26th July 2024
Share
G.S.BASAVRAJ. SHASHIKUMAR, VEDANANDAMURTHY & KUNDARNAHALLI RAMESH

TUMAKURU: SHAKTHIPEETA FOUNDATION.

  ತುಮಕೂರು ನಗರ ಶರವೇಗದಲ್ಲಿ ಬೆಳೆಯುತ್ತಿದೆ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಲೋಕಲ್ ಪ್ಲಾನಿಂಗ್ ಏರಿಯಾ ವಿಸ್ತೀರ್ಣವನ್ನು ಹೆಚ್ಚಾಗಿ ಮಾಡುವ ಅನಿವಾರ್ಯತೆ ಇದೆ.

 ಕಾರಣ ಉದ್ದೇಶಿತ ರಿಂಗ್ ರಸ್ತೆ ಒಂದು ಬಾಗದಲ್ಲಿ ಅಂದರೆ ರಾಷ್ಟ್ರೀಯ ಹೆದ್ಧಾರಿ ಚಿಕ್ಕೊನಹಳ್ಳಿಯಿಂದ, ಮಲ್ಲಸಂದ್ರದ ಮೂಲಕ ರಾಷ್ಟ್ರೀಯ ಹೆದ್ಧಾರಿ ಶಿರಾ ಕಡೆಯ  ವಸಂತನರಸಾಪುರ ಕೈಗಾರಿಕಾ ವಲಯದವರೆಗೆ ಇನ್ ಪ್ರಿನ್ಸಿಪಲ್ ಅಪ್ರೂವ್ ಆಗಿದೆ.

 ರಾಷ್ಟ್ರೀಯ ಹೆದ್ಧಾರಿ ಶಿರಾಕಡೆಯಿಂದ  ವಸಂತನರಸಾಪುರ ಕೈಗಾರಿಕಾ ವಲಯ, ಸಿದ್ಧಗಂಗಾಮಠದ ಹಿಂಭಾಗದ ಮೂಲಕ ಬೆಂಗಳೂರು ಕಡೆಯ ಚಿಕ್ಕೊನಹಳ್ಳಿ ರಾಷ್ಟ್ರೀಯ ಹೆದ್ಧಾರಿ ರಸ್ತೆಯ ಭಾಗದ ಇನ್ನೊಂದು ಪ್ರಸ್ತಾವನೆ ಸಲ್ಲಿಬೇಕಿದೆ.

 ಈ ಉದ್ದೇಶಿತ ರಿಂಗ್ ರಸ್ತೆ ಮಧ್ಯೆ ಭಾಗದ ವಿಸ್ತೀರ್ಣವನ್ನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಉದ್ದೇಶಿತ ಲೋಕಲ್ ಪ್ಲಾನಿಂಗ್ ಏರಿಯಾ ಆಗಿ ಮಾಡಬೇಕಿದೆ. ಉದ್ದೇಶಿತ ರಿಂಗ್ ರಸ್ತೆಯ ಹೊರಭಾಗದ ಕೆಲವು ನಿರ್ಧಿಷ್ಠ ಭಾಗವರೆಗೂ ವಿಸ್ತೀರ್ಣ ಮಾಡಬಹುದು.

  ಜೊತೆಗೆ ತುಮಕೂರು ನಗರದ ಹೃದಯ ಭಾಗದಿಂದ ಉದ್ದೇಶಿತ ಎರಡು ಕಡೆಯ ರಿಂಗ್ ರಸ್ತೆಯವರೆಗೆ ಇರುವ ರೇಡಿಯಲ್ ರಸ್ತೆಗಳನ್ನು ಸುಮಾರು 100 ಅಡಿಗಿಂತ ಜಾಸ್ತಿ ಅಗಲ ಮಾಡುವ ಮೂಲಕ, ಬೆಳೆಯುತ್ತಿರುವ ನಗರಕ್ಕೆ ಅಲಂಕಾರ ಮಾಡುವುದು ಸೂಕ್ತವಾಗಿದೆ.

 ಇದೊಂದು ಅಗತ್ಯವಾಗಿ ಆಗಬೇಕಾದ ಕೆಲಸ, ಈ ಬಗ್ಗೆ ನಗರ ಯೋಜನಾ ನಿರ್ದೇಶಕರಾದ ಶ್ರೀ ಶಶಿಕುಮಾರ್‌ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸಮಾಲೋಚನೆ ನಡೆಸಿದರು.

 ಶಶಿಕುಮಾರ್‌ರವರು ಪ್ರತಿಕ್ರೀಯೆ ನೀಡಿ ಒಳ್ಳೆಯ ಯೋಚನೆ ಸಾರ್, ಟೂಡಾಕ್ಕೆ ನೀವೇ ಒಂದು ಪತ್ರ ನೀಡಿ, ಟೂಡಾ ಒಂದು ಸಭೆ ನಡೆಸಿ ವಿಸ್ಥೀರ್ಣ ನಿಗದಿಗೊಳಿಸಲು ಸೂಕ್ತ ಕ್ರಮಕೈಗೊಳ್ಳಲಿದೆ. ಸರ್ಕಾರದ ಒಪ್ಪಿಗೆ ದೊರೆಯಲಿದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಚಿಂತನೆ ನಡೆಸಲಿ.