TUMAKURU:SHAKTHI PEETA FOUNDATION
ಕೇಂದ್ರ ಸರ್ಕಾರ ದಿಶಾ ಮಾರ್ಗದರ್ಶಿ ಸೂತ್ರದಲ್ಲಿ ದಿಶಾ ಸಭೆಯ ನಿರ್ಣಯವನ್ನು 30 ದಿವಸದೊಳಗೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಅಧಿಕಾರಿಗಳು ಕ್ರಮವಹಿಸದೇ ಇದ್ದಲ್ಲಿ ಏನು ಮಾಡಬೇಕು ಎಂಬುದನ್ನು ತುಮಕೂರು ಜಿಲ್ಲೆಯ ಮುಂದಿನ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸುವುದೇ ಪ್ರಮುಖ ವಿಷಯವಾಗಲಿದೆ.
ದಿನಾಂಕ:21.09.2020 ರಿಂದ ಇಲ್ಲಿಯವರೆಗೂ ಸುಮಾರು 6 ಸಭೆಗಳು ನಡೆದಿವೆ. ಬಹಳಷ್ಟು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ, ಡಿಜಿಟಲ್ ದಾಖಲೆಗೆ ಬಹಳ ಒತ್ತು ನೀಡಲಾಗಿದೆ. ಜಿಐಎಸ್ ಲೇಯರ್ ಪ್ರಮುಖ ಅಜೆಂಡಾವಾಗಿದೆ. ವಾಕರಿಕೆ ಬರುವಷ್ಟು ಚರ್ಚೆಯಾಗಿದೆ.
ತುಮಕೂರು ಜಿಐಎಸ್ ಪೋರ್ಟಲ್ ಮಾಡುವ ಮೂಲಕ ದೇಶದಲ್ಲಿಯೇ ತುಮಕೂರು ಜಿಲ್ಲೆಯ ದಿಶಾ ಸಮಿತಿ ಇತಿಹಾಸ ಸೃಷ್ಠಿಸಿದೆ. ದೇಶದ ಯಾವ ಜಿಲ್ಲೆಯಲ್ಲಾದರೂ ಈ ರೀತಿ ಕ್ರಮಕೈಗೊಂಡಿದ್ದು, ತಮ್ಮ ಗಮನಕ್ಕೆ ಬಂದಿದ್ದರೇ ತಿಳಿಸಲು ಓದುಗರಲ್ಲಿ ಮನವಿ ಮಾಡಲಾಗಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ಸುಮಾರು 1800 ಯೋಜನೆಗಳು ಇವೆಯಂತೆ. ಇವುಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಎಷ್ಟು ಯೋಜನೆಗಳು ಜಾರಿಯಲ್ಲಿವೆ ಎಂಬ ಮಾಹಿತಿ ಸಂಗ್ರಹಿಸುವುದೇ ಒಂದು ಪವಾಡ. ಪ್ರತಿಯೊಂದು ಇಲಾಖಾ ಅಧಿಕಾರಿಗಳು ಸೇರಿದಂತೆ ತುಮಕೂರು ಜಿಲ್ಲೆಯಲ್ಲಿರುವ ಸುಮಾರು 42000 ನೌಕರರು ಸಹ ಜಾಗೃತರಾದಲ್ಲಿ ಮಾತ್ರ ಸಾದ್ಯ. ಒಬ್ಬಿಬ್ಬರು ಮಾಡುವ ಕೆಲಸ ಅಲ್ಲ ಇದು.
ಇದಕ್ಕೆ ರಾಜ್ಯ ಮಟ್ಟದ ದಿಶಾ ಸಮಿತಿಯು ಸಹ ಅತ್ಯುತ್ತಮವಾದ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಚಾಲನೇ ನೀಡಲಿದ್ದಾರೆ?
ಆದರೂ ಪ್ರಮುಖವಾದ ಬಹುತೇಕ ಯೋಜನೆಗಳನ್ನು ಪಟ್ಟಿಮಾಡಿ ನಾನೇ ಅಧ್ಯಕ್ಷರಿಗೆ ನೀಡಿದ್ದೆ. ಅವುಗಳನ್ನು ಪರಿಶೀಲಿಸಿ ಎಲ್ಲಾ ಇಲಾಖೆಗಳಿಗೂ ಸಿಇಓ ರವರು ರವಾನಿಸಿದ್ದಾರೆ. ಮಾಹಿತಿ ನೀಡಲು ಕಾಲ ಮಿತಿಯನ್ನು ನಿಗದಿಗೊಳಿಸಿದ್ದಾರೆ. ಮುಂದಿನ ಸಭೆಯಲ್ಲಿ ಪ್ರತಿಯೊಂದು ಯೋಜನಾವಾರು ಸಭೆಯಲ್ಲಿ ನಿರ್ಣಯಮಾಡಲು ಹಿಂದಿನ ದಿಶಾ ಸಮಿತಿ ಸಭೆಯಲ್ಲಿ ಅಧ್ಯಕ್ಷರು ಸೂಚಿಸಿದ್ದಾರೆ.
ಮುಂದಿನ ಸಭೆಯ ವೇಳೆಗೆ, ಹಿಂದಿನ ಎಲ್ಲಾ ಸಭೆಗಳ ನಿರ್ಣಯದಂತೆ, ಮಾಹಿತಿ ಅಫ್‌ಲೋಡ್ ಮಾಡದೇ ಇರುವ ಇಲಾಖೆಗಳ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗೊಳ್ಳಬೇಕು. ಎಂಬುದೇ ಪ್ರಮುಖವಾಗಲಿರುವುದರಿಂದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶುಭಕಲ್ಯಾಣ್ ರವರು ಈ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಬೇಕಿದೆ.
ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿಶಾಲಿನಿರಜನೀಶ್ ರವರಿಂದ ಈ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯವಾಗಿದೆ.
ಪಾರದರ್ಶಕತೆ, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಜಿಐಎಸ್ ಲೇಯರ್ ಅಡಿಪಾಯವಾಗಿದೆ.