22nd December 2024
Share

TUMAKURU:SHAKTHIPEETA FOUNDATION

 ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ  ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕುರುಂಕೋಟೆ ಗ್ರಾಮಪಂಚಾಯಿತಿಯ ಸಂಸದರ ಆದರ್ಶ ಗ್ರಾಮ ಯೋಜನೆಯ ವಿಲೇಜ್ ಡೆವಲಪ್‌ಮೆಂಟ್ ಪ್ಲಾನ್ ಪ್ರಗತಿ ಪರಿಶೀಲನೆ ಸಭೆಯನ್ನು ಫೆ 23 ಮತ್ತು 27 ರಂದು ಕರೆಯಲು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ಸೂಚಿಸಿದ್ದಾರೆ.

 ಈ ಎರಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಸರ್ಕಾರಿ ಜಮೀನಿನಲ್ಲಿ ಅಥವಾ ಖಾಸಗಿ ಜಮೀನು ಭೂಸ್ವಾಧೀನ ಮಾಡುವ ಮೂಲಕ ನಿವೇಶನ ರಹಿತರ ಗ್ರಾಮ ಪಂಚಾಯಿತಿ ಎಂದು ಘೋಶಿಸಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

 ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸಂಸದರ ಆದರ್ಶ ಗ್ರಾಮ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಂಡು, ತಮ್ಮ ತಮ್ಮ ಇಲಾಖೆಯಿಂದ ಯಾವ ಯೋಜನೆ ಕೈಗೊಳ್ಳಬಹುದು ಎಂಬ ಮಾಹಿತಿಯೊಂದಿಗೆ  ಸಭೆಗೆ ಹಾಜರಾಗಲು ಸಲಹೆ ನೀಡಿದ್ದಾರೆ. ಆಸಕ್ತ ಸಾರ್ವಜನಿಕರನ್ನು ಮತ್ತು ಮಾಧ್ಯಮ ಮಿತ್ರರನ್ನು ಸಭೆಗೆ ಆಹ್ವಾನಿಸಲು ಸೂಚಿಸಿದ್ದಾರೆ.