15th September 2024
Share

ಸಂಸದರ ಆದಶ ಗ್ರಾಮ ಯೋಜನೆ, ಕೊರೊನಾ ಮಹಾಮಾರಿಯಿಂದ ಕುಂಠಿತವಾಗಿದೆ ಎಂದರೆ ತಪ್ಪಾಗಲಾರದು. ಕಳೆದ ದಿಶಾ ಸಮಿತಿ ಸಭೆಯಲ್ಲಿ ಸಾಗಿ ಯೋಜನೆಯ ಬಗ್ಗೆ ಸಂಸದರು ಕಿಡಿಕಾರಿದರು. ಅಂದಿನ ಸಭೆಯಲ್ಲಿಯೇ ನೋಡೆಲ್‌ ಅಧಿಕಾರಿಯವರಾದ ಶ್ರೀ ರಮೇಶ್‌ ರವರು ಮತ್ತು ಗ್ರಾಮ ಪಂಚಾಯಿತಿ ಪಿಡಿಓ ರವರು ದೇಶಕ್ಕೆ ಮಾದರಿ ಯೋಜನೆ ರೂಪಿಸುತ್ತೇವೆ ಒಂದು ಅವಕಾಶ ನೀಡಿ ಸಾರ್‌ ಎಂದಾಗ ಮರು ಮಾತನಾಡದೆ ಸಂಸದರು ಮತ್ತು ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.

ಅಂದಿನಿಂದ ಯೋಜನೆಯ ಯಶಸ್ವಿಗೆ ಕೈಗೊಳ್ಳಬಹುದಾದ ಕಾಯಕ್ರಮಗಳ ಬಗ್ಗೆ ಆನೇಕ ಸಭೆಗಳನ್ನು ನಡೆಸಿ ದ್ದಾರೆ. ಕರಡು ವಿಡಿಪಿ ರೂಪಿಸಿದ್ದಾರೆ. (24.02.2021) ರಂದು ಮಾರಶೆಟ್ಟಿಹಳ್ಳಿಯಲ್ಲಿ ನಡೆಯುವ ಸಭೆಗೆ ಬನ್ನಿ , ತಮ್ಮ ಅಮೂಲ್ಯವಾದ ಸಲಹೆ ನೀಡಿ.

ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜನರು ಭಾಗಿಯಾಗಿ ಅತ್ಯುತ್ತಮವಾದ ವಿಲೇಜ್‌ ಡೆವಲಪ್‌ ಮೆಂಟ್‌ ಪ್ಲಾನ್‌ ಅಂತಿಮಗೊಳಿಸೋಣ.

ಇತ್ತೀಚೆಗೆ ಚುನಾವಣೆ ನಡೆದಿದೆ, ಗೆದ್ದವರು ಮತ್ತು ಸೋತವರು ಎಂಬ ಬೇಧ ಭಾವ ಬೇಡ, ಸಾಗಿ ಯೋಜನೆಯಲ್ಲಿ ಎಲ್ಲರೂ ಭಾಗಿಯಾಗಲು ಮನವಿ.

2014 ರಲ್ಲಿ ಮಾನ್ಯ ಪ್ರಧಾನಿ ಯವರಾದ ಶ್ರೀ ನರೇಂದ್ರ ಮೋದಿಯವರು ಹೌಸಿಂಗ್‌ ಫಾರ್‌ ಆಲ್‌-2022 ಜಾರಿಗೊಳಿಸಿದ್ದರೂ, ಇದೂವರೆಗೂ ನಿವೇಶನ/ವಸತಿ ಇಲ್ಲದವರನ್ನು ಗುರುತಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ..

ಈ ಸಭೆಯ ವಿಶೇಷತೆ ನಿವೇಶನ/ವಸತಿ ಇಲ್ಲದವರನ್ನು ಕರೆದು ವೇದಿಕೆಯ ಮೇಲೆ ಕೂರಿಸಿ, ಅವರಿಗೆ ನಿವೇಶನ ವಸತಿ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲು ಸಂಸದರು ಚಿಂತನೆ ನಡೆಸಿದ್ದಾರೆ. ಅವರ ಅನಿಸಿಕೆಯಂತೆ ಫಲಾನುಭವಿಗಳನ್ನು ಗುರುತಿಸಿ ಸಭೆಗೆ ಆಹ್ವಾನಿಸಲು ಪಿಡಿಓ ರವರಿಗೆ ಸೂಚಿಸಲಾಗಿದೆ.

ನನ್ನ ಹುಟ್ಟೂರಿನ ಶ್ರೀ ಬೋಚಪ್ಪನವರ ನಂಜುಂಡಯ್ಯನವರು ಮತ್ತು ಶ್ರೀ ಮಹಾಲಿಂಗಪ್ಪನವರು ನೀವೇಶನ ಇಲ್ಲದ ನತ ದೃಷ್ಠರಾಗಿದ್ದಾರೆ , ಇದ್ದ ನಿವೇಶನವನ್ನು ಗಂಗಮಲ್ಲಮ್ಮ ದೇವಾಲಯಕ್ಕೆ ದಾನ ನೀಡಿದ್ದಾರೆ ಈ ಪುಣ್ಯಾತ್ಮರು . ಹೀಗೆ ಪ್ರತಿಯೊಂದು ಹಳ್ಳಿಯಲ್ಲಿರುವವರನ್ನು ಪಿಡಿಓ ಹುಡುಕಿದ್ದಾರಂತೆ.