19th May 2024
Share

Tumakuru: shakthipeeta foundation

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

RAMESH JARAKIHOLE. G.S.BASAVARAJ. RUDRAIAH & KUNDARANAHALLI RAMESH

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020  ಇಂದಿಗೆ 36 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-21 ದಿನಾಂಕ: 15.12.2020

 ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ ರಾಜ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರ ಬಳಿ ಶ್ರೀ ಜಿ.ಎಸ್.ಬಸವರಾಜ್ ರವರು ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.

  ದಿನಾಂಕ:14.12.2020 ರಂದು ಅವರ ಗೃಹ ಕಚೇರಿಗೆ ತೆರಳಿ, ದಿನಾಂಕ:05.12.2020 ರಂದು ರಾಜ್ಯ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಪ್ರಸ್ತಾವನೆಯ ಅನುಮೋದನೆಗಾಗಿ ತಮಗೆ ಕಡತ ಸಲ್ಲಿಸಲಿದ್ದಾರೆ.

ಕೇಂದ್ರ ಜಲಶಕ್ತಿ ಸಮಿತಿಯ ಸದಸ್ಯರುಗಳಾಗಿ ರಾಜ್ಯದಿಂದ ನಾನು ಮತ್ತು ಹಾವೇರಿ ಲೋಕಸಭಾ ಸದಸ್ಯರಾದ ಶ್ರೀ ಶಿವಕುಮಾರ್ ಉದಾಸಿ ರವರು ಇಬ್ಬರು ಇದ್ದೇವೆ, ತಾವು ಶೀಘ್ರವಾಗಿ ಸಭೆ ನಡೆಸಿ ಅಗತ್ಯಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿದರು.

ಸಭೆ ನಡವಳಿಕೆ ಬಂದ ತಕ್ಷಣ ಸಭೆ ಕರೆದು, ಕೇಂದ್ರ ಸರ್ಕಾರದ ನದಿಜೋಡಣೆ ಯೋಜನೆಯಡಿಯಿಂದ ರಾಜ್ಯಕ್ಕೆ ಆಗುವ ಅನೂಕೂಲಗಳು ಮತ್ತು ರಾಜ್ಯದ ಯಾವ, ಯಾವ ನದಿಜೋಡಣೆ ಬಗ್ಗೆ ಸಮೀಕ್ಷೆ ನಡೆಸಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು.

ನಂತರ ಕೇಂದ್ರ ಜಲಸಂಪನ್ಮೂಲ ಸಚಿವರಾದ ಶ್ರೀ ಗಜೇಂದ್ರಸಿಂಗ್ ಶೇಖಾವತ್‌ರವರ ಬಳಿ ಸಮಾಲೋಚನೆ ನಡೆಸುವ ಮೂಲಕ ಡಿಪಿಆರ್ ಮಾಡಲು ಚಾಲನೆ ನೀಡೋಣ,  ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡುವ ಮೂಲಕ ಇತಿಹಾಸ ಸೃಷ್ಠಿ ಮಾಡಲೇಬೇಕು   ಎಂದು ತಿಳಿಸಿದರು.

ಶ್ರೀ ರುದ್ರಯ್ಯನವರು, ಕುಂದರನಹಳ್ಳಿ ರಮೇಶ್ ಇದ್ದರು.