TUMAKURU:SHAKTHIPEETA FOUNDATION
TUMAKURU GIS: ನಿಂದಏನುಲಾಭ? ಎನ್ನುತ್ತಿದ್ದವರಿಗೆರೂ600 ಕೋಟಿ ಆಸ್ತಿಯೇ ಉತ್ತರ?
ತುಮಕೂರು ಜಿಐಎಸ್ ನಿಂದ ಏನು ಲಾಭ? ಎನ್ನುತ್ತಿದ್ದವರಿಗೆ ಹೇಮಾವತಿ ನಾಲಾವಲಯದ ಇಇ ರವರಾದ ಶ್ರೀ ಮೋಹನ್ ಕುಮಾರ್‌ರವರು ಹೇಮಾವತಿ ಭೂಸ್ವಾಧೀನ ಅಧಿಕಾರಿ ಶ್ರೀಮತಿ ಯಶೋಧರವರ ಸಹಕಾರದಿಂದ ಹಳೆ ದಾಖಲೆ ಹುಡುಕಿಸಿ ಡಿಜಿಟೈಲಸ್ ಮಾಡಿ, ಜಿಐಎಸ್ ಲೇಯರ್ ಮಾಡಿ, ಸುಮಾರು ರೂ 600 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಇದೊಂದು ನನ್ನ ದೃಷ್ಟಿಯಲ್ಲಿ ಅದ್ಭುತ ಸಾಧನೆ. ಸರ್ಕಾರಿ ಆಸ್ತಿ, ಸರ್ಕಾರಿ ಅಧಿಕಾರಿ ಹುಡುಕಿದರೆ ಅದು ಸಾಧನೆಯೇ? ವೇತನ ಪಡೆಯುತ್ತಾರೆ, ಕೆಲಸ ಮಾಡಿದ್ದಾರೆ ಎಂದು ನೀವೂ ಹೇಳಬಹುದು. ಸುಮಾರು ವರ್ಷಗಳಿಂದ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಿದ ಲೋಕಲ್ ಪ್ಲಾನಿಂಗ್ ಏರಿಯಾ ವ್ಯಾಪ್ತಿಯ ಹೇಮಾವತಿ ನಾಲಾ ವಲಯದ ವ್ಯಾಪ್ತಿಯಲ್ಲಿ ಹಸಿರು ತುಮಕೂರು ಯೋಜನೆಯಡಿ ಗಿಡಹಾಕಬೇಕು ಎಂಬ ಕನಸಿನಿಂದ ಅಂದಿನಿಂದ ಇಲ್ಲಿಯವರೆಗೂ ನಾನು ಪಟ್ಟ ಶ್ರಮ ನನಗೆ ಗೊತ್ತು.
ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಮತ್ತು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸಹ ದಾಖಲೆ ಡಿಜಿಟೈಲಸ್ ಮಾಡಲು ಇಂಜಿನಿಯರ್‌ಗಳಿಗೆ ಸೂಚಿಸಿದ್ದರು. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರು ಸಹ ಇಂಜಿನಿಯರ್‌ಗಳಿಗೆ ಸೂಚಿಸಿದ್ದರು.
ಇದೂವರೆಗೂ ಯಾರು ಸಹ ನಾಲಾವಲಯದ ಗಡಿ ಗುರುತಿಸುವ ಗೋಜಿಗೆ ಹೋಗಿರಲಿಲ್ಲ, ಹದ್ಧುಬಸ್ತು ನಿಗದಿಯಾಗದೆ ಗಿಡ ಹಾಕುವುದು ಎಲ್ಲಿಗೆ? ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಸತತವಾಗಿ ಈ ಯೋಜನೆಯ ಅನುಸರಣೆ ಮಾಡಲಾಯಿತು.
ಒಂದು ದಿಶಾ ಸಮಿತಿಯಲ್ಲಿ ಹೇಮಾವತಿ ಇಲಾಖೆಯಿಂದ ಟಿಎ ರವರು ಸಭೆಗೆ ಹಾಜರಾದಾಗ ಮುಖ್ಯ ಇಂಜಿನಿಯರ್‌ವರವನ್ನು ಹುಡುಕಿ ತರಲು ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಸೂಚಿಸಿದಾಗ ಮೋಹನ್ ಕುಮಾರ್ ರವರು ಸಭೆಗೆ ಬಂದರು.
ಒಂದು ನಕ್ಷೆ ತೋರಿಸಿ ಇಲ್ಲಿದೆ ನೋಡಿ ಸಾರ್ ಎಂದರು, ನಾನು ಮಾಡಿದ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ, ಅದು ಪ್ರತಿ ಸಭೆಯಲ್ಲೂ ಮುಂದುವರೆಯಿತು, ಮೋಹನ್ ಕುಮಾರ್‌ರವರು ಛಾಲೆಂಜ್ ಆಗಿ ತೆಗೆದು ಕೊಂಡರು, ಶ್ರೀಮತಿ ಯಶೋಧರವರು ದಾಖಲೆ ನೀಡಲು ವಿಳಂಭ ಮಾಡಿದಾಗ ನಮ್ಮ ಇ-ಪೇಪರ್ ಅವರನ್ನು ಎಚ್ಚರಿಸಿತ್ತು.
ಲೋಕಲ್ ಪ್ಲಾನಿಂಗ್ ಏರಿಯಾ ವ್ಯಾಪ್ತಿಯಲ್ಲಿ ಸುಮಾರು 12.50 ಕೀಮೀ ಹೇಮಾವತಿ ನಾಲೆ ಇದೆ. ಸುಮಾರು 199.3 ಎಕರೆ ಜಮೀನು ಭೂ ಸ್ವಾಧೀನ ಆಗಿದೆ, ಇದರಲ್ಲಿ ನಾಲೆಗೆ ಮತ್ತು ಸರ್ವೀಸ್ ರಸ್ತೆಗೆ ಸುಮಾರು 90 ಎಕರೆ ಬಳಸಲಾಗಿದೆ, ಇನ್ನೂ 109.33 ಎಕರೆ ಜಮೀನು ಇದೆ. ಈಗ ಒಂದು ಜಿಐಎಸ್ ಲೇಯರ್ ಒಂದು ಹಂತಕ್ಕೆ ಬಂದಿದೆ, ಅಧಿಕಾರಿಗಳು ಇನ್ನೊಮ್ಮೆ ಪರಿಶೀಲಿಸಿ ಮುದ್ರೆ ಹೊತ್ತಬೇಕಿದೆ.
ಶ್ರಮಿಸಿದ ಎಲ್ಲಾ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳಿಗೆ ದಿಶಾ ಸಮಿತಿಯಲ್ಲಿ ಸನ್ಮಾನ ಮಾಡುವ ಮೂಲಕ ಜಿಐಎಸ್‌ನಿಂದ ಆಗುವ ಪ್ರಯೋಜನದ ಬಗ್ಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಮನವರಿಕೆ ಮಾಡಲು ಸಂಸದರ ಗಮನಕ್ಕೆ ತರಬಯಸುತ್ತೇನೆ.
ದಿನಾಂಕ:31.12.2020 ರಂದು ನಡೆಯುವ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಪಿಪಿಟಿ ಪ್ರದರ್ಶನ ಮಾಡಲು ತುಮಕೂರು ಸ್ಮಾರ್ಟ್ ಸಿಟಿ ಎಂಡಿಯವರಾದ ಶ್ರೀ ರಂಗಸ್ವಾಮಿರವರಿಗೆ ಸಲಹೆ ನೀಡಲಾಗುವುದು.
ನಾನು ಜಿಐಎಸ್ ಮಾಡಿ ತುಮಕೂರು ನಗರದಲ್ಲಿ ಸುಮಾರು ರೂ 2000 ಕೋಟಿ ಬೆಲೆ ಬಾಳುವ ಒತ್ತುವರಿ ಆಸ್ತಿ ಸಿಗಲಿದೆ ಎಂದು ಪದೆ ಪದೇ ಹೇಳುತ್ತಿದ್ದೆ. ಈಗ ಆರಂಭವಾಗಿದೆ ಪ್ರತಿ ದಿಶಾ ಸಭೆಯಲ್ಲೂ ಕೋಟಿಗಟ್ಟಲೇ ಒತ್ತುವರಿ ಆಸ್ತಿ ಪ್ರದರ್ಶನವಾಗಲಿದೆ. ಒತ್ತುವರಿ ತೆಗೆಸಿ ಹದ್ದು ಬಸ್ತು ಗುರುತಿಸುವ ’ಭೂಪ ಯಾರು?’
‘ ದಿಶಾ ಸಮಿತಿಯ 42 ಯೋಜನೆಗಳಲ್ಲಿ ಭೂ ದಾಖಲೆ ಡಿಜಿಟೈಲಸ್ ಸಹ ಒಂದಾಗಿದೆ. ಇಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಆಸ್ತಿ ಎಂದು ಯಾರು ಹೇಳುವ ಆಗಿಲ್ಲ. ಇಲಾಖೆಯ ಆಸ್ತಿಗಳ ಜಿಐಎಸ್ ಲೇಯರ್ ಮಾಡುವ ಕರ್ತವ್ಯ ಎಲ್ಲಾ ಇಲಾಖೆಗಳದ್ದು.’
-ಕುಂದರನಹಳ್ಳಿ ರಮೇಶ್.
ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.