22nd December 2024
Share

TUMAKURU:SHAKTHIPEETA FOUNDATION

ಶೀಘ್ರದಲ್ಲಿ ದೆಹಲಿಯಲ್ಲಿ ಶಕ್ತಿಪೀಠ ಫೌಂಡೇಷನ್ ಕಚೇರಿಯನ್ನು ಆರಂಭಿಸಲಾಗುವುದು. ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಹಾಗೂ ಕೇಂದ್ರದ ವಿವಿದ ಯೋಜನೆಗಳ ಮgಜೂರಾತಿಗಾಗಿ ಸೂಕ್ತ ಪ್ರಸ್ತಾವನೆ ಸಲ್ಲಿಸಲು ರಾಜ್ಯದ ಮಟ್ಟದ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಅಭಿವೃದ್ಧಿ ಜಾಗೃತಿ ಮೂಡಿಸುವ ಕೆಲಸಕ್ಕೆ ಚಾಲನೆ ನಡೆಸಲಾಗುವುದು.

ದೆಹಲಿ ವಿಶೇಷ ಪ್ರತಿನಿಧಿ ಮತ್ತು ರೆಸಿಡೆಂಟ್ ಕಮೀಷನರ್ ತಂಡದ ಕಾರ್ಯ ವೈಖರಿಯ ಬಗ್ಗೆಯೂ ಅವಲೋಕನ ಮಾಡುವ ಮೂಲಕ ಅಭಿವೃದ್ಧಿ ಜಾಗೃತಿ ಮೂಡಿಸಲಾಗುವುದು.

ಶಕ್ತಿಪೀಠ ಫೌಂಡೇಷನ್ ನ ಕನಸಿನ ಯೋಜನೆಯಾದ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಮತ್ತು ರಾಜ್ಯದ ನದಿ ಜೋಡಣೆ ಯೋಜನೆಯ ಬಗ್ಗೆ ರಾಜ್ಯದ 28 ಲೋಕಸಭಾ ಸದಸ್ಯರು ಹಾಗೂ 12 ಜನ ರಾಜ್ಯಸಭಾ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಲು ನಿರಂತರವಾಗಿ ಮನವೊಲಿಸುವ ಚಿಂತನೆಯೂ ಇದೆ.

ವಿಶ್ವ ಮಹಿಳಾ ದಿನಾಚರಣೆಯ ದಿನ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು 2021-22 ನೇ ಸಾಲಿನ ಆಯವ್ಯಯ ಮಂಡಿಸಿದ ದಿನ ದೆಹಲಿಯಲ್ಲಿ ಒಂದು ಸಣ್ಣ ಕಟ್ಟಡವನ್ನು ಬಾಡಿಗೆ ಪಡೆಯಲಾಗಿದೆ.  ಈ ಹಿನ್ನಲೆಯಲ್ಲಿ ಸುಮಾರು 20 ವರ್ಷಗಳಿಂದ ರಾಜ್ಯದ ಆಯವ್ಯಯದ ಬಗ್ಗೆ ಪ್ರತಿಕ್ರಿಯೇ ನೀಡುತ್ತಿದ್ದು, ಈ ಭಾರಿ ಯಾವುದೇ ಒಂದು ಫೋನ್ ಕಾಲ್‌ನ್ನು ಸ್ವೀಕರಿಸಲು ಸಾಧ್ಯಾವಾಗಲಿಲ್ಲ ಕ್ಷಮೆ ಇರಲಿ.

ದಿನಾಂಕ:22.03.2021 ರಂದು ನಡೆಯುವ ವರ್ಡ್ ವಾಟರ್ ಡೇ’ ದಿವಸದೊಳಗೆ ಕಚೇರಿಯನ್ನು ಅಧಿಕೃತವಾಗಿ ಆರಂಬಿಸಲು ಯೋಚಿಸಲಾಗಿದೆ.

ಕಳೆದ 11 ದಿವಸಗಳ ದೆಹಲಿ ಅಭಿವೃದ್ಧಿ ಯಾತ್ರೆಯಲ್ಲಿ ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳ ಬಗ್ಗೆ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ  ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಾಗಿದೆ.