26th July 2024
Share

TUMAKURU:SHAKTHIPEETA FOUNDATION

 ದೇಶವಾಸಿಗಳಿಗೆ ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಒಂದು ಜಿಲ್ಲೆ-ಒಂದು ಉತ್ಪನ್ನ’ ಯೋಜನೆ ಜಾರಿಗೊಳಿಸಿದ್ದಾರೆ. ಈ ರೀತಿ ಯೋಜನೆ ಜಾರಿಗೊಳಿಸಿ ಎಂದು ವಿಷನ್ ಡಾಕ್ಯುಮೆಂಟ್ ಮಾಡಿ 2017 ರಲ್ಲಿಯೇ ಹಂಚಿಕೆ ಮಾಡಿದ್ದು ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ಎಂಬುದು ಇತಿಹಾಸ. ಕಾಕತಾಳೀಯ ಅದೇ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ತುಮಕೂರು ಜಿಲ್ಲೆಗೆ ನಾವು ಹೇಳಿದ ತೆಂಗು ಉತ್ಪನ್ನವನ್ನೇ ಆಯ್ಕೆ ಮಾಡಿ ಘೋಶಿಸಿದೆ.

 ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತೆಂಗು ಅಭಿವೃದ್ಧಿ ಮಂಡಳಿ ಸದಸ್ಯರು ಆಗಿದ್ದಾರೆ. ದಿನಾಂಕ: 22.01.2021   ರಂದು ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿಯಲ್ಲಿ ಈ ಯೋಜನೆಯ ಯಶಸ್ಸಿಗೆ ಶ್ರಮಿಸಲು ಒಂದು ಸ್ವಯಂ ಉದ್ಯೋಗ ಮೇಳ’ ಮಾಡಲು ಸಂಸದರು ಸೂಚಿಸಿದ್ದಾರೆ.

ತುಮಕೂರು ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಸುಮಾರು 10000 ಚದುರ ಅಡಿ ನಿವೇಶನದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಸಂಜೀವಿನಿ ಉತ್ಪನ್ನಗಳ ಮಾಲ್ ಅಥವಾ ಒಂದು ಜಿಲ್ಲೆ- ಒಂದು ಉತ್ಪನ್ನಗಳ ಮಾಲ್’ ನಿರ್ಮಾಣ ಮಾಡಲು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

ನನಗೂ  ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯ ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನೂ ಆಗಿರುವುದರಿಂದ ನಾನು ಕನಸು ಕಂಡ ಯೋಜನೆಯ ಯಶಸ್ಸಿಗೆ ಶ್ರಮಿಸಲು ಒಂದು ಸುವರ್ಣ ಅವಕಾಶ ದೊರೆತಿದೆ.

ಜಿ.ಎಸ್.ಬಸವರಾಜ್‌ರವರು ಲೋಕಸಭಾ ಅಧಿವೇಶನ ಮುಗಿದ ತಕ್ಷಣ, ಈ ಬಗ್ಗೆ ಸಭೆ ಕರೆಯಲು  ಸದಸ್ಯ ಕಾರ್ಯದರ್ಶಿರವರಿಗೆ ಸೂಚಿಸಿರುವುದರಿಂದ ಅಧಿಕಾರಿಗಳು ಕರಾರು ವಕ್ಕಾದ ಮಾಹಿತಿಗಳೊಂದಿಗೆ ಸಭೆಗೆ ಆಗಮಿಸಲು ಒಂದಿಷ್ಟು ವಿಚಾರಗಳು.

ಈ ಯೋಜನೆಯನ್ನು ವ್ಯಕ್ತಿಗಳು, ರೈತರು, ಸಂಘ ಸಂಸ್ಥೆಗಳು, ಸಂಜೀವಿನಿ ಸಂಘಗಳು, ಎಸ್‌ಪಿವಿ ಗಳು, ಯುವ ಸಂಘಗಳು, ಸಹಕಾರಿ ಇಲಾಖೆಯ ಸಂಸ್ಥೆಗಳು ಹೀಗೆ ಯಾರು ಬೇಕಾದರೂ ಮಾಡ ಬಹುದಂತೆ. ಆದ್ದರಿಂದ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಯಡಿಯಲ್ಲಿ ಯಾರು ಮಾಡಲು ಆಸಕ್ತಿ ತೋರಿದ್ದಾರೆ ಎಂಬ ಮಾಹಿತಿಯೊಂದಿಗೆ ಸಭೆಗೆ ಆಗಮಿಸುವುದು ಅಗತ್ಯವಾಗಿದೆ.

ತುಮಕೂರು ಜಿಲ್ಲಾಧಿಕಾರಿಗಳು ಮತ್ತು ಸಂಸದರು ಸಮಾಲೋಚನೆ ಸಭೆ ನಡೆಸಿ ತುಮಕೂರು ಜಿಲ್ಲೆ ಸೇರಿದಂತೆ ಹಾಸನ ಮತ್ತು ರಾಮನಗರ ಮೂರು ಜಿಲ್ಲೆಗಳಿಗೂ ತೆಂಗು  ಘೋಷಣೆ ಮಾಡಿರುವದು, ಸರಿಯಲ್ಲ ತುಮಕೂರು ಜಿಲ್ಲೆಗೆ ಈ ಯೋಜನೆ ಸೀಮಿತವಾಗಿರಲಿ ಎಂಬ ಮಾಹಿತಿ ಹಂಚಿಕೊಂಡಿದ್ದು, ಈಗಾಗಲೇ ಸಂಸದರು ಅಭಿವೃದ್ಧಿ ಕಾರ್ಯದರ್ಶಿಗಳಾದ ಶ್ರೀಮತಿ ವಂದಿತಾ ಶರ್ಮರವರೊಂದಿಗೆ ಚರ್ಚಿಸಿದ್ದಾರೆ.

  ಲಿಖಿತ ವರದಿ ನೀಡಿದ ನಂತರ ಅಗತ್ಯ ಕ್ರಮಕೈಗೊಳ್ಳುವುದಾಗಿ ಅಭಿವೃದ್ಧಿ ಕಾರ್ಯದರ್ಶಿಗಳು ತಿಳಿಸಿರುವುದರ, ಜೊತೆಗೆ ಈ ಯೋಜನೆಯ ಪಲಾನುಭವಿಗಳಿಗೆ ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ತರಬೇತಿ ನೀಡಲಾಗುತ್ತಿದೆ. ಒಂದು ವಾರದ ಎಲ್ಲಾ ಖರ್ಚು ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ.

  ಹೆಚ್ಚಿಗೆ ಪಲಾನುಭವಿಗಳು ಮುಂದೆ ಬಂದಲ್ಲಿ ತುಮಕೂರಿನಲ್ಲಿಯೇ ತರಬೇತಿ ನಡೆಸಲು ಸಂಸದರು ಮತ್ತು ಕೃಷಿ ಸಚಿವರ ಆಪ್ತಕಾರ್ಯದರ್ಶಿ ರವರು ಈಗಾಗಲೇ ಚಿಂತನೆ ನಡೆಸಿದ್ದಾರೆ. ಅಲ್ಲದೇ ಈ ಯೋಜನೆಯಡಿ ಆಹಾರ ಪದಾರ್ಥಗಳ ಉತ್ಪನ್ನಗಳು ಮಾತ್ರ ಬರಲಿವೆ, ತೆಂಗಿನ ಎಲ್ಲಾ ಉತ್ಪನ್ನಗಳು ಬರುವುದಿಲ್ಲಾ ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಈ ಎಲ್ಲಾ ಕಾರಣದಿಂದ ಮುಂದಿನ ಸಭೆಯು ಅತ್ಯಂತ ಮಹತ್ವದ್ದಾಗಿದೆ. ಮಾಹಿತಿಗಳೊಂದಿಗೆ ಸಭೆಗೆ ರೆಡಿಯಾಗಲು ಸಾಕಷ್ಟು ಮೊದಲೆ ಅಧಿಕಾರಿಗಳಿಗೆ ಬಹಿರಂಗ ಮನವಿ ಮಾಡಲಾಗಿದೆ.

 ಸಭೆಯಲ್ಲಿ ಕುಂದರನಹಳ್ಳಿ ರಮೇಶ್‌ರವರು ಏನೇನೋ ಪ್ರಶ್ನೆ ಕೇಳುತ್ತಾರೆ. ಮೊದಲೇ ಹೇಳಿದರೆ ನಾವು ರೆಡಿಯಾಗಿ ಬರುತ್ತೇವೆ ಎಂಬ ಅಧಿಕಾರಿಗಳ ಸಲಹೆಗೆ ಅನುಗುಣವಾಗಿ, ಮೊದಲೇ ಯಾರು ಏನು ಮಾಹಿತಿ ನೀಡಬೇಕು ಎಂಬ ಬಗ್ಗೆ ಪುರಾಣವನ್ನೇ ಬರೆದಿದ್ದೇನೆ. ಎಲ್ಲಾ ಇಲಾಖೆಯವರು ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಬಂದಲ್ಲಿ ಮೋದಿಯವರ ಮತ್ತು ಸಂಸದರ ಕನಸನ್ನು ನನಸು ಮಾಡಲು ಅನೂಕೂವಾಗಲಿದೆ.

 ಇದೊಂದು ಜನಪರ ಆಂದೋಲನವಾಗಬೇಕು. ಹೊಸದಾಗಿ ಆಯ್ಕೆ ಆಗಿರುವ ಗ್ರಾಮ ಪಂಚಾಯತ್ ಸದಸ್ಯರು, ಉಪಾಧ್ಯಕ್ಷರು ಮತ್ತು ಅಧ್ಯಕ್ಷರು ಕೈಜೋಡಿಸುವುದು ಸೂಕ್ತವಾಗಿದೆ.

  1. ತೆಂಗು ವಿಚಾರದಲ್ಲಿ ಪರಿಣಿತರ ಪಟ್ಟಿ: ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ ಮತ್ತು ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ
  2. ಒಂದು ಜಿಲ್ಲೆ- ಒಂದು ಉತ್ಪನ್ನ ಪಿಪಿಟಿ: ಸಂಪನ್ಮೂಲ ವ್ಯಕ್ತಿಗಳು.
  3. ತೆಂಗಿನ ಮರದ ವಿವಿಧ ಜಾತಿಗಳ ಪಟ್ಟಿ:  ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ
  4. ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿವಾರು ತೆಂಗು ಬೆಳೆಯ ಮಾಹಿತಿ: ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ
  5. ತೆಂಗಿನ ಬೇರಿನಿಂದ ಆರಂಭಿಸಿ ಕೊಬ್ಬರಿ ವರೆಗೂ ಮಾಡ ಬಹುದಾದ ಎಲ್ಲಾ ಉತ್ಪನ್ನಗಳ ಕೈಗಾರಿಕೆಗಳ ಪಟ್ಟಿ: ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಸಂಬಂಧಿಸಿದ ಇತರೆ ಇಲಾಖೆಗಳು.
  6. ಸಿಪಿಓಗಳ ಕಾರ್ಯ ವೈಖರಿ:ತೆಂಗು ಅಭಿವೃದ್ಧಿ ಮಂಡಳಿ
  7. ಎಫ್‌ಪಿಓಗಳ ಕಾರ್ಯ ವೈಖರಿ: ಜಂಟಿ ನಿರ್ದೇಶಕರು ಕೃಷಿ ಇಲಾಖೆ, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ಮತ್ತು ನಬಾರ್ಡ್ ಅಧಿಕಾರಿ.
  8. ಸಂಜೀವಿನಿ(ಗ್ರಾಮಾಂತರ): ಯೋಜನಾ ನಿರ್ದೇಶಕರು- ಜಿಲ್ಲಾ ಪಂಚಾಯತ್
  9. ಸಂಜೀವಿನಿ(ನಗರ): ಯೋಜನಾ ನಿರ್ದೇಶಕರು- ಜಿಲ್ಲಾ ನಗರಾಭಿವೃದ್ಧಿ ಕೋಶ.
  10. ತುಮಕೂರು ಜಿಲ್ಲೆಯಲ್ಲಿ ಹಾಲಿ ಇರುವ ತೆಂಗು ಉತ್ಪನ್ನಗಳ ಕೈಗಾರಿಕೆಗಳು:ಜಿಲ್ಲಾ ಕೈಗಾರಿಕಾ ಕೇಂದ್ರ.
  11. ಸಹಕಾರಿ ಸಂಸ್ಥೆಗಳು: ಡಿಆರ್‌ಸಿಎಸ್
  12. ಯುವಕ ಸಂಘಗಳು: ಜಿಲ್ಲಾ ಯುಜನ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರ.
  13. ಹೊಸ ಉದ್ಧಿಮೆದಾರರ ಪಟ್ಟಿ (ಗ್ರಾಮಾಂತರ): ಪಿಡಿಓ ಗ್ರಾಮ ಪಂಚಾಯಿತಿ.
  14. ಹೊಸ ಉದ್ಧಿಮೆದಾರರ ಪಟ್ಟಿ (ನಗರ) : ಆಯುಕ್ತರು ಮತ್ತು ಚೀಫ್ ಆಫೀಸರ್. ನಗರ ಸ್ಥಳೀಯ ಸಂಸ್ಥೆಗಳು.
  15. ಎಸ್‌ಪಿವಿ: ಡಿಆರ್‌ಸಿಎಸ್ 
  16. ಎನ್‌ಜಿಓ: ಡಿಆರ್‌ಸಿಎಸ್ 
  17. ಸ್ಡಯಂ ಉದ್ಯೋಗ ಮೇಳ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ
  18. ತೆಂಗು ಸ್ಟಾಟ್‌ಅಫ್ :  ತುಮಕೂರು ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ.
  19. ನಗರ ಪ್ರದೇಶಗಳಲ್ಲಿ ಸರ್ಕಾರಿ ಜಮೀನು: ಉಪವಿಭಾಗಾಧಿಕಾರಿಗಳು
  20. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಜಮೀನು: ಉಪವಿಭಾಗಾಧಿಕಾರಿಗಳು.
  21. ಬಾಡಿಗೆ ಅಥವಾ ಗುತ್ತಿಗೆ ಆಧಾರದ ಮೇಲೆ ನೀಡುವ ಖಾಸಗಿ ಜಮೀನು: ಉಪವಿಭಾಗಾಧಿಕಾರಿಗಳು.
  22. ಕೆಐಡಿಬಿ ವಸಾಹತು: ಅಭಿವೃದ್ಧಿ ಅಧಿಕಾರಿ
  23. ಕೆಎಸ್‌ಐಡಿಸಿ ವಸಾಹತು : ಡೆಪ್ಯೂಟಿ ಜನರಲ್ ಮ್ಯಾನೇಜರ್
  24. ಆರ್ಥಿಕ ನೆರವು ಸಹಾಯಧನ, ಮತ್ತು ಅನುದಾನ : ಲೀಡ್ ಬ್ಯಾಂಕ್/ ಕೆಎಸ್‌ಎಫ್‌ಸಿ/ ನಬಾರ್ಡ್
  25. ಕೇಂದ್ರ ಸರ್ಕಾರದ ಕ್ಲಸ್ಟರ್ ಯೋಜನೆಗಳು: ಡೈರಕ್ಟರ್ ಎಂ.ಎಸ್.ಎಂ.ಇ. ಕೇಂದ್ರ ಸರ್ಕಾರ ಬೆಂಗಳೂರು.
  26. ರಾಜ್ಯ ಸರ್ಕಾರದ ಕ್ಲಸ್ಟರ್ ಯೋಜನೆಗಳು: ಡೈರಕ್ಟರ್ ಎಂ.ಎಸ್.ಎಂ ಇ ರಾಜ್ಯ ಸರ್ಕಾರ, ಬೆಂಗಳೂರು.
  27. ತೆಂಗು ಅಭಿವೃದ್ಧಿ ಮಂಡಳಿ ಯೋಜನೆಗಳು: ಕೋಕೋನಟ್ ಬೋರ್ಡ್ ಅಧಿಕಾರಿ
  28. ನಾರು ಅಭಿವೃದ್ಧಿ ಮಂಡಳಿ ಯೋಜನೆಗಳು: ಕಾಯರ್ ಬೋರ್ಡ್ ಅಧಿಕಾರಿ
  29. ತೆಂಗು ಬೆಳೆಗಳ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು; ಉಪನಿರ್ದೇಶಕರು. ತೋಟಗಾರಿಕಾ ಇಲಾಖೆ.
  30. ತೆಂಗು ಮತ್ತು ನಾರು ಉತ್ಪನ್ನಗಳ ರಾಜ್ಯ ಸರ್ಕಾರದ ಯೋಜನೆಗಳು; ಜಂಟಿ ನಿರ್ದೇಶಕರು. ಜಿಲ್ಲಾ ಕೈಗಾರಿಕಾ ಕೇಂದ್ರ
  31. ಒಂದು ಜಿಲ್ಲೆ- ಒಂದು ಉತ್ಪನ್ನ ತರಬೇತಿ ಯೋಜನೆಗಳು- ಜಂಟಿ ನಿರ್ದೇಶಕರು ಕೃಷಿ ಇಲಾಖೆ.
  32. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೌಶಲ್ಯ ತರಬೇತಿ: ಕೌಶಲ್ಯ ಅಬಿವೃದ್ಧಿ ಅಧಿಕಾರಿ.
  33. ತೆಂಗು ಮತ್ತು ನಾರು ಸೇರಿದಂತೆ ತೆಂಗಿನ ಮರದ ಎಲ್ಲಾ ಉತ್ಪನ್ನಗಳ ತಂತ್ರಜ್ಞಾನ: ಸಿಎಫ್‌ಟಿಆರ್‌ಐ ಮತ್ತು ಸಂಬಂಧಿಸಿದ ಇತರೆ ಇಲಾಖೆಗಳು.
  34. ತೆಂಗು ಮತ್ತು ನಾರು ಸೇರಿದಂತೆ ತೆಂಗಿನ ಮರದ ಎಲ್ಲಾ ಉತ್ಪನ್ನಗಳ ರಫ್ತು ಬೇಡಿಕೆಗಳು: ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಸಂಬಂಧಿಸಿದ ಇತರೆ ಇಲಾಖೆಗಳು.
  35. ಮಾರು ಕಟ್ಟೆ: ಉಪ ನಿರ್ದೇಶಕರು ಎಪಿಎಂಸಿ.
  36. ಸಂಜೀವಿನಿ ಉತ್ಪನ್ನಗಳ ಮಾಲ್ ಅಥವಾ ಒಂದು ಜಿಲ್ಲೆ- ಒಂದು ಉತ್ಪನ್ನಗಳ ಮಾಲ್ ನಿರ್ಮಾಣ: ವ್ಯಸ್ಥಾಪಕ ನಿರ್ದೇಶಕರು, ತುಮಕೂರು ಸ್ಮಾರ್ಟ್ ಸಿಟಿ, ಪಿಡಿ ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಪಿಡಿ ಜಿಲ್ಲಾ ಪಂಚಾಯತ್.
  37. ಕೋಕನೆಟ್ ಸ್ಪೆಷಲ್ ಎಕನಾಮಿಕ್ ಝೋನ್/ ತೆಂಗು ಪಾರ್ಕ್/ ತೆಂಗು ಮೆಗಾ ಕ್ಲಸ್ಟರ್/ ಒಂದು ಜಿಲ್ಲೆ – ಒಂದು ಉತ್ಪನ್ನ ಸ್ಪೆಷಲ್ ಎಕನಾಮಿಕ್ ಝೋನ್ ಬಗ್ಗೆ ಎಲ್ಲಾ ಅಧಿಕಾರಿಗಳು ಸೂಕ್ತ ಸಲಹೆ ನೀಡುವುದು.
  38. ಲೋಕಲ್ ಇನ್‌ವೆಸ್ಟರ್‍ಸ್ ಮಾಹಿತಿ: ಅಭಿವೃದ್ಧಿ ರೆವೂಲ್ಯೂಷನ್ ಫೋರಂ. ತುಮಕೂರು
  39. ತೆಂಗು ಡಿಜಿಟಲ್ ಡೇಟಾ: ಶಕ್ತಿಪೀಠ ಡೇಟಾ ಪಾರ್ಕ್, ವಸಂತನರಸಾಪುರ ಕೈಗಾರಿಕಾ ವಸಾಹತು.
  40. ಒಂದು ಜಿಲ್ಲೆ-ಒಂದು ಉತ್ಪನ್ನ ಸ್ವಯಂ ಉದ್ಯೋಗ ಮೇಳ ಸಹಭಾಗಿತ್ವ: ಶಕ್ತಿಪೀಠ ಫೌಂಡೇಷನ್, ತುಮಕೂರು

ಇತರೆ ಅಗತ್ಯ ಮಾಹಿತಿಗಳಿದ್ದಲ್ಲಿ ಸೇರ್ಪಡೆ ಮಾಡಲು ಸಮಿತಿಯ ಅಧ್ಯಕ್ಷರು  ಮತ್ತು ಸದಸ್ಯ ಕಾರ್ಯದರ್ಶಿ ಯವರಲ್ಲಿ ಕೋರಿದೆ ಹಾಗೂ ಪರಿಣಿತರಲ್ಲಿಯೂ ಮನವಿ ಮಾಡಿದೆ.

-ಕುಂದರನಹಳ್ಳಿ ರಮೇಶ್