22nd November 2024
Share

TUMAKURU:SHAKTHIPEETA FOUNDATION

 ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ಧಾರಿಗೆ ಹೊಂದಿಕೊಂಡಂತೆ ಇರುವ ಸುಮಾರು 920 ಎಕರೆ ಜಮೀನಿನನಲ್ಲಿ ಕರ್ನಾಟಕ ಹರಿಟೇಜ್ ಹಬ್ ಸ್ಥಾಪನೆ ಕನಸು ನನಸಾಗುವ ಹಂತಕ್ಕೆ ಬರಲಿದೆ. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇತ್ತೀಚೆಗೆ ಗೊಲ್ಲ ಹಾಗೂ ವೀರಶೈವ -ಲಿಂಗಾಯಿತ ನಿಗಮ ಮಾಡಿ ಬಿಸಿಬಿಸಿ ಸುದ್ದಿಯಲ್ಲಿದ್ದಾರೆ.

 ರಾಜ್ಯದ ಎಲ್ಲಾ ಜಾತಿಯವರಿಗೂ ಒಂದೊಂದು ಅಧ್ಯಯನ ಪೀಠ ಸ್ಥಾಪಿಸಲು, ಬಿಎಸ್‌ವೈ ಅಭಿಮಾನಿ ಚಿಂತಕರುಗಳು ಅತ್ಯುತ್ತಮ ಸಲಹೆ ನೀಡಿದ್ದಾರಂತೆ. ಕರ್ನಾಟಕ ಹರಿಟೇಜ್ ಹಬ್‌ನಲ್ಲಿ ಒಂದು ಜಾತಿಗೆ ಸುಮಾರು ಒಂದು ಎಕರೆ ಜಮೀನು ಮಂಜೂರು ಮಾಡಿ, ಕಟ್ಟಡ ನಿರ್ಮಾಣ ಮಾಡಲು ಪ್ರತಿ ಜಾತಿಗೆ ಎರಡು ಕೋಟಿ ಹಣ ನೀಡಿ, ಅಧ್ಯಯನ ಮಾಡಲು ವಾರ್ಷಿಕ ರೂ ಹನ್ನೆರಡು ಲಕ್ಷ ಅನುದಾನ ನೀಡಲು ಸಲಹೆ ನೀಡಿದ್ದಾರೆ.

ರಾಜ್ಯದ ಸುಮಾರು 20 ಜಿಲ್ಲೆಗಳ  ಜನ ಈ ರಸ್ತೆಯಲ್ಲಿ ಓಡಾಡುತ್ತಾರೆ, ಬೆಂಗಳೂರು- ಮುಂಬೈ ಎಕನಾಮಿಕ್ ಕಾರಿಡಾರ್ ಹಾಗೂ ಚನ್ನೈ- ಬೆಂಗಳೂರು- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಆಗಿ ಘೋಷಣೆಯಾಗಿರುವ ಈ ರಸ್ತೆಗೆ ಹೊಂದಿಕೊಂಡಿರುವ ಹೆರಿಟೇಜ್ ಹಬ್‌ಗೆ ಗುರುತಿಸಿರುವ ಈ ಸರ್ಕಾರಿ ಜಮೀನು ಬಹಳ ಸೂಕ್ತವಾಗಿದೆ. ಬಹಳ ಬೇಗ ಸುದ್ದಿಯೂ ಆಗಲಿದೆ.

ವಾಣಿ ವಿಲಾಸ ಡ್ಯಾಂನಿಂದ ಕುಡಿಯುವ ನೀರು ಒದಗಿಸಬಹುದು. ಯಾವುದೇ ಜಾತಿಯ ಒಂದು ಲೀಗಲ್ ಎಂಟಿಟಿ ಮುಂದೆ ಬಂದಲ್ಲಿ  ಅಧ್ಯಯನ ಪೀಠ ಸ್ಥಾಪಿಸಲು ಅವಕಾಶ ಕಲ್ಪಿಸಿ, ಆಯಾ ಜಾತಿಯ ಬಡವರು ಮತ್ತು ನಿರ್ಗತಿಕರನ್ನು ಗುರುತಿಸಿ, ಸ್ವಯಂ ಉದ್ಯೋಗ ಸ್ಥಾಪಿಸಲು ಅಗತ್ಯವಿರುವ ಆರ್ಥಿಕ ನೆರವು ನೀಡಲು ಯೋಜನೆ ರೂಪಿಸಲು ಚಿಂತನೆ ನಡೆಸಿ.

 ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿನ ಈ ಯೋಜನೆಗೆ, 500 ಜಾತಿಯವರು ಮುಂದೆ ಬಂದರೂ ಕೇವಲ ರೂ 1000 ಕೋಟಿ ಹಣ ಸಾಕು. ಪಿಪಿಪಿ ಮಾದರಿಯಲ್ಲಿ ರಚಿಸಿದಲ್ಲಿ, ಆಯಾ ಜಾತಿಯ ಹಣವಂತರೂ ಹಣ ನೀಡಿದರೆ, ಗುಣವಂತರೂ ಸಂಸ್ಕೃತಿ ನೀಡುವ ಮೂಲಕ ಕೈಜೋಡಿಸಲಿದ್ದಾರೆ.

ಏಕಕಾಲದಲ್ಲಿ ಎಲ್ಲಾ ಜಾತಿಯವರಿಗೂ ಸಮಾದಾನ ಮಾಡಬಹುದಾಗಿದೆ. ಜೊತೆಗೆ ಕೇಂದ್ರದ ಆತ್ಮನಿರ್ಭರ ಯೋಜನೆಯಡಿಯ ಒಂದು ಜಿಲ್ಲೆ – ಒಂದು ಉತ್ಪನ್ನ’ ಯೋಜನೆಯಡಿ ರಾಜ್ಯಾಧ್ಯಂತ ಎಲ್ಲಾ ಜಾತಿಯ ಬಡವರಿಗೆ ಸ್ವಯಂ ಉದ್ಯೋಗ ಸ್ಥಾಪಿಸಲು ಆರ್ಥಿಕ ನೆರವು ನೀಡಬಹುದಾಗಿದೆ.

ಫಾರ್‌ವಾರ್ಡ್ – ಬ್ಯಾಂಕ್‌ವಾರ್ಡ್  ಲಿಂಕೇಜ್  ಕಾಮನ್ ಫೆಸಿಲಿಟಿ ಸೆಂಟರ್ ನಿರ್ಮಾಣ ಮಾಡಿದಲ್ಲಿ. ಇದೆ ಹಣದಿಂದ ವಾರ್ಷಿಕ ವೆಚ್ಚವನ್ನು ಭರಿಸಬಹುದಾಗಿದೆ ಎಂಬ ಸಲಹೆಗೆ ಬಿಎಸ್‌ವೈ ಹಸಿರು ನಿಶಾನೆ ನೀಡುವರೇ ಕಾದು ನೋಡಬೇಕು?

ಒಂದು ವೇಳೆ ಚಾಲನೆ ನೀಡಿದರೇ, ಇದೊಂದು ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಲಿದೆ.