12th October 2024
Share

TUMAKURU:SHAKTHIPEETA FOUNDATION


ಕೇಂದ್ರ ಸರಕಾರದ ಜಲಜೀವನ್‌ ಮಿಷನ್‌ ಯೋಜನೆಯಡಿ, ತುಮಕೂರು ಜಿಲ್ಲೆಯ ಮನೆ ಮನೆಗೂ ಕುಡಿಯುವ ನೀರನ್ನು ನೀಡಲು ಪಾನಿ ಸಮಿತಿಗಳನ್ನು ರಚಿಸಲು, ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು ಮತ್ತು ಚೀಫ್‌ ಆಫೀಸರ್‌ ಆಯಾ ಸ್ಥಳೀಯ ಸಂಸ್ಥೆಗಳ ನಕ್ಷೆಯೊಂದಿಗೆ ಮುಂದಿನ ದಿಶಾ ಸಭೆಗೆ ಹಾಜರಾಗಲು ಸೂಚಿಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ ರವರು ತುಮಕೂರು ಜಿಲ್ಲಾ ಪಂಚಾಯಿತಿ ಸಿಇಓ ರವರಾದ ಶ್ರೀ ಗಂಗಾಧರ್‌ ಸ್ವಾಮಿರವರಿಗೆ ಸೂಚಿಸಿದ್ದಾರೆ.


ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ʼಊರಿಗೊಂದು ಕೆರೆ- ಆ ಕೆರೆಗೆ ನದಿ ನೀರುʼ ಯೋಜನೆ ಡಿಪಿಆರ್‌ ಮಾಡಲು ಆದೇಶ ನೀಡಿದ್ದಾರೆ. 2023 ರೊಳಗೆ ಜಿಲ್ಲೆಯ ಪ್ರತಿ ಮನೆಗೂ ಕುಡಿಯುವ ನೀರಿನ ನಲ್ಲಿ ಹಾಕಲು ಆದೇಶ ನೀಡಿದ್ದಾರೆ.
ಗ್ರಾಮೀಣ ಮತ್ತು ನಗರ ಜಲಜೀವನ್‌ ಮಿಷನ್‌ ಯೋಜನೆ ಜಾರಿಗೆ ಬಂದಿದೆ. ದೇಶದ 10 ನಗರಗಳ ಕುಡಿಯುವ ನೀರಿನ ಆಧ್ಯಯನ ಮಾಡಲು ಪೈಲಟ್‌ ಆಗಿ ಆಯ್ಕೆ ಮಾಡಿದ್ದಾರೆ, ಅದರಲ್ಲಿ ತುಮಕೂರು ಇದೆ.


ಯಾವ ಗ್ರಾಮಕ್ಕೆ ಯಾವ ಕೆರೆಯಿಂದ ಕುಡಿಯುವ ನೀರು ನೀಡಬಹುದು. ಆ ಕೆರೆಗೆ ಯಾವ ನದಿ ನೀರನ್ನು ತುಂಬಿಸ ಬಹುದು ಎಂಬ ಮಾಹಿತಿಯುಳ್ಳ ಜಿಐಎಸ್‌ ಆಧಾರಿತ ನಕ್ಷೆ ಪ್ರತಿ ಗ್ರಾಮದ ಮನೆ ಮನೆಗಳಲ್ಲಿ ಇರಬೇಕು. ಆ ಗ್ರಾಮದಲ್ಲಿರುವ ಕೆರೆ-ಕಟ್ಟೆಗಳ, ಪಿಕ್‌ಅಫ್‌ಗಳ ಮಾಹಿತಿಯೂ ಸೇರಿದಂತೆ ಪ್ರತಿಯೊಂದು ಜಲಸಂಗ್ರಹಾಗಾರಗಳ ಮಾಹಿತಿ ಇರಬೇಕು, ಯಾವ ಗ್ರಾಮದಲ್ಲಿ ಕೆರೆ-ಕಟ್ಟೆಗಳಿಲ್ಲವೋ ಅಂತಹ ಕಡೆ ಹೊಸದಾಗಿ ಜಲಸಂಗ್ರಹಾಗಾರ ಮಾಡುವ ಸ್ಥಳ ಆಯ್ಕೆ ಮಾಡಬೇಕು.


ಇದೊಂದು ಜನಾಂದೋಲನವಾಗಬೇಕು. ಈ ಹಿನ್ನಲೆಯಲ್ಲಿ, ಈ ಸಾಲಿನ ನಾಲ್ಕನೇ ದಿಶಾ ಸಮಿತಿ ಸಭೆ ವಿಶೇಷವಾಗಿ ನಡೆಯಬೇಕಾಗಿದೆ. ಆದ್ದರಿಂದ 330 ಗ್ರಾಮ ಪಂಚಾಯಿತಿಗಳ ಪಿಡಿಓ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು ಮತ್ತು ಚೀಫ್‌ ಆಫೀಸರ್‌ ಹಾಗೂ ಕುಡಿಯುವ ನೀರು ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿ, ಮುಂದಿನ ತಿಂಗಳ ಕೊನೆ ವಾರದಲ್ಲಿ ದಿಶಾ ಸಮಿತಿ ಸಭೆ ನಿಗದಿಗೊಳಿಸಲು ಸಲಹೆ ನೀಡಿದ್ದಾರೆ.


ಸಂಸದರು ಮತ್ತು ಸಿಇಓ ರವರು ಮಾರಶೆಟ್ಟಿಹಳ್ಳಿಯಲ್ಲಿ ನಡೆದ ಸಂಸದರ ಆದಶ ಗ್ರಾಮ ಯೋಜನೆಯ ಸಭೆಯಲ್ಲಿ ಭಾಗವಹಿಸಿದ್ದಾಗ ಸಮಾಲೋಚನೆ ನಡೆಸಿದ್ದಾರೆ. ಸಿಇಓ ರವರು ಮುಂದಿನ 2023 ರೊಳಗೆ ಜಲಜೀವನ್‌ ಮಿಷನ್‌ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಮರೋಪಾದಿಯಲ್ಲಿ ಶ್ರಮಿಸುವುದಾಗಿ ತಿಳಿಸಿದ್ದಾರೆ ಎಂದು ಬಸವರಾಜ್‌ ರವರು ತಿಳಿಸಿದರು.


ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಜಲಶಕ್ತಿ ಜನಾಂದೋಲನ ಮಾಡಲು ಕರೆ ನೀಡಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್‌ ಶೇಖಾವತ್‌ ರವರ ಅಧ್ಯಕ್ಷತೆಯ ಸಮಿತಿಯಲ್ಲಿ ಶ್ರೀ ಜಿ.ಎಸ್.ಬಸವರಾಜ್‌ ರವರು ಸದಸ್ಯರಾಗಿದ್ದಾರೆ. ದೇಶದಲ್ಲಿಯೇ ಮಾದರಿ ಯೋಜನೆ ರೂಪಿಸುವುದು ಅವರ ಕನಸು ಆಗಿದೆ.

ಸಣ್ಣ ನೀರಾವರಿ ಸಚಿವರಾಗಿ ಜಿಲ್ಲೆಯ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಇದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್‌ ಈಶ್ವರಪ್ಪನವರು ಮನೆ ಮನಗೆ ಗಂಗೆ ಯೋಜನೆ ರೂಪಿಸಿದ್ದಾರೆ. ಈ ಯೋಜನೆಗೆ ಹಣದ ಕೊರತೆಯಿಲ್ಲ ಅದ್ದರಿಂದ ತುಮಕೂರು ಜಿಲ್ಲೆಯಲ್ಲಿ ಜಲಕ್ರಾಂತಿಯಾಗಲೇ ಬೇಕಲ್ಲವೇ?