26th July 2024
Share

TUMAKURU:SHAKTHI PEETA FOUNDATION

ತುಮಕೂರು ಜಿಐಎಸ್ ಕಾಟಾಚಾರಕ್ಕೆ ಮಾಡಿರುವುದಲ್ಲ, ಪ್ರತಿಯೊಂದಕ್ಕೂ ಡಿಜಿಟಲ್ ದಾಖಲೆ ಕ್ಲಿಕ್ ಮಾಡಿದ ತಕ್ಷಣದೊರೆಯಬೇಕು.ರೈಲ್ವೇ#ಹೈವೇ#ಕೈಗಾರಿಕೆ#ಹೇಮಾವತಿ#ಎತ್ತಿನಹೊಳೆ#ಭಧ್ರಾಮೇಲ್ದಂಡೆ#ಭೂಸ್ವಾದೀನ ಒಂದು ಪವಾಡವಾಗಿದೆ. ಒಂದು ದಂಧೆಯಾಗಿದೆ ಎಂದು ಜನ ಹೇಳುತ್ತಾರೆ.

 ಹೇಮಾವತಿ ಯೋಜನೆಯಲ್ಲಿ ಗುಬ್ಬಿ ತಾಲ್ಲೂಕಿನ ಮುದ್ದಪುರದ ಶಿವಣ್ಣನವರು ಹೇಳುವ ಪ್ರಕಾರ ಅವರ ಒಂದು ಎಕರೆ ಭೂಮಿಯನ್ನು ಭೂ ಸ್ವಾಧೀನ ಮಾಡದೆ ಬಳಸಿಕೊಂಡಿದ್ದಾರಂತೆ. ಹೇಮಾವತಿ ಯೋಜನೆ ಆಗಿ ಎಷ್ಟು ವರ್ಷಗಳಾಗಿವೆ. ಕಚೇರಿಗೆ ಸುತ್ತಿ ಸುತ್ತಿ ಆತ್ಮಹತ್ಯೆ ಒಂದೇ ಬಾಕಿ ಎಂದು ದಿನಾಂಕ:24.12.2020  ರಂದು ನನ್ನ ಮುಂದೆ ಗೋಳಿಟ್ಟರು.

  ನಮ್ಮ ಪ್ರಧಾನಿಯವರಾದ ಮೋದಿಯವರು ಡಿಜಿಟಲ್ ಯುಗವಾಗಿ ಘೋಷಣೆ ಮಾಡಿದ್ದಾರೆ. ಐಟಿ-ಬಿಟಿಯಲ್ಲಿ ನಮ್ಮ ರಾಜ್ಯ ಮುಂಚೂಣೆಯಲ್ಲಿದೆ. ಕೇಂದ್ರ ಸರ್ಕಾರ ತನ್ನ ಕೈಯಲ್ಲಿ ಇರುವುದನ್ನು ಉದಾ: ನೇರ ನಗದು ಪಾವತಿ ಡಿಜಿಟಲ್ ಮಾಡಿದೆ. ಉಳಿದ ಎಲ್ಲಾ ಇಲಾಖಾವಾರು ಡಿಜಿಟಲ್ ಮಾಡಬೇಕು. ಅಧಿಕಾರಿಗಳು ಅಸಡ್ಡೆ ಮಾಡಿದರೆ ಚುನಾಯಿತ ಜನಪ್ರತಿನಿಧಿಗಳ ಕೆಲಸ ಏನು?

 ರೈತ ಅವರ ಜಮೀನಿನ ಸರ್ವೆನಂಬರ್ ಕ್ಲಿಕ್ ಮಾಡಿದ ತಕ್ಷಣ ಭೂ ಸ್ವಾಧೀನದ ಇತಿಹಾಸ ಸಹಿತ ಮಾಹಿತಿ ದೊರೆಯಬೇಕು. ಸಾಮಾಜಿಕ ನ್ಯಾಯ ಸಾಮಾನ್ಯ ರೈತನಿಗೂ ದೊರೆಯಬೇಕು. ಹಣ, ತೋಳ್ಬಲ ಮತ್ತು ರಾಜಕೀಯ ಪ್ರಭಾವ ಇದ್ದವರಿಗೆ ಮಾತ್ರ ಸರ್ಕಾರಿ ಯೋಜನೆ ಲಭ್ಯ ಎಂದಾಗಬಾರದು. ನಾನು ನಿಮ್ಮಂತಹವರಿಗೆ ನ್ಯಾಯ ದೊರಕಿಸಲೆಂದೇ ತುಮಕೂರು ಜಿಐಎಸ್ ಕಡತದ ಹಿಂದೆ ಬಿದ್ದಿರುವುದು.

 ನಾನು ಸದಸ್ಯನಾಗಿರುವುದು, ದಿಶಾ ಮಿಟಿಂಗ್‌ಗೆ ಹೋಗಿ ಉಂಡು-ತಿಂದು ಪರದೆಯ ಮೇಲೆ ಚಿತ್ರ ನೋಡಿ ಬರಲು ಅಲ್ಲ, ನಿಮ್ಮಂತಹವರ ಗೋಳಿಗೆ ಧ್ವನಿಯಾಗಲೇ ಬೇಕು. ಅತಿ ಶೀಘ್ರದಲ್ಲಿ ನಿನಗೆ ನ್ಯಾಯ ದೊಕಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನಾನು ಆತನಿಗೆ ಭರವಸೆ ನೀಡಿದೆ.’

ಅಷ್ಟೇ ಏಕೆ? ತುಮಕೂರು ನಗರ ವ್ಯಾಪ್ತಿಯ 0 ಕೀಮೀ ನಿಂದ 6 ನೇಕೀಮೀ ರಾಷ್ಟ್ರೀಯ ಹೆದ್ಧಾರಿ 206 ರ ಪ್ರತಿಯೊಂದು ಸ್ವತ್ತಿನ ದಾಖಲೆ ಮಾಡಿಸಿ  ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇಂದು ನ್ಯಾಯಾಲಯದ ತೀರ್ಪು ಆದೇಶದ ಪ್ರತಿ ಮತ್ತು ದಾಖಲೆಯೇ ಇಲ್ಲವಂತೆ, ಆದರೂ ಯಾರಿಗೂ ಸಂಬಳ ನಿಂತಿಲ್ಲವಲ್ಲ?

ರಾಷ್ಟ್ರೀಯ ಹೆದ್ಧಾರಿ 206, ತುಮಕೂರು ಮಹಾನಗರ ಪಾಲಿಕೆ ಅಥವಾ ಜಿಲ್ಲಾಡಳಿತದಲ್ಲಿ ದಾಖಲೆ ಇರಬೇಕು. ಇಲ್ಲಾ ಎಂದಾದರೇ, ಕಡತ ನಾಪತ್ತೆಯಾಗಿದೆ ಎಂದು ಪೋಲೀಸ್ ಸ್ಟೇಷನ್‌ಗೆ ದೂರು ನೀಡಬೇಕು. ಜೊತೆಗೆ ನ್ಯಾಯಾಲಯದಲ್ಲಿ ಪ್ರತಿ ಇದ್ದೇ ಇರುತ್ತದೆ, ಅಲ್ಲಿ ದಾಖಲೆ ಪಡೆಯಬೇಕು.

ಯಾವುದು ಇಲ್ಲ ಎಂದಾರೆ ಕೋಟಿಗಟ್ಟಲೇ ಖರ್ಚು ಮಾಡಿರುವ ಹಣ ದುರುಪಯೋಗವಲ್ಲವೇ? ಸೈಟ್ ಹ್ಯಾಂಡ್ ಓವರ್ ಮಾಡದೆ ಇದ್ದರೆ ಗುತ್ತಿಗೆದಾರ ಹೇಗೆ ಕೆಲಸ ಮಾಡುತ್ತಾರೆ. ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂನ ಪ್ರತಿ ಸಭೆಯಲ್ಲೂ, ನಾನು ಈ ವಿಚಾರ ಚರ್ಚೆ ಮಾಡುತ್ತಿದ್ದೇನೆ ಇದೂವರೆಗೂ ಯಾರಿಂದಲೂ ಉತ್ತರ ಬಂದಿಲ್ಲ.

ಇಂಥಹ ಚಟುವಟಿಕೆಗಳಿಗೆ ಡಿಜಿಟಲ್ ಕಡಿವಾಣ ಹಾಕುವುದೇ ತುಮಕೂರು ಜಿಐಎಸ್ ಗುರಿ, ಪಲಿತಾಂಶ ಕಾದು ನೋಡೋಣ?