12th September 2024
Share
G.S.BASAVARAJ, BHAVIKATTE NAGANNA, RENUKA, YOGANAND, MOHAN KUMAR & KUNDARANAHALLI RAMESH

TUMAKURU:SHAKTHI PEETA FOUNDATION

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೌಸಿಂಗ್ ಫಾರ್ ಆಲ್ 2022 ಯೋಜನೆಯಡಿಯಲ್ಲಿ, ವಸತಿ ರಹಿತರಿಗಾಗಿ   ಈವರೆಗೂ ಮಂಜೂರು ಮಾಡಿರುವ ಸರ್ಕಾರಿ ಜಮೀನಿನನಲ್ಲಿ ವಸತಿ ಸಮುಚ್ಚಾಯ ನಿರ್ಮಾಣ ಮಾಡಲು, ಅಗತ್ಯ ಕ್ರಮಕೈಗೊಳ್ಳಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ 19882  ಜನರು ನೋಂದಾಯಿಸಿದ್ದು, ಅದರಲ್ಲಿ ಅರ್ಹ ಪಲಾನುಭವಿಗಳು ಸುಮಾರು 3465 ಜನ ಮಾತ್ರ ಇದ್ದಾರೆ. ಉಳಿದವರಿಗೆ ಒಂದಲ್ಲ ಒಂದು ಕಡೆ ವಸತಿ ಇರುವುದಾಗಿ ಆಯುಕ್ತರು ತಿಳಿಸಿದರು.

 ತುಮಕೂರು ನಗರದ ಎಲ್ಲಾ ಅರ್ಹ ಪಲಾನುಭವಿಗಳಿಗೆ ಅಗತ್ಯವಿರುವ ಸುಮಾರು 40 ಎಕರೆ ಸರ್ಕಾರಿ ಜಮೀನು ಪಡೆಯಲು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

 ರಾಜೀವ್ ಗಾಂಧಿ ಹೌಸಿಂಗ್ ಕಾಪೋರೇಷನ್ ಅಧಿಕಾರಿಯಾದ ಶ್ರೀ ಮಹದೇವ್ ಪ್ರಸಾದ್ ರವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಂಸದರು ಡಿಪಿಆರ್ ನೀವೂ ಮಾಡುತ್ತಿರೋ ಅಥವಾ ಪಾಲಿಕೆಯವರು ಮಾಡಬೇಕೋ ಎಂದು ಸಮಾಲೋಚನೆ ನಡೆಸಿದರು. ಪಾಲಿಕೆಯವರು ದಾಖಲೆ ನೀಡಿದಲ್ಲಿ ಸ್ಥಳ ವೀಕ್ಷಣೆ ಮಾಡಿ ಒಂದೆರಡು ದಿವಸದಲ್ಲಿ ಡಿಪಿಆರ್ ಮಾಡಲು ಆರಂಭಿಸಲಾಗುವುದು ಎಂದು ಹೌಸಿಂಗ್ ಕಾಪೋರೇಷನ್ ಅಧಿಕಾರಿಗಳು ತಿಳಿಸಿದರು.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಬಾವಿಕಟ್ಟೆ ನಾಗಣ್ಣನವರು ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಯೋಗಾನಂದ್‌ರವರು ದಾಖಲೆ ನೀಡಿದ ತಕ್ಷಣ ವಸತಿ ಸಮುಚ್ಚಾಯಕ್ಕೆ ನಿಯಾಮುನುಸಾರ ಲೆಸೈನ್ಸ್ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು ಮತ್ತು ತಹಶೀಲ್ಧಾರ್ ಶ್ರೀ ಮೋಹನ್ ರವರು ಬಹುತೇಕ ಎಲ್ಲಾ ರೆವಿನ್ಯೂ ದಾಖಲೆ ಸಂಗ್ರಹಿಸಲಾಗಿದೆ. ಕೂಡಲೇ ರಾಜೀವ್ ಗಾಂಧಿ ಹೌಸಿಂಗ್ ಕಾಪೋರೇಷನ್‌ಗೆ ನೀಡುವುದಾಗಿ ತಿಳಿಸಿದರು.

 ದೂರವಾಣಿಯಲ್ಲಿ ಮಾತನಾಡಿದ ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ವಸತಿ ಸಮುಚ್ಚಾಯಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳ ಮಂಜೂರಾತಿಗೂ ಈಗಲೇ ಅಗತ್ಯ ಕ್ರಮ ಕೈಗೊಳ್ಳಬೇಕು, ಆದ್ದರಿಂದ ವಸತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಮತ್ತು ಆಶ್ರಯ ಸಮಿತಿ  ಸಭೆ ಕರೆಯಲು ಆಯುಕ್ತರಿಗೆ ಸೂಚಿಸಿದರು.

 ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ರವರು ಮಾತನಾಡಿ ಮೋದಿಯವರು ಕೇಂದ್ರದಲ್ಲಿ 2022 ರೊಳಗೆ ಎಲ್ಲರಿಗೂ ಸೂರು ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಇಲ್ಲಿ ಸಂಸದರು ಹಾಗೂ ಶಾಸಕರು ಇಬ್ಬರೂ ಕಳೆದ 2 ವರ್ಷದಿಂದ ನಿರಂತರವಾಗಿ ಸರಣೆ ಸಭೆ ನಡೆಸುತ್ತಿದ್ದಾರೆ.

 ಮುಂದಿನ ಸಭೆಯ ವೇಳೆಗೆ ಪೂರ್ಣವಾಗಿ ದಾಖಲೆ ಆಗದಿದ್ದರೂ, ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಇಂತಹ ಸರ್ವೇ ನಂಬರ್ ಜಮೀನಿನಲ್ಲಿ ವಸತಿ ಸಮುಚ್ಚಾಯ ನಿರ್ಮಾಣ ಮಾಡಲಾಗುವುದು ಎಂಬ ಮಾಹಿತಿಯನ್ನು ಖಚಿತವಾಗಿ ನೀಡಲಾಗುವುದು, ಶೇ 100 ರ ಗುರಿ ತಲುಪಲು ಪಾಲಿಕೆ ಸಕಲ ಸಿದ್ಧತೆ ನಡೆಸುತ್ತಿದೆ ಎಂದು ಆಯುಕ್ತೆ ರೇಣುಕರವರು ಖಚಿತವಾಗಿ ತಿಳಿಸಿದರು.

 ಈವರೆಗೂ ಮಾಡಿರುವ ಸಾಧನೆ ನನಗಂತೂ ಪೂರ್ಣ ಸಮಾಧಾನವಾಗಿಲ್ಲ, ಮುಂದಿನ ದಿಶಾ ಸಭೆಯ ವೇಳೆಗೆ ಅಗತ್ಯವಿರುವ 40 ಎಕರೆ ಸರ್ಕಾರಿ ಜಮೀನು ಪಡೆಯಲೇ ಬೇಕು. ಪಾಲಿಕೆ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಶ್ರಮಿಸಬೇಕು. ಈವರೆಗೂ ಶೇ 8೦ ರಷ್ಟು ಶ್ರಮಹಾಕೀದ್ದೀರಿ, ಬಹಳಷ್ಟು ಜಮೀನು ಗುರುತಿಸಿದ್ದೀರಿ, ದಾಖಲೆ ಪಡೆಯಲು ಕಡತದ ಅನುಸರಣೆ ಅಗತ್ಯ ಎಂದು ಸಲಹೆ ನೀಡಿದರು.