26th July 2024
Share

TUMAKURU:SHAKTHIPEETA FOUNDATION

ತುಮಕೂರು ನಗರ ತ್ರಿವಳಿ ನಗರವಾಗಿ ಬೆಳೆಯುತ್ತಿದೆ. ಹಾಲಿ ಇರುವ ತುಮಕೂರು ನಗರ ಸುಮಾರು 12500  ಎಕರೆ ಪ್ರದೇಶದಲ್ಲಿದ್ದರೆ, ತುಮಕೂರು ಇಂಡಸ್ಟ್ರಿಯಲ್‌ ನೋಡ್‌ ಸುಮಾರು 13500 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಇವೆರಡರ ಮಧ್ಯೆ ಬೆಂಗಳೂರು- ಪುಣೆ ರಸ್ತೆಗೆ ಹೊಂದಿಕೊಂಡಂತೆ ಎರಡು ಕಡೆ ಸುಮಾರು 10000 ಎಕರೆ ನಗರವಾಗಿ ಬೆಳೆಯಲು ಆರಂಭಿಸಿದೆ.

ದೇಶದ 2 ನೇ ಅತಿ ದೊಡ್ಡ ಇಂಡಸ್ಟ್ರಿಯಲ್‌ ನೋಡ್‌ ಅಕ್ಕ-ಪಕ್ಕ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ ವನ್ನು ಆರಂಭಿಸಲು ಚಿಂತನೆ ನಡೆದಿದೆ. ಈ ಬಗ್ಗೆ ದೆಹಲಿಯಲ್ಲಿ ಮಿನಿಸ್ಟ್ರಿ ಆಫ್‌ ಏವಿಯೇಷನ್‌ ಸೆಕ್ರಟರಿ ಶ್ರೀ ಪ್ರದೀಪ್‌ ಸಿಂಗ್‌ ಕರೋಲ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ ರವರು ಸಮಾಲೋಚನೆ ನಡೆಸಿದರು.

ಈ ಬಗ್ಗೆ ಅಧಿಕಾರಿಗಳೊಂದಿಗೆ  ಸಮಾಲೋಚನೆ ನಡಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಕರೋಲರವರು ಭರವಸೆ ನೀಡಿದ್ದಾರೆ. ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್‌ ಮತ್ತು ಶ್ರೀ ರಾಜಶೇಖರ್‌ ರವರು ಇದ್ದರು. .