22nd December 2024
Share

Tumakuru:Shakthipeeta founadation

ಸಂಸದರ ಮಾದರಿ ಗ್ರಾಮ ಯೋಜನೆ ಅನುಷ್ಠಾನ ಮಾಡಲು ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಇನ್ನೋವೇಟೀವ್‌ಐಡಿಯಾ ನೀಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ ರವರು ವಿವಿಧ ಇಲಾಖಾ ಅಧಿಕಾರಿಗಳಿಗೆ ಕರೆ ನೀಡಿದರು.
ಅವರು ದಿನಾಂಕ:24.02.2021 ರಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿಯಲ್ಲಿ ಸಾಗಿ ಯೋಜನೆಯ ವಿಲೆಜ್‌ ಡೆವಲಪ್‌ ಮೆಂಟ್‌ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವ ಇಲಾಖೆಯಿಂದ ಯಾವ ಗ್ರಾಮದಲ್ಲಿ ಏನು ಯೋಜನೆ ಮಾಡುತ್ತೀರಿ ಎಂಬ ಬಗ್ಗೆ ಆಯಾ ಗ್ರಾಮದ ಜನರೊಂದಿಗೂ ಸಮಾಲೋಚನೆ ಮಾಡಿ.

18 ಗ್ರಾಮಗಳ ಜನತೆಯೂ ಸೌಲಭ್ಯ ಪಡೆಯುವಂತಾಗ ಬೇಕು. ಇದು ಜನತೆಯ ಯೋಜನೆಯಾಗಬೇಕು. ಮಾನ್ಯ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಕನಸನ್ನು ನನಸು ಮಾಡಲು ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮತದಾರ ಪ್ರಭುಗಳು ಒಗ್ಗಟ್ಟಿನಿಂದ ಶ್ರಮಿಸುವ ಅಗತ್ಯವಿದೆ.
ಜನರು ಸಹ ತಮಗೆ ಅಥವಾ ತಮ್ಮ ಊರಿಗೆ ಯಾವ ಯೋಜನೆ ಅಗತ್ಯವಿದೆ ಎಂಬ ಬಗ್ಗೆ ಲಿಖಿತ ಮನವಿ ನೀಡಿ, ಮನವಿಯಲ್ಲಿನ ಪ್ರತಿಯೊಂದು ಅಂಶಗಳನ್ನು ಗಣನೆಗೆ ತೆಗೆದು ಕೊಳ್ಳಲಾಗುವುದು. ಅದಕ್ಕೋಸ್ಕರವೇ ಇಂದು ಈ ಸಭೆಯನ್ನು ಆಯೋಜಿಸಿರುವುದು.
ಯಾವ ಗ್ರಾಮದಲ್ಲಿ ಏನೇನು ಯೋಜನೆ ಕೈಗೊಳ್ಳಲಾಗುವುದು ಎಂಬ ಬಗ್ಗೆ ಜನರಿಗೆ ತಿಳಿಯುವಂತೆ ಮಾಡಲು ಸೋಶಿಯಲ್‌ ಮೀಡಿಯಾ ಮತ್ತು ಗ್ರಾಮಗಳ ಗೋಡೆಗಳಲ್ಲಿ ಬರೆಯಲು ಪಿಡಿಓ ರವರಿಗೆ ಸೂಚಿಸಿದರು. ವಿಡಿಪಿ ಪ್ಲಾನ್‌ ಅನ್ನು ಒಂದು ವಾರದೊಳಗೆ ಅಫ್‌ ಲೋಡ್‌ ಮಾಡಲು ಎಲ್ಲಾ ಇಲಾಖೆಯ ಅಧಿಕಾರಿಗಳೂ ಸಹಕರಿಸಲು ಖಡಕ್‌ ಸೂಚನೆ ನೀಡಿದರು.