22nd December 2024
Share


TUMAKURU:SHAKTHUIPEETA FOUNDATION

ಸಂಸದರ ಮಾದರಿ ಗ್ರಾಮ ಯೋಜನೆ ವಿಡಿಪಿ ಪ್ಲಾನ್‌ ಮಾಡುವ ಮುನ್ನ ಪ್ರತಿಯೊಂದು ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ಯಾರಿಗೆ ಯಾವ ಸಮಸ್ಯೆ ಇದೆ, ಯಾವ ಯೋಜನೆ ಅಗತ್ಯವಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಎಂದು ತುಮಕೂರು ಜಿಲ್ಲಾ ಪಂಚಾಯತ್‌ ಸಿಇಓ ಶ್ರೀ ಗಂಗಾಧರ್‌ ಸ್ವಾಮಿರವರು ಅಧಿಕಾರಿಗಳಿಗೆ ಸೂಚಿಸಿದರು.

ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ ರವರು ಈ ಗ್ರಾಮ ಪಂಚಾಯಿತಿಯನ್ನು ಮಾದರಿ ಮಾಡಲು ಆಯ್ಕೆ ಮಾಡಿದ್ದಾರೆ. ಈ ಪಂಚಾಯಿತಿಯ ಚಿತ್ರಣ ಬದಲಾಯಿಸುವ ಯೋಜನೆ ರೂಪಿಸುವುದು ಪತ್ರಿಯೊಂದು ಇಲಾಖೆಯ ಆಧ್ಯತೆಯಾಗ ಬೇಕೆಂದರು.
ಈ ಯೋಜನೆ ಮಾಹಿತಿ ಎಲ್ಲಾ ಗ್ರಾಮಗಳ ಜನತೆಗೂ ತಿಳಿಯಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಯ ಅರಿವು ಜನತೆಗೆ ಗೊತ್ತಿರಬೇಕು. ಅದ್ದರಿಂದ ಮೊದಲು ಪ್ರತಿಯೊಂದು ಇಲಾಖೆಯ ಯೋಜನೆಗಳ ಅರಿವು ಮೂಡಿಸಿ.
ಕರಡು ವಿಡಿಪಿ ಪ್ಲಾನ್‌ ಸಿದ್ಧಪಡಿಸಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೂ ನೀಡಿ, ಆಸಕ್ತ ಆಯಾ ಗ್ರಾಮದ ಜನತೆಯೊಂದಿಗೆ ಸಮಾಲೋಚನೆ ಮಾಡಿ ಅಂತಿಮ ಗೊಳಿಸಲಿ. ಈ ಯೋಜನೆ ಜನತೆಯ ಯೋಜನೆಯಾಗಲೇ ಬೇಕೆಂದರು.
ವಿಶೇಷವಾಗಿ ಜಮೀನಿನ ಸಮಸ್ಯೆ ಬಗೆ ಹರಿಸಿದರೆ ಎಲ್ಲಾ ಸಮಸ್ಯೆ ಬಗೆ ಹರಿದಂತೆ. 18 ಗ್ರಾಮಗಳ ಜನರು ಸಹ ತಮಗೆ ಇರುವ ಜಮೀನಿನ ಮತ್ತು ನಿವೇಶನ/ಮನೆಗಳ ದಾಖಲೆಗಳ ತೊಂದರೆಗಳಿದ್ದಲ್ಲಿ ಲಿಖಿತವಾಗಿ ಮನವಿ ನೀಡಲು ಕರೆ ನೀಡಿದರು.
ಜಮೀನಿನ ಅದಲು ಬದಲು ವಿವಾದಗಳು, ದಾಖಲೆಗಳ ದೋಷ, ರೈತರ ಜಮೀನಿಗೆ ದಾರಿ ಸಮಸ್ಯೆ, ಕರಾಬು ಹಳ್ಳಗಳ ಅಭಿವೃದ್ಧಿ ಮತ್ತು ಒತ್ತುವರಿ ತೆರವು, ಪ್ರತಿಯೊಂದು ಗ್ರಾಮದ ಭೂಬಳಕೆ ಮಾಹಿತಿ, ಸರಕಾರಿ ಜಮೀನುಗಳ ಸಂರಕ್ಷಣೆ ಮತ್ತು ಒತ್ತುವರಿಗೆ ಆಧ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಗ್ರಾಮಪಂಚಾಯಿತಿಯಲ್ಲಿ ಜಮೀನುಗಳ ಯಾವುದೇ ಸಮಸ್ಯೆ ಇಲ್ಲ ಎಂದಾದರೆ ಅದಕ್ಕಿಂತ ಮಾದರಿ ಯೋಜನೆ ಇನ್ನೇನು ಬೇಕು? ರೈತರಿಗೆ ತಮಗೆ ಇರುವ ಜಮೀನು, ನಿವೇಶನ ಮತ್ತು ಮನೆಯ ಮೇಲೆ ಮಮಕಾರ ಜಾಸ್ತಿ, ಇದರಲ್ಲಿ ದೋಷ ಇದ್ದಲ್ಲಿ, ಆ ಕುಟುಂಬದ ಜೀವನ ನರಕವಲ್ಲವೇ ಎಂಬ ಮಾತು ಜನರ ಮನದಾಳದಲ್ಲಿ ಹೊಸ ಹುರುಪು ಮೂಡಿಸಿತು. ಅಧಿಕಾರಿಗಳಿಗೂ ಎಚ್ಚರಿಕೆ ಘಂಟೆಯಂತಿತ್ತು.
ಗುಬ್ಬಿ ತಹಶೀಲ್ಧಾರ್‌ ಶ್ರೀ ಪ್ರದೀಪ್‌ ಹೀರೇಮಠ್‌ ರವರು ಪ್ರತಿಕ್ರೀಯೇ ನೀಡಿ ನಿಜಕ್ಕೂ ಇದೊಂದು ಒಳ್ಳೆಯ ಸಲಹೆ, ನಮ್ಮ ಇಲಾಖೆ ಸಿಇಓ ರವರು ಸಲಹೆ ನೀಡಿದಂತೆ ರೈತರ ಜಮೀನಿನ ಸಮಸ್ಯೆ ಬಗೆ ಹರಿಸಿ, ಈ ಪಂಚಾಯಿತಿಯಲ್ಲಿ ಯಾವುದೇ ಜಮೀನಿನ ದಾಖಲೆಗಳ ಸಮಸ್ಯೆ ಇಲ್ಲದ ಗ್ರಾಮ ಪಂಚಾಯಿತಿ ಎಂಬ ದಾಖಲೆ ಮಾಡುತ್ತೇವೆ ಎಂದರು.

ಕಡಬ ರೆವಿನ್ಯೂ ಇನಸ್ಪೆಕ್ಟರ್‌ ಶ್ರೀ ನಾಗಭೂಷಣ್‌ ಮತ್ತು ಗ್ರಾಮಲೆಕ್ಕಿಗರನ್ನು ಕರೆದು ಸಿಇಓ ರವರು ಮಾತನಾಡಿ, ಈ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಲ್ಲಾ ರೆವಿನ್ಯೂ ಅಧಿಕಾರಿಗಳು ಮತ್ತು ನೌಕರರು ಈ ಬಗ್ಗೆ ವಿಶೇಷ ಗಮನ ಹರಿಸಲು ಸೂಚನೆ ನೀಡಿದ್ದು ವೇದಿಕೆಯ ಮೇಲಿದ್ದ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು.
ವಿವಿಧ ಇಲಾಖೆಯ ಅಧಿಕಾರಿಗಳು ಅವರವರ ಇಲಾಖೆ ಕೈಗೊಳ್ಳುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.