12th July 2024
Share

TUMAKURU:SHAKTHIPEETA FOUNDATION

 ಒಂದು ಜಿಲ್ಲೆ- ಒಂದು ಉತ್ಪನ್ನ’ ಯೋಜನೆಯಡಿಯಲ್ಲಿ, ತುಮಕೂರು ಜಿಲ್ಲೆಯಲ್ಲಿನ ತೆಂಗು ಬೆಳೆಗಾರರಿಗೆ ಅನೂಕೂಲವಾಗುವ ಎಲ್ಲಾ ಅವಕಾಶಗಳಿರುವ  ಕೊಕೊನಟ್ ಸ್ಪೆಷಲ್ ಎಕನಾಮಿಕ್ ಝೋನ್’ ಅನ್ನು ಲೋಕಲ್ ಇನ್‌ವೆಸ್ಟರ್ ಮೂಲಕ ಶೀಘ್ರದಲ್ಲಿ ಆರಂಭಿಸಲಾಗುವುದು.

 ದೇಶದಲ್ಲಿಯೇ ಮಾದರಿ ಎನಿಸುವ ಅಂತರ ರಾಷ್ಟ್ರೀಯ ಮಟ್ಟದ ಎಸ್‌ಇಝಡ್’ ನಲ್ಲಿ ತೆಂಗು ಉತ್ಪನ್ನಗಳ ಒಂದೊಂದು ಘಟಕಕ್ಕೆ  ಮಾತ್ರ ಅವಕಾಶ ಕಲ್ಪಿಸಲಾಗುವುದು. ನಿರುದ್ಯೋಗಿಗಳು ಮುಂದೆ ಬಂದಲ್ಲಿ ಎರಡನೇ ಹಂತದಲ್ಲಿ ಜಿಲ್ಲಾಧ್ಯಾಂತ ಪ್ರತಿಯೊಂದು ತೆಂಗು ಉತ್ಪನ್ನಕ್ಕೂ ಒಂದೊಂದು ಕ್ಲಸ್ಟರ್ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ.

 ಈ ಬಗ್ಗೆ ಫೆಬ್ರವರಿ ಕೊನೆ ವಾರದಲ್ಲಿ ಅಥವಾ ಮಾರ್ಚ್ ತಿಂಗಳು ಒಂದು ಜಿಲ್ಲೆ- ಒಂದು ಉತ್ಪನ್ನ ಸ್ವಯಂ ಉದ್ಯೋಗ ಮೇಳ’ ವನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಶಕ್ತಿಪೀಠ ಫೌಂಡೇಷನ್ ಸೇರಿದಂತೆ ಆಸಕ್ತ ಆನೇಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಲಾಗುವುದು.

ವಿಶ್ವದ ತೆಂಗು ಉತ್ಪನ್ನಗಳ ಬಳಕೆದಾರರ, ತೆಂಗು ಬೆಳೆಗಾರರ, ತೆಂಗು ಉತ್ಪನ್ನಗಳ ಮತ್ತು ವಿವಿಧ ಜಾತಿಯ ತೆಂಗು ತಳಿಗಳ ಡಿಜಿಟಲ್ ಡೇಟಾ ಪಾರ್ಕ್’ ಅನ್ನು ತುಮಕೂರಿನ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲಾಗುವುದು. 

ಒಂದು ಜಿಲ್ಲೆ- ಒಂದು ಉತ್ಪನ್ನ’ ಯೋಜನೆಯಡಿಯಲ್ಲಿ ತನ್ನ ಹುಟ್ಟೂರಿನಲ್ಲಿ, ತನ್ನ ತಂದೆ ತಾಯಿ ಹೆಸರಿನಲ್ಲಿ ಸುಮಾರು 8 ಎಕರೆ 10  ಗುಂಟೆ ಪ್ರದೇಶದಲ್ಲಿ ಕೊಕೊನಟ್ ಸ್ಪೆಷಲ್ ಎಕನಾಮಿಕ್ ಝೋನ್’ ಸ್ಥಾಪಿಸಲು ಲೋಕಲ್ ಇನ್‌ವೆಸ್ಟರ್ ಒಬ್ಬರು ಮುಂದೆ ಬಂದಿದ್ದಾರೆ.

ಪ್ರವಾಸಿ ಕೇಂದ್ರವಾದ ದೇವರಾಯನ ದುರ್ಗದ ತಪ್ಪಲಿನಲ್ಲಿ, ದಾಬಸ್‌ಪೇಟೆ- ಕೊರಟಗೆರೆ ರಸ್ತೆಗೆ ಹೊಂದಿಕೊಂಡಿರುವ ಉದ್ದೇಶಿತ ಎಸ್‌ಇಝಡ್’ ಸ್ಥಾಪನೆಯ ಜಮೀನು, ಈಗಾಗಲೇ ಭೂ ಪರಿವರ್ತನೆಯೂ ಆಗಿದೆ.

 ಉಳ್ಳವರಿಗೆ ದುಡಿಯಲು ಅಥವಾ ಹೂಡಿಕೆ ಮಾಡಲು ಅನೇಕ ಮಾರ್ಗಗಳು ಇವೆ. ಆದರೂ ಈ ಕುಟುಂಬ ನವೋಧ್ಯಮಿಗಳ ಕನಸುಗಳಿಗೆ ಸ್ಪಂಧಿಸಲು, ಶಕ್ತಿಪೀಠ ಫೌಂಡೇಷನ್ ಮನವಿಗೆ ಸ್ಪಂಧಿಸಿ, ಪ್ರಧಾನಿ ಮೋದಿಜಿಯವರ ಕನಸಿನ ಒಂದು ಜಿಲ್ಲೆ- ಒಂದು ಉತ್ಪನ್ನ’ ಯೋಜನೆಯ ಯಶಸ್ಸಿಗೆ ಹಾಗೂ ಜಿಲ್ಲೆಯ ತೆಂಗು ಬೆಳೆಗಾರರ ಭವಿಷ್ಯದ ಬಾಗಿಲು ತೆರೆಯಲು, ಹೂಡಿಕೆ ಮಾಡಲು ಮುಂದೆ ಬಂದಿರುವುದು ನಿಜಕ್ಕೂ ಜಿಲ್ಲೆಯ ಬಂಡವಾಳ ಶಾಹಿಗಳಿಗೆ ಮಾದರಿಯಾಗಲು ಪ್ರೇರೇಪಣೆ ಆಗುವುದೇ ಕಾದು ನೋಡಬೇಕು.

ಸುಮಾರು 2012  ರಿಂದ ಆರ್ಟಿಸಾನ್ ಹಬ್ ಸ್ಥಾಪನೆ/ ಕೋಸೆಝ್ ಸ್ಥಾಪನೆಯ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕನಸಿಗೆ ಚಾಲನೆ ದೊರಕಿದಂತಾಗಿದೆ. ಇಂಥಹ ಸ್ಥಳೀಯ ಹೂಡಿಕೆ ದಾರರಿಗೆ ಅಗತ್ಯ ನೆರವು ನೀಡಲು ತುಮಕೂರಿನ ಶಕ್ತಿಪೀಠ ಫೌಂಡೇಷನ್ ನಿರ್ಧರಿಸಿದೆ.

  ಈ ಎಸ್‌ಇಝಡ್’ ನಲ್ಲಿ ಅತ್ಯಂತ ಕಡು ಬಡವರು ಸೇರಿದಂತೆ ಎಲ್ಲಾ ವರ್ಗಕ್ಕೂ ಅವಕಾಶವಿದೆ. ಸುಮಾರು  125-150  ತೆಂಗು ಉತ್ಪನ್ನಗಳ ಘಟಕ ಆರಂಭಿಸಲು  ಮಾತ್ರ ಅವಕಾಶ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.

 ’ಇದೊಂದು ರೈತರ ಮಕ್ಕಳ ನೇತೃತ್ವದಲ್ಲಿ ಹೈಟೆಕ್ ಕಾರ್ಪೋರೇಟ್ ಕಲ್ಚರ್‌ನಲ್ಲಿ, ಐಟಿಬಿಟಿ ಮಾದರಿಯ ಹಬ್ ಆಗಲಿದೆ. ಒಂದು ವಿಷನ್ ಗ್ರೂಪ್ ತನ್ನ ಕೆಲಸವನ್ನು ಈಗಾಗಲೇ ಆರಂಭಿಸಿದ್ದಾರೆ. ಇದೊಂದು ಪ್ಲಾಟ್ ಫಾರಂ, ಯಾರು ಬೇಕಾದರೂ ಬಳಸಿಕೊಳ್ಳ ಬಹುದು’

ಕರಡು ಎಂಓಯುಗಳ ಪ್ರಮುಖ ಅಂಶಗಳು ರೀತಿ ಇವೆ.

 1. ಜಿಲ್ಲಾಧಿಕಾರಿಗಳು ನಿಗಧಿ ಪಡಿಸುವ ಅಥವಾ ಲೋಕೋಪಯೋಗಿ ದರದಂತೆ ಕೈಗಾರಿಕಾ ನಿವೇಶನ ಬಾಡಿಗೆ.
 2. ಜಿಲ್ಲಾಧಿಕಾರಿಗಳು ನಿಗಧಿ ಪಡಿಸುವ ಅಥವಾ ಲೋಕೋಪಯೋಗಿ ದರದಂತೆ ಯೋಜನೆಗೆ ಅಗತ್ಯವಿರುವ ಕಟ್ಟಡದ ಬಾಡಿಗೆ.
 3. ಜಿಲ್ಲಾಧಿಕಾರಿಗಳು ನಿಗಧಿ ಪಡಿಸುವ ಅಥವಾ ಸ್ಥಳೀಯ ಮಾರುಕಟ್ಟೆ ದರದಂತೆ ಅಪಾರ್ಟ್ ಮೆಂಟ್ ಮಾದರಿಯಲ್ಲಿ ಕೈಗಾರಿಕಾ ನಿವೇಶನ ಲೀಸ್ ಕಮ್ ಸೇಲ್.
 4. ಸುಮಾರು 125-150 ತೆಂಗು ಉತ್ಪನ್ನಗಳ ಕೈಗಾರಿಕೆಗಳು ಒಂದೇ ಹಬ್‌ನಲ್ಲಿ ಆರಂಭ.
 5. ಪ್ರತಿಯೊಂದು ಉತ್ಪನ್ನಗಳ ಕೈಗಾರಿಕೆಗಳಿಗೂ ಲಿವಿಂಗ್ ಕಮ್ ವರ್ಕ್‌ಷೆಡ್ ಮಾದರಿ.
 6. ಪ್ರತಿಯೊಂದು ಉತ್ಪನ್ನಗಳ ಕೈಗಾರಿಕೆಗಳಿಗೂ ಬ್ಯಾಂಕ್ ಮೂಲಕ ಆರ್ಥಿಕ ನೆರವು, ಕಚ್ಚಾ ವಸ್ತುಗಳ ಸರಬರಾಜು ಬ್ಯಾಂಕ್, ಮೌಲ್ಯವರ್ಧಿತ ತೆಂಗು ಉತ್ಪನ್ನಗಳ ಶೇಖರಣೆಗಾಗಿ ಕೋಲ್ಡ್ ಸ್ಟೋರೇಜ್ ಮತ್ತು ಗೋಡಾನ್. 
 7. ತುಮಕೂರು ಜಿಲ್ಯಾಂಧ್ಯಂತ ಮೌಲ್ಯವರ್ಧಿತ ತೆಂಗು ಉತ್ಪನ್ನಗಳ ಫಾರ್‌ವಾರ್ಡ್ & ಬ್ಯಾಂಕ್‌ವಾರ್ಡ್ ಲಿಂಕೇಜ್ ವ್ಯವಸ್ಥೆ.
 8. ಶೇ 100 ರಷ್ಟು ಮೌಲ್ಯವರ್ಧಿತ ತೆಂಗು ಉತ್ಪನ್ನಗಳ ರಫ್ತು.
 9. ಹಾಲು ಉತ್ಪನ್ನಗಳ ನಂದಿನಿ ಬ್ರ್ಯಾಂಡ್ ಮಾದರಿಯಲ್ಲಿ ಕಲ್ಪತರು ಬ್ರಾಂಡ್’ ಅಡಿಯಲ್ಲಿ ಉತ್ಪನ್ನಗಳ ಮಾರಾಟ.
 10. ಪಾರದರ್ಶಕತೆಗಾಗಿ ಶೇ 100 ರಷ್ಟು ಆನ್‌ಲೈನ್ ವ್ಯವಹಾರ.
 11. ನವೋಧ್ಯಮಿಗಳಿಗೆ ತೆಂಗು ಉತ್ಪನ್ನಗಳ ಇನ್‌ಕ್ಯುಬೇಷನ್ ಸೆಂಟರ್.
 12. ಉಧ್ಯಮಿ ಆಗಲು ಬಯಸಿದ ಅಭ್ಯರ್ಥಿಗಳ ಆಯ್ಕೆಯಾದ ನಂತರ ನೀಡ್ ಬೇಸ್ಡ್ ತರಬೇತಿ.
 13. ಅತ್ಯುತ್ತಮ ಮಾದರಿಯಲ್ಲಿ ಕ್ಯಾಂಟೀನ್ ವ್ಯವಸ್ಥೆ.
 14. ನಿರ್ಗತಿಕ, ಬಡವ, ಉದ್ಯಮಿ ಆಗಲು ಬಯಸುವ ಸ್ವಾಭಿಮಾನಿ ಅಭ್ಯರ್ಥಿಗಳಿಗೆ ಮನೆಯಿಂದ ಬರಿ ಕೈಯಲ್ಲಿ ಬಂದರೂ ಹೊಸ ಬಟ್ಟೆಗಳನ್ನು ಹೊಲಿಸಿ ಕೊಡುವುದರಿಂದ ಆರಂಭಿಸಿ, ಶೇ 100 ರಷ್ಟು ಟ್ರಂಕಿ ಬೇಸಿಸ್‌ನಲ್ಲಿ ಎ ಟು ಝಡ್ ನೆರವು.
 15. ಉದ್ಯಮಿಗಳ ಮತ್ತು ನೌಕರರ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ.
 16. ದುಡಿದು ತಿನ್ನಬೇಕು ಎಂಬ ಛಲವಿರುವವರಿಗೆ ಮಾತ್ರ ಅವಕಾಶ.
 17. ತುಮಕೂರು ನಗರದಲ್ಲಿ ಮಾರಾಟ ಮಾಳಿಗೆ.
 18. ತುಮಕೂರು ಜಿಲ್ಲಾಧ್ಯಾಂತ  ಇದೇ ಮಾದರಿಯಲ್ಲಿ ವಿಸ್ತರಣೆ.
 19. ಆಡಳಿತ ವ್ಯಸ್ಥೆಗೆ ಒಂದು ಲೀಗಲ್ ಎಸ್‌ಪಿವಿ.
 20. ಉಧ್ಯಮಿಗಳಿಗೆ ಅಗತ್ಯವಿರುವ ಕಾಮನ್ ಸ್ಪೆಷಲಿಟಿ ಸೆಂಟರ್.
 21. ಯಾವುದೇ ಕಾರಣಕ್ಕೂ ನಿಗದಿಯಾದ ನಿವೇಶನದಲ್ಲಿ ಅದೇ ಉತ್ಪನ್ನದ ಘಟಕ ಆರಂಭಿಸಬೇಕು. ಒಂದು ವೇಳೆ ಉಧ್ಯಮಿ ವಿಫಲ ಆದಲ್ಲಿ ಇನ್ನೊಬ್ಬ  ಉಧ್ಯಮಿಗೆ ಅದೇ ಉತ್ಪನ್ನದ ಘಟಕ ಆರಂಭಿಸಲು ಅವಕಾಶ ಕಲ್ಪಿಸಲಾಗುವುದು.

 ಪರಿಣಿತರು ಉತ್ತಮ ಸಲಹೆಗಳನ್ನು ನೀಡಿದಲ್ಲಿ ಯೋಜನೆ ಯಶಸ್ಸಿಗೆ ಮೆಟ್ಟಿಲುಗಳು ಆಗುವುದರಲ್ಲಿ ಸಂದೇಹವಿಲ್ಲ. ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಒಂದು ಉತ್ತಮವಾದ ಪ್ರಸ್ತಾವನೆ ಸಿದ್ಧಪಡಿಸಲು  ಹಾಗೂ ತುಮಕೂರು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ  ನೌಕರರ ಆಯ್ಕೆ ಮಾಡಿ ಕೊಡಲು ಮನವಿ ಮಾಡಲಾಗಿದೆ.

 ತುಮಕೂರು ಜಿಲ್ಲಾಡಳಿತದ, ಕರ್ನಾಟಕ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಮುದ್ರೆಯೊಂದಿಗೆ ಶೀಘ್ರದಲ್ಲಿ ಯೋಜನೆ ಆರಂಭಿಸಲಾಗುವುದು. ತುಮಕೂರು ನಗರದ ಬಟವಾಡೆಯ  ಎಪಿಎಂಸಿ ಯಾರ್ಡ್‌ನಲ್ಲಿ ರಫ್ತು ಇನ್‌ಕ್ಯುಬೇಷನ್ ಸೆಂಟರ್ ಅನ್ನು  ಆರಂಭಿಸಲಾಗುವುದು. 

ಎಲ್ಲಕ್ಕೂ ಮೊದಲು ದೆಹಲಿಗೆ ತೆರಳಿ, ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ, ಈ ಉದ್ದೇಶಿತ ಯೋಜನೆಯ ಪ್ರಸ್ತಾವನೆ ಬಗ್ಗೆ ಸಮಾಲೋಚನೆ ನಡೆಸಲಾಗುವುದು.