬಿಹಾರಿ ವಾಜಪೇಯಿರವರ ಕನಸು ನದಿಜೋಡಣೆಯಾಗಿತ್ತು. ಮೋದಿಜಿಯವರು ಈ ಯೋಜನೆಗೆ ಬೆಂಬಲ ನೀಡಲಿದ್ದಾರೆ.
ರಾಜ್ಯದ ಎಲ್ಲಾ ಸಂಸದರು ಈ ಯೋಜನೆ ಜಾರಿಗೆ ಶ್ರಮಿಸಿ ಎಂದು ಸಲಹೆ ನೀಡಿದರು.