22nd December 2024
Share

TUMAKURU:SHAKTHI PEETA FOUNDATION

ಕಳೆದ ಒಂದು ವಾರಗಳ ಕಾಲ ಅಂದರೆ ದಿನಾಂಕ:08.02.2021 ರಿಂದ 14.02.2021 ರವರೆಗೆ ದೆಹಲಿಗೆ ನಿಯೋಗ ಹೋಗಿದ್ದ ಪರಿಣಾಮ ಇ-ಪೇಪರ್ ಪ್ರಕಟಿಸಲು ಸಾಧ್ಯಾವಾಗಲಿಲ್ಲ ಓದುಗರಲ್ಲಿ ಕ್ಷಮೆ. ಓದುಗರ ಪ್ರಶ್ನೆ ಊರಗಿಲ್ವ- ಹುಷಾರಿಲ್ವ-ಪೇಪರ್ ಏಕೆ ಬರುತ್ತಿಲ್ಲ’ ಎಂಬ ಪ್ರಶ್ನೆ ನನಗೆ ನೆಮ್ಮದಿ ತಂದಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ಸ್ನೇಹಿತ ಶ್ರೀ ರಾಜಶೇಖರ್‌ರವರು, ಶ್ರೀ ಸಿದ್ದೇಶ್‌ರವರು ಮತ್ತು ನಾನು ಕಳೆದ ಒಂದು ವಾರ ದೆಹಲಿಯಲ್ಲಿ ರಾಜ್ಯದ ಮತ್ತು ತುಮಕೂರು ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರುಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.

 ಲೋಕಸಭಾ ಅಧಿವೇಶನ ಮಧ್ಯಾಹ್ನ ನಡೆಯುತ್ತಿದ್ದರಿಂದ ಪ್ರತಿ ದಿವಸ 3 ಗಂಟೆವರೆಗೆ ವಿವಿಧ ಕಚೇರಿಗಳಿಗೆ ಬಸವರಾಜ್‌ರವರು ಭೇಟಿ ನೀಡಿ, ಹಲವಾರು ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

  1. ರಾಜ್ಯದ ನದಿಜೋಡಣೆ ಯೋಜನೆ ಬಗ್ಗೆ ಎನ್.ಡಬ್ಲ್ಯೂ.ಡಿ ಡೈರೆಕ್ಟರ್ ರವರೊಂದಿಗೆ ಸಮಾಲೋಚನೆ.
  2. ರಾಜ್ಯದ ನದಿಜೋಡಣೆ ಯೋಜನೆ ಬಗ್ಗೆ ಸಿ.ಡಬ್ಲ್ಯೂ.ಸಿ ಛೇರ್‍ಮನ್ ರವರೊಂದಿಗೆ ಸಮಾಲೋಚನೆ.
  3. ಭಧ್ರಾ ಮೇಲ್ದಂಡೆ ಯೋಜನೆಯನ್ನು ಎನ್.ಪಿ.ಪಿ ಯೋಜನೆಯಾಗಿ ಘೋಷಣೆ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ.
  4. ಎತ್ತಿನ ಹೊಳೆ ಯೋಜನೆಯನ್ನು ಎನ್.ಪಿ.ಪಿ ಯೋಜನೆಯಾಗಿ ಘೋಷಣೆ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ.
  5. ಭೇಡ್ತಿ ಮತ್ತು ವರದಾ ಯೋಜನೆಯನ್ನು ಎನ್.ಪಿ.ಪಿ ಯೋಜನೆಯಾಗಿ ಘೋಷಣೆ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ.
  6. ರಾಜ್ಯದ ನದಿಜೋಡಣೆ ಯೋಜನೆ ಬಗ್ಗೆ ಶ್ರೀ ಗಜೇಂದ್ರ ಶೇಖಾವತ್‌ರವರೊಂದಿಗೆ ಸಮಾಲೋಚನೆ.
  7. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ ಜಾರಿ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ.
  8. ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ಧಾರಿ ಯೋಜನೆಗಳ ಬಗ್ಗೆ ಶ್ರೀ ನಿತಿನ್ ಗಡ್ಕರಿರವರೊಂದಿಗೆ    ಸಮಾಲೋಚನೆ.
  9. ದೇಶದ ಮಟ್ಟದಲ್ಲಿನ ದಿಶಾ ಮಾರ್ಗದರ್ಶಿ ಸೂತ್ರ ಪರಿಷ್ಕರಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ.
  10. ತುಮಕೂರು ನಗರದಲ್ಲಿ ದಿಶಾ ಸಮ್ಮೇಳನ ನಡೆಸುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ.
  11. ಒಂದು ಜಿಲ್ಲೆ – ಒಂದು ಉತ್ಪನ್ನ ಯೋಜನೆ ಯಶಸ್ವಿ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ.
  12. ಕೋಕನೆಟ್ ಸ್ಪೆಷಲ್ ಎಕನಾಮಿಕ್ ಝೋನ್ ಸ್ಥಾಪನೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ.
  13. ನೆನೆಗುದಿಗೆ ಬಿದ್ದಿರುವ ರೈಲ್ವೇ ಯೋಜನೆಗಳ ಬಗ್ಗೆ ವಿವಿಧ ಅಧಿಕಾರಿಗಳೊಂದಿಗೆ ಸಮಾಲೋಚನೆ.
  14. ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ಧಾರಿ ಯೋಜನೆಗಳ ಬಗ್ಗೆ ವಿವಿಧ ಅಧಿಕಾರಿಗಳೊಂದಿಗೆ ಸಮಾಲೋಚನೆ.
  15. ಮಧುಗಿರಿ ಏಕಶಿಲಾ ಬೆಟ್ಟದ ಕೇಬಲ್ ಕಾರ್ ಯೋಜನೆ ಬಗ್ಗೆ ವಿವಿಧ ಅಧಿಕಾರಿಗಳೊಂದಿಗೆ ಸಮಾಲೋಚನೆ.
  16. ತುಮಕೂರು ಜಿಲ್ಲೆಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ಧಾಣದ ಆರಂಭಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ. 
  17. ನಗರಾಭಿವೃದ್ಧಿ ಯೋಜನೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ. 
  18. ಜಲಜೀವನ್ ಮಿಷನ್ ಯೋಜನೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ. 
  19. ಕ್ರೀಡಾ ಗ್ರಾಮ ಸ್ಥಾಪನೆ ಯೋಜನೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ.
  20. ಕ್ರೀಡಾ ಅಕಡೆಮಿ ಬಗ್ಗೆ ಸ್ಪೋರ್ಟ್ಸ್ ಅಥಾರಿಟಿ ಇಂಡಿಯಾ  ಅಧಿಕಾರಿಗಳೊಂದಿಗೆ ಸಮಾಲೋಚನೆ.
  21. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇನ್‌ವೆಸ್ಟ್ ತುಮಕೂರು ಸಮಾವೇಶ ನಡೆಸುವ ಯೋಜನೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ. 
  22. ಕೇಂದ್ರ ಆರ್ಥಿಕ ಸಚಿವರ ಆಪ್ತ ಕಾರ್ಯದರ್ಶಿಯಾದ ಶ್ರೀ ನಕುಲ್‌ರವರೊಂದಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಸಮಾಲೋಚನೆ. 
  23. ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್‌ಕುಮಾರ್‌ರವರ ಅಧ್ಯಕ್ಷತೆಯಲ್ಲಿ ರಾಜ್ಯದ ಬಿಜೆಪಿ ಸಂಸದರ ಸಭೆಯಲ್ಲಿಯಲ್ಲಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಂಸದರ ಚರ್ಚೆ. 
  24. ಕರ್ನಾಟಕ ರಾಜ್ಯದ ಬಿಜೆಪಿ ಉಸ್ತುವಾರಿ ಶ್ರೀ ಅರಣ್‌ಸಿಂಗ್‌ರವರೊಂದಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಂಸದರ ಸಮಾಲೋಚನೆ.
  25. ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ರಾಜ್ಯದ ಸಂಸದರ ಗಮನ ಸೆಳೆಯಲು, ದೆಹಲಿಯಲ್ಲಿ ಶಕ್ತಿಪೀಠ ಫೌಂಡೇಷನ್ ಹಾಗೂ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಚೇರಿ ಅರಂಭಿಸಲು ಇರುವ ಸಾಧಕ-ಭಾದಕಗಳ ಬಗ್ಗೆ ಕರ್ನಾಟಕದ  ಕೆಲವು ಅಧಿಕಾರಿಗಳೊಂದಿಗೆ ಸಮಾಲೋಚನೆ.

ವಿವರವಾಗಿ ಒಂದೊಂದೇ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಸಮಯದ ಅಭಾವದಿಂದ ಹಲವಾರು ಯೋಜನೆಗಳ ಬಗ್ಗೆ ಚರ್ಚಿಸಲು ಸಾಧ್ಯಾವಾಗಲಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ.

ಕುಂದರನಹಳ್ಳಿ ರಮೇಶ್.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ, ತುಮಕೂರು.