TUMAKURU:SHAKTHIPEETA FOUNDATION
ದೇಶದ ಪ್ರತಿಯೊಬ್ಬ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ತಮ್ಮ ಅವಧಿಯಲ್ಲಿ ವರ್ಷಕ್ಕೆ ಒಂದು ಗ್ರಾಮಪಂಚಾಯಿತಿಯಂತೆ ೫ ಗ್ರಾಮಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು, ಅಭಿವೃದ್ಧಿ ಮಾಡಿ ಎಂದು ಮೋದಿಯವರು ಯೋಜನೆ ಜಾರಿಗೊಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 25 ಜನ ಲೋಕಸಭಾ ಸದಸ್ಯರು ಜಿಜೆಪಿಯಿಂದ ಚುನಾಯಿತರಾಗಿದ್ದಾರೆ. ಪ್ರಧಾನಿ ಮೋದಿಯವರೇ ಜಾರಿಗೆ ತಂದಿರುವ ಸಂಸದರ ಆದರ್ಶ ಗ್ರಾಮದ ಸ್ಥಿತಿ ನೋಡಿ.
2019-2020 ರಲ್ಲಿ 7 ಜನ ಸಂಸದರು ಮಾತ್ರ ಒಂದೊಂದು ಗ್ರಾಮಪಂಚಾಯತಿಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದಾರೆ. ಈ ವರ್ಷ ವಿಲೇಜ್ ಡೆವಲಪ್‌ಮೆಂಟ್ ಪ್ಲಾನ್ ಅಫ್ ಲೋಡ್ ಮಾಡಿರುವುದು ಕೇವಲ ಕೋಲಾರ ಲೋಕಸಭಾ ಕ್ಷೇತ್ರ.
2020-2021 ರಲ್ಲಿ 10 ಜನ ಸಂಸದರು ಮಾತ್ರ ಒಂದೊಂದು ಗ್ರಾಮಪಂಚಾಯತಿಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದಾರೆ. ಈ ವರ್ಷ ವಿಲೇಜ್ ಡೆವಲಪ್‌ಮೆಂಟ್ ಪ್ಲಾನ್ ಅಫ್ ಲೋಡ್ ಮಾಡಿರುವುದು ಕೇವಲ ರಾಯಚೂರು ಲೋಕಸಭಾ ಕ್ಷೇತ್ರ.
ಅಕೌಂಟಬಿಲಿಟಿ ಇಲ್ಲದ ಮೇಲೆ, ಯಾವುದೇ ಯೋಜನೆಯ ಅನುಷ್ಠಾನದಲ್ಲಿ ಇದಕ್ಕಿಂತ ಹೆಚ್ಚಿನದನ್ನು ಹೇಗೆ ನಿರೀಕ್ಷೆ ಮಾಡಲು ಸಾಧ್ಯಾ?