22nd December 2024
Share

TUMAKURU:SHAKTHIPEETA FOUNDATION

ಕ್ರಮಾಂಕ: ಶಕ್ತಿಪೀಠ/ನದಿಜೋಡಣೆ/1/2021                   ದಿನಾಂಕ:27.02.2021

ಕರ್ನಾಟಕ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು, ಎಲ್ಲಾ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರುಗಳಲ್ಲಿ ಹೃದಯ ಪೂರ್ವಕ ಮನವಿ.

ಮಾನ್ಯರೇ

ವಿಷಯ: ರಾಜ್ಯದ ನದಿ ಜೋಡಣೆ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಬಳಿ ನಿಯೋಗ ಹೋಗುವ ಬಗ್ಗೆ.

  ನಮ್ಮ ಸಂಸ್ಥೆಯು ಕರ್ನಾಟಕ ರಾಜ್ಯದ ನದಿಜೋಡಣೆ ಮೂಲಕ ಊರಿಗೊಂದು ಕೆರೆ- ಕೆರೆಗೆ ನದಿ ನೀರು’, ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಗೂ ನಲ್ಲಿ ನೀರು ಸಂಪರ್ಕ ನೀಡುವ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಯನ್ನು 2023 ರೊಳಗೆ ಪೂರ್ಣಗೊಳಿಸಲು ರಾಜ್ಯದ ಚುನಾಯಿತ ಜನಪ್ರತಿನಿಧಿಗಳ ಜಾಗೃತಿಗಾಗಿ ಶ್ರಮಿಸುತ್ತಿದೆ.

  ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್‌ರವರು, ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಈ ವಿಚಾರಗಳ ಬಗ್ಗೆ ನಿರ್ಣಯ ಮಾಡಿಸಿ, ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಮೂಲಕ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆಸುವ ಮೂಲಕ ಚಾಲನೆ ನೀಡಿದ್ದಾರೆ.

  ಹಾಗೇಯೇ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೂ ಪತ್ರ ಬರೆದು ಕರ್ನಾಟಕದ ರಾಜ್ಯದ ನದಿ ಜೋಡಣೆ  ಡಿಪಿಆರ್ ಮಾಡಲು ಮನವಿ ಮಾಡಿದ್ದರಿಂದ ಡಿಪಿಆರ್ ಮಾಡಲು ಸಹ ಮಾನ್ಯ ಮುಖ್ಯ ಮಂತ್ರಿಯವರು ಆದೇಶ ನೀಡಿದ್ದಾರೆ.

  ಶ್ರೀ ಜಿ.ಎಸ್.ಬಸವರಾಜ್‌ರವರು ಮಾನ್ಯ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ಬರೆದ ಪತ್ರದ ಹಿನ್ನಲೆಯಲ್ಲಿ ಈ ಯೋಜನೆಗಳ ಮತ್ತು ವಾಟರ್ ಯೂನಿವರ್ಸಿಟಿ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

  ಎನ್.ಪಿ.ಪಿ ಯೋಜನೆಯಾಗಿ ಕೈಗೊಳ್ಳಲು ಈಗಾಗಲೇ ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಭಧ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ ಮತ್ತು ಬೇಡ್ತಿ-ವರದಾ ಲಿಂಕ್ ಯೋಜನೆಗಳ ಬಗ್ಗೆಯೂ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಹಾವೇರಿ ಲೋಕಸಭಾ ಸದಸ್ಯರಾಗಿರುವ ಶ್ರೀ ಶಿವಕುಮಾರ್ ಉದಾಸಿರವರು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ಪತ್ರ ಬರೆದಿದ್ದಾರೆ ಮತ್ತು ಖುದ್ದಾಗಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

  ರಾಜ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಈ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.

  ರಾಜ್ಯ ಸರ್ಕಾರ ಸುಮಾರು ಒಂದು ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ರಾಜ್ಯದ ನದಿ ಜೋಡಣೆ ಮಾಡುವುದಾಗಿ ರಾಜ್ಯ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು  ನೀತಿ ಆಯೋಗದ ವೆಬ್ ಪೋರ್ಟಲ್‌ನಲ್ಲಿ ಈಗಾಗಲೇ ನೋಂದಾಯಿಸಿದ್ದಾರೆ.

  ಈ ಎಲ್ಲಾ ನಡವಳಿಕೆಗಳಿಗೆ ಪೂರಕವಾಗಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸರ್ಕಾರದ ಸಚಿವರು, ಲೋಕಸಭಾ ಸದಸ್ಯರು ಹಾಗೂ ರಾಜ್ಯ ಸಭಾ ಸದಸ್ಯರು ಮಾನ್ಯ ಪ್ರಧಾನಿರವರ ಬಳಿ, ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಪಕ್ಷಾತೀತವಾಗಿ ನೀಯೋಗ ಹೋಗುವ ಮೂಲಕ ಶೀಘ್ರ ಚಾಲನೆಗೆ ಆಗ್ರಹಿಸಲು ತಮ್ಮಲ್ಲಿ ಈ ಮೂಲಕ ಮನವಿ ಮಾಡಲಾಗಿದೆ.

  ಪ್ರತಿಯೊಂದುಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದು ಅಗತ್ಯವಾಗಿದೆ.

  ಅದ್ದರಿಂದ ರಾಜ್ಯದ 28 ಜನ ಲೋಕಸಭಾ ಸದಸ್ಯರು ಹಾಗೂ 12 ಜನ ರಾಜ್ಯ ಸಭಾ ಸದಸ್ಯರು ಸೇರಿ ಒಗ್ಗಟ್ಟಾಗಿ ಶ್ರಮಿಸಲು ಈ ಮೂಲಕ ಕೋರಿದೆ.

ವಂದನೆಗಳೊಂದಿಗೆ                                  ತಮ್ಮ ವಿಶ್ವಾಸಿ

(ಕುಂದರನಹಳ್ಳಿ ರಮೇಶ್)

ಛೇರ್‍ಮನ್ ಕಂ ಮ್ಯಾನೇಜಿಂಗ್ ಟ್ರಸ್ಟಿ

ಹಾಗೂ

ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.

ಗೆ.

ಸನ್ಮಾನ್ಯ ಶ್ರೀ

ಸೂಕ್ತ ಕ್ರಮಕ್ಕಾಗಿ ಮಾನ್ಯ ದೆಹಲಿ ಪ್ರತಿನಿಧಿಯವರಿಗೂ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿ ಕಾರ್ಯದರ್ಶಿರವರಿಗೂ ರವಾನಿಸಿದೆ.