22nd December 2024
Share
G.S.BASAVARAJ, SUNIL SHARMA & KUNDARANAHALLI RAMESH

TUMAKURU:SHAKTHIPEETA FOUNDATION

 ಬೆಂಗಳೂರು ರೀಜನ್ ಇಂಡಸ್ಟ್ರಿಯಲ್ ರೈಲ್ ಕಾರಿಡಾರ್ ಯೋಜನೆಗೆ ಇನ್ ಪ್ರಿನ್ಸಿಫಲ್ ಅಪ್ರೂವಲ್ ನೀಡಲಾಗಿದೆ ಎಂದು ರೈಲ್ವೇ ಬೋರ್ಡ್ ಅಧ್ಯಕ್ಷ ಹಾಗೂ ಸಿಇಓ ರವರಾದ ಶ್ರೀ ಸುನಿಲ್ ಶರ್ಮರವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ತಿಳಿಸಿದ್ದಾರೆ.

ದೆಹಲಿಯ ರೈಲ್ವೆ ಭವನದಲ್ಲಿ  ದಿನಾಂಕ:13.02.2021 ರಂದು  ಶ್ರೀ ಜಿಎಸ್.ಬಸವರಾಜ್‌ರವರು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರಾದ ಶ್ರಿ ಕುಂದರನಹಳ್ಳಿ ರಮೇಶ್‌ರವರು ಭೇಟಿಯಾಗಿ ನೆನೆಗುದಿಗೆ ಬಿದ್ದಿರುವ ರಾಜ್ಯದ ಹಲವಾರು ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಶೀಘ್ರದಲ್ಲಿ ಲಿಖಿತ ಮಾಹಿತಿ ನೀಡಲು ರೈಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಗಿ ದೂರವಾಣಿ ಕರೆಮಾಡಿ ಸೂಚಿಸಿದ್ದಾರೆ.                                                                                                           

 ಕೈಗಾರಿಕಾ ವಸಹಾತು ದೇಶದಲ್ಲಿನ ಔದ್ಯೋಮಿಕ ಚಟುವಟುಕೆ, ಆರ್ಥಿಕ ಬೆಳವಣಿಗೆ ಕಂಡು ಕೊಳ್ಳಲು ಮತ್ತು ಕೈಗಾರಿಕೆಗಳಿಗೆ ಅತ್ಯಾವಶ್ಯಕವಾದ ಕಚ್ಚಾವಸ್ತು-ನುರಿತ ಮಾನವ ಸಂಪನ್ಮೂಲ ಸರಬರಾಜು ಮತ್ತು ತಡೆ ರಹಿತ ವೇಗದ ಸಾರಿಗೆ  ಸೌಕರ್ಯಗಳು ಮೂಲಾಧಾರವಾಗಿದೆ. ರಸ್ತೆಗಳಿಗಿಂತ ರೈಲು ಸಂಪರ್ಕ ಹೆಚ್ಚು ಪರಿಣಾಮಕಾರಿ.

  ನೆಲ ಸಾರಿಗೆ ವ್ಯವಸ್ಥೆ ಅವರಣದಲ್ಲಿ ರೈಲು ಸಾರಿಗೆ ಸಮೂಹ ತ್ವರಿತ ಸಾಗಾಣಿಕೆ ವ್ಯವಸ್ಥೆ ಅದಕ್ಕೆ ಲಗತ್ತಾಗಿ ಕೈಗಾರಿಕಾ ಹಬ್‌ಗಳು ಹೊಂದಿದ್ದರೆ , ರಸ್ತೆ ಮೇಲಿನ ಹೊರೆ ಇಳಿಸುವ ಜೊತೆಗೆ ವಾತಾವರಣಕ್ಕೆ ಕಾರ್ಬನ್ ಹೊರಸೂಸುವ ಅಂಶ ಸಹಾ ಕಡಿಮೆಗೆ ಕಾರಣವಾಗುತ್ತದೆ ಮತ್ತು ಕೈಗಾರಿಕೆಗಳಿಗೆ ಕಡಿಮೆ ಬೆಲೆಯ ಸಪ್ಲೆ ಚೈನ್ ಅಗಿರುತ್ತದೆ. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ನಮ್ಮ ವಸ್ತುಗಳ ಬೆಲೆ ಕಡಿಮೆಯಾಗಿ ಜಾಗತಿಕ ಬೆಲೆ ಪಟ್ಟಿ ಸವಾಲ್‌ಗಳಿಗೆ ಸರಿ ಸಾಟಿಯಾಗಿ ನಿಲ್ಲಲು ಸಹಾಯವಾಗಿ   ರಪ್ತು ಬೆಳವಣಿಗೆ ಅಂಶ ಕಂಡುಬರುವುದು.

 ಈ ಹಿನ್ನಲೆಯಲ್ಲಿ ಭವಿಷ್ಯದ ಚೈನೈ-ಬೆಂಗಳೂರು-ತುಮಕೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಮತ್ತು ಬೆಂಗಳೂರು-ಮುಂಬೈ ಎಕನಾಮಿಕ್ಸ್ ಕಾರಿಡಾರ್‌ಗಳಿಗೆ ಪೂರಕವಾಗುವ, ಬೆಂಗಳೂರು ಸುತ್ತ ಮುತ್ತಲ ಕೈಗಾರಿಕಾ ವಸಹಾತುಗಳ ನಡುವೆ ಸಂಪರ್ಕ ವಿರುವಂತಹ   ಹಾಗೂ

  1. ಬೆಂಗಳೂರು-ಮೈಸೂರು.
  2. ಬೆಂಗಳೂರು-ತುಮಕೂರು.
  3. ಬೆಂಗಳೂರು-ಹಾಸನ-ಮಂಗಳೂರು.
  4. ಬೆಂಗಳೂರು-ದೊಡ್ಡಬಳ್ಳಾಪುರ.
  5. ಬೆಂಗಳೂರು-ಬಂಗಾರು ಪೇಟೆ.
  6. ಬೆಂಗಳೂರು – ಆನೇಕಲ್-ಹೊಸೂರು.

 ’ಸಧ್ಯ ಇರುವ ರೈಲು ಮಾರ್ಗಗಳಿಗೆ ಬೆಂಗಳೂರು ಸುತ್ತಲೂ ರಿಂಗ್ ರಸ್ತೆ ಮಾದರಿಯಲ್ಲಿ, ಒಂದಕ್ಕೊಂದು ಸೇರ್ಪಡೆ ಆಗುವ ರೈಲು ರಿಂಗ್ ರಸ್ತೆ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದು ರೈಲ್ವೆ ಅಭಿವೃದ್ಧಿ ಯೋಜನೆಗಳ ಸಂಶೋಧಕ ಶ್ರೀ ಟಿ.ಆರ್.ರಘೋತ್ತಮರಾವ್‌ರವರು ಒಂದು ಪ್ರಸ್ತಾವನೆಯನ್ನು ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಸಲ್ಲಿಸಿದ್ದರು’

 ಈ ಯೋಜನೆ ಹಲವಾರು ರೈಲು ಮಾರ್ಗಗಳಿಗೆ ಸೇರ್ಪಡೆಯಾಗಿ  ರೈಲು/ಗೂಡ್ಸ ರೈಲು ಓಡಾಟಕ್ಕೆ ಪೂರಕವಾಗಿರುತ್ತದೆ. ಇದರಿಂದ ಗೂಡ್ಸ ಸಂಚಾರವಲ್ಲದೆ, ಬೆಂಗಳೂರು ನಗರದ ಪಡಸಾಲೆ ನಗರ ಮತ್ತು ಊರುಗಳಿಂದ  ರಾಜಧಾನಿಗೆ ದಿನ ನಿತ್ಯ ಬರುವ ಉದ್ಯೋಗಿಗಳಿಗೆ  ಅಡಚಣೆ ರಹಿತ ಸಮೂಹ ಸಾರಿಗೆ ಸಂಪರ್ಕ ಸೇವೆಗೆ ಕಾರಣವಾಗಲಿದೆ.

 ಈ ಯೋಜನೆಯನ್ನು ಕರ್ನಾಟಕ ಸರಕಾರ ಮತ್ತು ರೈಲ್ವೆ ಸಚಿವಾಲಯ ಜಂಟಿಯಾಗಿ ನಿರ್ಮಿಸಿದರೆ ಇದು ಈಗ ಮಂಜೂರು ಆಗಿರುವ ಮೊದಲನೆಯ ಹಂತದ ಉಪನಗರ ರೈಲು ಯೋಜನೆಗೆ ಮತ್ತು ಫೆರಿ ಫೆರಿಯಲ್‌ರಿಂಗ್ ರೋಡ್, ಆತ್ಮ ನಿರ್ಭರ್ ಭಾರತ್/ ಕಾಂಪೀಟ್ ವಿತ್ ಚೈನಾ ವೋಕಲ್ ಫಾರ್ ಲೋಕಲ್ ಪರಿಕಲ್ಪನೆಗೆ, ಇನ್ವೆಸ್ಟ್ ಕರ್ನಾಟಕ 2021 ಪೂರಕವಾಗುವ ಈ ಯೋಜನೆಗೆ ಮಹತ್ವದ್ದಾಗಿದೆ.

 ಈ ಯೋಜನೆಯ ಬಗ್ಗೆ ದಿನಾಂಕ:30.11.2016  ರಲ್ಲಿ ಸನ್ಮಾನ್ಯ  ಶ್ರೀ.ಬಿಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಶ್ರೀ ಸುರೆಶ್ ಪ್ರಭು ಅವರನ್ನು ಶ್ರೀ.ಜಿಎಸ್.ಬಸವರಾಜ್‌ರವರು ಮತ್ತು  ಶ್ರೀ ಕುಂದರನಹಳ್ಳಿರಮೇಶ್ ರವರು ನವ ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದು ಇತಿಹಾಸ.

  ರೈಲ್ವೆ ಸಚಿವರು ಮುಂದಿನ ಕ್ರಮಕ್ಕಾಗಿ ರೈಟ್ಸ್ ಸಂಸ್ಧೆಗೆ ವರದಿ ನೀಡಲು ಸೂಚಿಸಿದ್ದರು. ಜಿಎಸ್.ಬಸವರಾಜ್‌ರವರು, ರೈಟ್ಸ್ ಸಂಸ್ಧೆಯ  ಯೋಜನಾ ನಿರ್ಧೇಶಕರಾದ ಶ್ರಿಯುತ ಆರವಿಂದ ಕುಮಾರ್ ಅವರಿಗೆ ದಿನಾಂಕ:03.01.2017  ರಲ್ಲಿ ಪತ್ರ ಬರೆದು ಮಾನ್ಯ ರೈಲ್ವೆ ಸಚಿವರ ಸೂಚನೆಯಂತೆ ಕ್ರಮ ವಹಿಸಲು ಕೋರಿದ್ದರು.

  ಕಾಮರ್ಸ್ ಸಚಿವಾಲಯದಿಂದಲೂ ದಿನಾಂಕ: 03.01.2017 ರಲ್ಲಿ ರೈಲ್ವೆ ಸಚಿವಾಲಯಕ್ಕೆ ಈ ಯೋಜನೆ ಬಗ್ಗೆ ಕ್ರಮವಹಿಸಲು ಕೋರಿದ್ದರು. ರೈಟ್ಸ್ ಸಂಸ್ಧೆಯು ದಿನಾಂಕ:09.02.2017  ರಲ್ಲಿ  ಉತ್ತರಿಸಿ ರಾಜ್ಯ ಸರಕಾರ ಒಪ್ಪಿಗೆ ಆದೇಶ ನೀಡಿದರೆ, ಈ ಯೋಜನೆ ಜಂಟಿಯಾಗಿ/ ಪಿಪಿಪಿ ಮಾಡೆಲ್ ಮೇಲೆ ನಿರ್ಮಿಸಲು ಇರುವ ಅವಕಾಶದ ವಿವರವಾದ ಅಧ್ಯಯನ ಮಾಡುವುದಾಗಿ ಬಗ್ಗೆ ತಿಳಿಸಿತ್ತು.

 ಈ ಯೋಜನೆಯ ಸಾಕಾರಕ್ಕೆ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರಕಾರದ ಮೂಲ ಭೂತ ಸೌಕರ್ಯ ಸಚಿವರಾಗಿದ್ದ ಶ್ರಿ ಆರ್.ವಿ ದೇಶಪಾಂಡೆ ಅವರಿಗೂ ದಿನಾಂಕ:30.09.2017 ರಲ್ಲಿ ಮತ್ತೊಮ್ಮೆ ಮನವಿ ಮಾಡಲಾಗಿತ್ತು. ದಿನಾಂಕ:13.07.2017 ರಲ್ಲಿ ಶ್ರೀಯತರು ಈ ಯೋಜನೆ ಬಗ್ಗೆ ಅಗತ್ಯ ಕ್ರಮ ವಹಿಸಲು ಸೂಚಿಸಿದ್ದರು.

 ದಿನಾಂಕ:31.07.2019 ರಲ್ಲಿ ಈ ಹಿಂದಿನ ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಂಗತ ಶ್ರೀ ಸುರೇಶ್ ಅಂಗಡಿಯವರಿಗೂ ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ಬರೆದಿದ್ದರು. ಈ ಯೋಜನೆ ಬಗ್ಗೆ ಪರಿಶೀಲಿಸುವುದಾಗಿ ಅವರು ಸಹ ಪತ್ರ ಬರೆದಿದ್ದರು.

 ಶ್ರೀ ಟಿ.ಆರ್.ರಘೋತ್ತಮರಾವ್‌ರವರು ಬಗ್ಗೆ ಸುಮಾರು ವರ್ಷಗಳಿಂದ ಕನಸು ಕಂಡಿದ್ದ ಪರಿಕಲ್ಪನೆಗೆ ಚಾಲನೆ ದೊರಕಿಂತಾಗಿದೆ. ಹಿನ್ನಲೆಯಲ್ಲಿ ಮುಂದಿನ ದಿಶಾ ಸಮಿತಿಯ ಸಭೆಗೆ ರೈಟ್ಸ್ ಸಂಸ್ಥೆಯವರನ್ನು ಆಹ್ವಾನಿಸಿ ಅನುಪಾಲನಾ ವರದಿ ಪಡೆಯಲು ಶ್ರೀ ಜಿ.ಎಸ್.ಬಸವರಾಜ್‌ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ’