28th March 2024
Share

TUMAKURU:SHAKTHIPEETA FOUNDATION

 ದೇಶ ಕಂಡ ಅತ್ಯಂತ ಮುತ್ಸುದ್ಧಿ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಪ್ರಧಾನಿಯವರಾದ ದಿ.ಅಟಲ್ ಬಿಹಾರಿ ವಾಜಿಪೇಯಿರವರು ನದಿ ಜೋಡಣೆ’ ಕನಸುಗಾರರಾಗಿದ್ದರು. ಪ್ರಧಾನಿ ಆಗಿದ್ದಾಗ ಅವರು ಮಾಡಿದ  ಇಡೀ ದೇಶವನ್ನೇ ಸಂಪರ್ಕಿಸುವ ಸುವರ್ಣ ಚತುರ್ಭುಜ’ ಕಾರಿಡಾರ್ ಒಂದು ಬೃಹತ್ ಕೊಡುಗೆ.   

 ದೇಶದ ಪ್ರಜ್ಞಾವಂತರೆಲ್ಲಾ ವಾಜಿಪೇಯಿರವರು ದೇಶದ ನದಿ ಜೋಡಣೆ ಮಾಡಿಯೇ ಮಾಡುತ್ತಾರೆ ಎಂಬ ಚಿಂತನೆಯಲ್ಲಿದ್ದರು. ಅವರ ಸೋಲು ನದಿ ಜೋಡಣೆಯ ಸೋಲಾಯಿತು. ಪ್ರಧಾನಿ ನರೇಂದ್ರಮೋದಿಯವರು ನದಿ ಜೋಡಣೆ ಮಾಡುತ್ತಾರೆ ಎಂಬ ಕನಸು ಕನಸಾಗಿಯೇ ಉಳಿದಿದೆ. ಕಾರಣ ಮಾತ್ರ ಅವರಿಗೊಬ್ಬರಿಗೆ ಗೊತ್ತು.

ಅದೇನೆ ಇರಲಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ಕರ್ನಾಟಕ ರಾಜ್ಯದ ನದಿ ಜೋಡಣೆ ಮಾಡಲು ವಿವರವಾದ ಯೋಜನಾ ವರದಿ ಮಾಡಲು ಆದೇಶಿಸಿದ್ದಾರೆ. ಜಲಸಂಪನ್ಮೂಲ  ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಕೇಶ್‌ಸಿಂಗ್‌ರವರು  ಮತ್ತು ಅವರ ತಂಡ ಭರದ ಸಿದ್ಧತೆ ನಡೆಸಿ, ಅನುಮೋದನೆಗಾಗಿ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರಿಗೆ ಕಡತವನ್ನು ಸಲ್ಲಿಸಿದ್ದಾರೆ.  

ನದಿ ನೀರಿನಿಂದ ಕೆರೆಗಳ ಜೋಡಣೆ’ ಅಥವಾ ರಾಜ್ಯದ ನದಿ ಜೋಡಣೆ’ ಅಥವಾ ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ಅಥವಾ ಜಲಜೀವನ್ ಮಿಷನ್ ಕಾರಿಡಾರ್’ ಅಥವಾ ಅಂತರ್ಜಲ ಅಭಿವೃದ್ಧಿ ಕಾರಿಡಾರ್’ ಹೀಗೆ ಈ ಯೋಜನೆಗೆ ಹಲವಾರು ಹೆಸರು ಇಡಬಹುದು,

‘ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಯ ಅನುದಾನ ಮತ್ತು ಮನೆ-ಮನೆಗೆ ಗಂಗೆ ಯೋಜನೆಯಡಿ ಕುಡಿಯುವ ನೀರಿನ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ಅನುದಾನ ಹಾಗೂ ಕೊರೊನಾ ಹಿನ್ನಲೆಯಲ್ಲಿ ರಾಜ್ಯದ ಪಾಲಿನ ಹಣವನ್ನು ಕೇಂದ್ರ ಸರ್ಕಾರದಿಂದ ಬಡ್ಡಿ ರಹಿತ ಸಾಲವಾಗಿ ಪಡೆಯುವುದು ಪ್ರಮುಖ ಉದ್ದೇಶವಾಗ ಬೇಕು’

ಆದ್ದರಿಂದ ರಾಜ್ಯ ಸರ್ಕಾರ ಈ ಯೋಜಗೆ ಅಟಲ್ ಹೆಸರು ಇಡುವ ಮೂಲಕ ಪ್ರಭುದ್ಧತೆ ಮೆರೆಯಲಿ ಎಂಬುದು ರಾಜ್ಯದ ಜನತೆಯ ಅಭಿಪ್ರಾಯ. ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಅವರ ತಂಡ ಏನೆನ್ನುತ್ತಾರೆ ಕಾದು ನೋಡೋಣ.

‘ವಾಜಿಪೇಯಿರವರ ಜನ್ಮ ದಿನದ ಕೊಡುಗೆಯಾಗಿ ಘೋಶಿಸಿದರೇ, ರಾಜ್ಯದ ರೈತರ/ಜನತೆಯ ಋಣ ತೀರಿಸುವ ಪ್ರಥಮ ಮೆಟ್ಟಿಲು ಆಗಬಹುದು. ನೀರು ಎಲ್ಲ ಜಾತಿಗೂ ಗಂಗಾಮಾತೆ. ಸರ್ಕಾರಕ್ಕೆ ಜ್ಞಾನೋದಯ ಮಾಡಿಸುವರೇ ಶಕ್ತಿದೇವತೆ?’