13th June 2024
Share

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020   ಇಂದಿಗೆ 43 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-22 ದಿನಾಂಕ: 22.12.2020

 ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ, ದಿನಾಂಕ:05.12.2020 ರಂದು ರಾಜ್ಯ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಸಭೆ ನಡವಳಿಕೆಯೇ ಒಂದು ಪರಿಕಲ್ಪನಾ ವರದಿಯಂತೆ ಸಿದ್ಧವಾಗುತ್ತಿದೆಯಂತೆ.

ದಿನಾಂಕ:21.12.2020 ರಂದು  ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ಅನಿಲ್‌ಕುಮಾರ್‌ರವರನ್ನು ಶ್ರೀ ಜಿ.ಎಸ್.ಬಸವರಾಜ್‌ರವರೊಂದಿಗೆ ಭೇಟಿಯಾಗಿ ಸಮಾಲೋಚನೆ ನಡೆಸಲಾಯಿತು.

  ನದಿಜೋಡಣೆ ಎಂಬ ಪದ ಹುಟ್ಟಿದಾಗಿನಿಂದ, ಈವರೆಗೂ ಕೇಂದ್ರ ಸರ್ಕಾರದ ಜೊತೆ ನಡೆಸಿದ ಎಲ್ಲಾ ಪತ್ರವ್ಯವಹಾರಗಳ ಬಗ್ಗೆಯೂ, ಈ ಸಭೆ ನಡವಳಿಕೆಯಲ್ಲಿ ಪ್ರಸ್ತಾಪಮಾಡುತ್ತಿರುವ ಹಿನ್ನಲೆಯಲ್ಲಿ ಎರಡು-ಮೂರು ಭಾರಿ ಕರೆಕ್ಷನ್ ಆಗಿ ಫೈನ್ ಟ್ಯೂನ್ ಆಗುತ್ತಿದೆ, ಒಂದೆರಡು ದಿವಸದಲ್ಲಿ ಸಭೆನಡವಳಿಕೆ ಪೂರ್ಣಗೊಳಿಸಿ ಮುಂದಿನ ಕ್ರಮಕ್ಕಾಗಿ ಜಲಸಂಪನ್ಮೂಲ ಇಲಾಖೆಯ ಸಚಿವರಾದ ಶ್ರೀ ರಮೇಶ್‌ಜಾರಕಿಹೊಳೆರವರಿಗೆ ಸಲ್ಲಿಸುವುದಾಗಿ ಕಾರ್ಯದರ್ಶಿರವರು ತಿಳಿಸಿದ್ದಾರೆ.

ಇಲಾಖೆಯ ಈ ವಿಭಾಗದ ಟೈಪಿಸ್ಟ್‌ನಿಂದ ಆರಂಭಿಸಿ, ಅಪರ ಮುಖ್ಯ ಕಾರ್ಯದರ್ಶಿರವರೆಗೂ ಮತ್ತು ಸಭೆ ನಡವಳಿಕೆ ಅಧ್ಯಯನಗಾರರಿಗೂ ನದಿ ಜೋಡಣೆಯ ಸಂಪೂರ್ಣ ಇತಿಹಾಸವೇ ದೊರೆಯುವ ನೀರಿಕ್ಷೆಯಿದೆ.