26th July 2024
Share

TUMAKURU:SHAKTHIPEETA FOUNDATION

ತುಮಕೂರು ಉಪವಿಭಾಗಾಧಿಕಾರಿಯಾಗಿದ್ದ ಶ್ರೀ ಎಸ್.ಎಸ್.ನಕುಲ್‌ರವರಿಗೆ ಸರ್ಕಾರಿ ಯೋಜನೆಗಳೆಂದರೆ ಪಂಚಪ್ರಾಣ. ತುಮಕೂರು ಜಿಲ್ಲೆ, ಗುಬ್ಬಿತಾಲ್ಲೂಕು, ಬಿದರೆಹಳ್ಳಕಾವಲ್ ಹೆಚ್.ಎ.ಎಲ್ ಯೋಜನೆಗೆ ಸರ್ಕಾರಿ ಜಮೀನು ನೀಡುವಾಗ ಒಬ್ಬ ಜಿಲ್ಲಾಧಿಕಾರಿ ಸರ್ಕಾರಿ ಜಮೀನು ಇಲ್ಲ, ಯೋಜನೆಗೆ ಸಾಕಾಗುವುದಿಲ್ಲ ಎಂದು ಪತ್ರ ಬರೆದಾಗ, ಯೋಜನೆಗೆ ಅಗತ್ಯವಿರುವಷ್ಟು ಸರ್ಕಾರಿ ಜಮೀನು ಲಭ್ಯ ಎಂದು ಬರೆದ ಗಟ್ಟಿ ಅಧಿಕಾರಿ.

ತುಮಕೂರು ತಾಲ್ಲೂಕು, ಅಮಲಾಪುರದಲ್ಲಿ ವಿಜ್ಞಾನಗುಡ್ಡ ಸರ್ಕಾರಿ ಯೋಜನೆಗೆ, ಪಟ್ಟಭಧ್ರಾ ಹಿತಾಸಕ್ತಿಗಳ ಒತ್ತಡದ ಮಧ್ಯೆದಲ್ಲಿಯೂ, ಸರ್ಕಾರಿ ಜಮೀನು ಗುರುತಿಸಿ ನಕ್ಷೆ ಮಾಡಿ, ಮೊದಲು ಈ 200 ಎಕರೆಯಿಂದ ಯೋಜನೆ ಆರಂಭಿಸಿ, ನಂತರ ನೋಡೋಣ ಎಂದು ದಾಖಲೆ ಸಿದ್ಧಪಡಿಸಿದ ಯೋಜನೆಯ ಕನಸುಗಾರ.

 ಕೊಡಗಿನ ಸಂದರವಾದ ಪರಿಸರದ ಮಧ್ಯೆ ಬೆಳೆದ ವ್ಯಕ್ತಿಗೆ ವಿಜ್ಞಾನಗುಡ್ಡದ ಪರಿಕಲ್ಪನೆ ಬಹಳವಾಗಿ ಹಿಡಿಸಿತ್ತು. ಅವರು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ಅಬ್ಬರವಿಲ್ಲ, ಆಡಂಬರವಿಲ್ಲ, ದೇಶದ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿ ತಮ್ಮ ಆಪ್ತಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಸೀತಾರಾಂರವರ ನಿರ್ಧಾರ ಸೂಕ್ತವಾಗಿದೆ. ಅವರಿಗೂ ಅಭಿನಂದನೆಗಳು.

ಮೇಡಂ ಕರ್ನಾಟಕದಿಂದ ಆಯ್ಕೆಯಾಗಿರುವ ಹಿನ್ನಲೆಯಲ್ಲಿ, ಕರ್ನಾಟಕ ಅಭಿವೃದ್ಧಿಗೆ ಇವರು ಅಪಾರವಾದ ಕೊಡುಗೆ ನೀಡುವ ಭರವಸೆಯಿದೆ. ನಮ್ಮ ರಾಜ್ಯ ಇವರ ಸೇವೆಯನ್ನು ಉತ್ತಮವಾಗಿ ಬಳಸಿಕೊಳ್ಳುವುದು ಅಗತ್ಯ.

ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿರುವ ನನಗೆ, ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ಇವರಿಗೆ ಪ್ರಿಯವಾದ ಸರ್ಕಾರಿ ಯೋಜನೆಗಳ ಮಾಹಿತಿ ನೀಡಲು ಖುಷಿಯಾಗುತ್ತಿದೆ.