26th July 2024
Share

G.S.BASAVARAJ, SHIVAKUMAR UDASI, JAYASIMHA & KUNDARANAHALLI RAMESH.

‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 27 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-20 ದಿನಾಂಕ: 06.12.2020

TUMAKURU:SHAKTHIPEETA FOUNDATION

 ಕೇಂದ್ರ ಜಲಶಕ್ತಿ ಸಮಿತಿಯ ಸದಸ್ಯರುಗಳಾದ ಹಾಗೂ  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಹಾವೇರಿ ಲೋಕಸಭಾ ಸದಸ್ಯರಾದ ಶ್ರೀ ಶಿವಕುಮಾರ್ ಉದಾಸಿ ರವರೊಂದಿಗೆ  ರಾಜ್ಯದ ನದಿ ಜೋಡಣೆ ಯೋಜನೆಯ ಬಗ್ಗೆ ವಿವರವಾಗಿ ಸಮಾಲೋಚನೆ ನಡೆಸಿಲಾಯಿತು.

ದಿನಾಂಕ: 03.12.2020 ರಂದು ಬೆಂಗಳೂರಿನಲ್ಲಿ ರಾಜ್ಯ ಲೋಕೋಪಯೋಗಿ ಕಾರ್ಯದರ್ಶಿಯವರಾದ ಶ್ರೀ ಗುರುಪ್ರಸಾದ್‌ರವರ ಮಗಳ ನಿಶ್ಚಿತಾರ್ಥದಲ್ಲಿ ಇಬ್ಬರು ಒಟ್ಟಾಗಿದ್ದ ವೇಳೆಯಲ್ಲಿ  ಭಧ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆ ಯೋಜನೆಯನ್ನು ಎನ್.ಪಿ.ಪಿ ಯೋಜನೆಯಾಗಿ ಘೋಶಿಸಲು ಕೇಂದ್ರ ಸಚಿವರ ಮೇಲೆ ಒತ್ತಡ ತರುವುದು ಅಗತ್ಯವಾಗಿದೆ ಎಂಬ ಮನವರಿಕೆಯನ್ನು ಮಾಡಲಾಯಿತು.

 ಅದೇ ರೀತಿ ಮಾನ್ಯ ಮುಖ್ಯ ಮಂತ್ರಿಯವರು ಈಗಾಗಲೇ ಅದೇಶ ನೀಡಿರುವಂತೆ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿಯಲ್ಲಿ, 224 ವಿಧಾನಸಭಾ ಕ್ಷೇತ್ರಕ್ಕೂ ಸಾಮಾಜಿಕ ನ್ಯಾಯದಡಿಯಲ್ಲಿ ನದಿ ನೀರು ಹಂಚಿಕೆಗೆ ರಾಜ್ಯದ ನದಿ ಜೋಡಣೆ ಜಾರಿಗೆ ಇಬ್ಬರು ಸದಸ್ಯರು ಅವಿರತವಾಗಿ ಶ್ರಮಿಸಲು ಕಟಿಬದ್ಧವಾಗಿರುವುದಾಗಿ ತಿಳಿಸಿದರು. 

7 ನೇ ತಾರೀಖಿನ ನಂತರ ಇಬ್ಬರೂ ಸದಸ್ಯರು ರಾಜ್ಯ ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ನಡೆಸಲು ದಿನಾಂಕ ನಿಗದಿಗೊಳಿಸಿ, ಸಮರೋಪಾದಿಯಲ್ಲಿ ಡಿಪಿಆರ್ ಮಾಡುವ ಬಗ್ಗೆ ಚರ್ಚಿಸೋಣ ಎಂಬುದಾಗಿ ತಿಳಿಸಿದ್ದಾರೆ.

 ಮುಂದಿನ ಅಧಿವೇಶನದ ವೇಳೆಯಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚಿಸುವುದಾಗಿಯೂ, ಅಗತ್ಯ ಬಿದ್ದಲ್ಲಿ ರಾಜ್ಯದ ಎಲ್ಲಾ ಸಂಸದರು ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಲು ನಿಯೋಗ ಹೋಗುವ ಭರವಸೆಯನ್ನು ನೀಡಿದ್ದಾರೆ.