22nd December 2024
Share

ತುಮಕೂರು ಜಿಲ್ಲೆಗೆ ಕೇಂದ್ರದ ಖೇಲೋ ಇಂಡಿಯಾ ಯೋಜನೆಯ ಅಡಿಯಲ್ಲಿ ಕ್ರೀಡಾ ಗ್ರಾಮವನ್ನು ನೀಡುವುದಾಗಿ, ಆಗಿನ ಯುಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದ ಶ್ರೀ ಸಿ.ಟಿ.ರವಿರವರು ತುಮಕೂರು ಜಿಲ್ಲೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಕಟಿಸಿದ್ದರು.

ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಡಾ.ರಾಕೇಶ್‌ ಕುಮಾರ್‌ ರವರು ಮತ್ತು ತುಮಕೂರು ಉಪವಿಭಾಗಾಧಿಕಾರಿಗಳಾದ ಶ್ರೀ ಅಜಯ್‌ ರವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ ರವರೊಂದಿಗೆ ಸಮಾಲೋಚನೆ ನಡೆಸಿ ಜಿಲ್ಲೆಯಲ್ಲಿ ಕ್ರೀಡಾ ಗ್ರಾಮ ಸ್ಥಾಪನೆ ಮಾಡಲು ಚಚಿಸಿದ್ದು ಇತಿಹಾಸ.

ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಸಂಸದರ ಆದಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದು, ಇಲ್ಲಿ ಸುಮಾರು 40 ಎಕರೆ ಜಮೀನು ಲಭ್ಯವಿರುವುದರಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದ್ದರು. ಗುಬ್ಬಿ ತಹಶೀಲ್ಧಾರ್‌ ರವರಿಗೆ ಪತ್ರ ಬರೆದು ಜಮೀನು ಕಾಯ್ದಿರಿಸಲು ಸೂಚನೆ ನೀಡಿದ್ದರು.

ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಕ್ರೀಡಾ ಸಚಿವಾಲಯದ ಕಾರ್ಯದಶಿ ಶ್ರೀ ರವಿಮಿಟ್ಟಲ್‌ ರವರನ್ನು ಶ್ರೀ ಜಿ.ಎಸ್.ಬಸವರಾಜ್‌ ರವರು ಮತ್ತು ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್‌ ಭೇಟಿಯಾಗಿ ಸಮಾಲೋಚನೆ ನಡಿಸಿದಾಗ ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ.

ಈಗಾಗಲೇ ರಾಜ್ಯದ ಕ್ರೀಡಾ ಸಚಿವಾಲಯದ ಅಪರ ಮುಖ್ಯ ಕಾರ್ಯದಶಿ ಶ್ರೀ ಮತಿ ಶಾಲಿನಿರಜನೀಶ್‌ ರವರು ಈ ಬಗ್ಗೆ ಮಾಹಿತಿ ನೀಡಲು ತಿಳಿಸಿದ್ದಾರೆ. ದಿನಾಂಕ:24.02.2021 ರಂದು ನಡೆಯುವ ಸಂಸದರ ಆದಶ ಗ್ರಾಮ ಯೋಜನೆಯ ಸಭೆಯಲ್ಲಿ ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಪಕ್ಕಾ ಮಾಹಿತಿ ದೊರೆಯಲಿದೆ.