TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡುವ ಕೇಂದ್ರದ ಅನುದಾನಗಳ ಸಮರ್ಪಕ ಬಳಕೆಗೆ. ದುರ್ಬಳಕೆ ತಡೆಯಲು ಮತ್ತು ಹೊಸ ಯೋಜನೆಗಳ ಜಾರಿಗೆ ಶ್ರಮಿಸಲು ರಾಜ್ಯ ಮಟ್ಟದಲ್ಲಿ ಆಯಾ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿಗಳನ್ನು ರಚಿಸಿದೆ.
ಯಾವುದೇ ಮಲತಾಯಿ ಧೋರಣೆ ಬರಬಾರದು ಎಂಬ ದೃಷ್ಠಿಯಿಂದ ಪ್ರತಿಯೊಂದು ರಾಜಕೀಯ ಪಕ್ಷಗಳ ಮತ್ತು ಸ್ವತಂತ್ರವಾಗಿ ಆಯ್ಕೆಯಾಗಿರುವ ಸಂಸದರು ಮತ್ತು ರಾಜ್ಯ ಸಭಾ ಸದಸ್ಯರುಗಳನ್ನು ನೇಮಕ ಮಾಡಿದೆ.
ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 37 ರಾಜ್ಯ ಮಟ್ಟದ ದಿಶಾ ಸಮಿತಿಗಳಿಗೂ ಸದಸ್ಯರನ್ನು ನೇಮಕ ಮಾಡಿ ದಿನಾಂಕ:17.02.2021 ರಂದು ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾಗಿ ಬಿಜೆಪಿ ಸಂಸದರುಗಳಾದ ಶ್ರೀ ಅನಂತಕುಮಾರ್ ಹೆಗ್ಗಡೆಯವರು, ಶ್ರೀ ರಮೇಶ್ ಚಂದ್ರಪ್ಪ ಜಿಗಜಿಣಗಿಯವರು, ಶ್ರೀ ಜಿ.ಎಸ್.ಬಸವರಾಜ್ ರವರು, ಕಾಂಗ್ರೆಸ್ ನ ಶ್ರೀ ಡಿ.ಕೆ.ಸುರೇಶ್‌ರವರು, ಸಂತಂತ್ರ ಸಂಸದರಾದ ಶ್ರೀಮತಿ ಸುಮಲಥ ಅಂಬರೀಶ್ ರವರು, ಜಾತ್ಯಾತೀತ ಜನತಾದಳದ ಶ್ರೀ ಪ್ರಜ್ವಲ್ ರೇವಣ್ಣನವರು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಸಭಾ ಸದಸ್ಯರಾದ ಶ್ರೀ ಆಸ್ಕರ್ ಫರ್ನಾಂಡೀಸ್ ರವರು ಮತ್ತು ಬಿಜೆಪಿಯ ರಾಜ್ಯ ಸಭಾ ಸದಸ್ಯರಾದ ಶ್ರೀ ರಾಜೀವ್ ಚಂದ್ರಶೇಖರ್ ರವರನ್ನು ನೇಮಕ ಮಾಡಿದೆ.