12th September 2024
Share

TUMAKURU:SHAKTHIPEETA FOUNDATION

ದೇಶ ಭಕ್ತಿ ಆಯವ್ಯಯ ಮಂಡಿಸಿದ ದೆಹಲಿ ಸರ್ಕಾರ

ಕೇಂದ್ರದಲ್ಲಿ ಬೆಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇದೆ. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಶ್ರೀ ಕೇಜ್ರಿವಾಲ್‌ರವರು ಮಾನ್ಯ ಮುಖ್ಯ ಮಂತ್ರಿಗಳಾಗಿದ್ದಾರೆ.

ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು 75  ನೇ ಸ್ವಾತಂತ್ರ್ಯದ ದಿನದ ಅಂಗವಾಗಿ  ದೇಶಾದ್ಯಾಂತ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ನನ್ನ ದೃಷ್ಟಿಯಲ್ಲಿ ಇದೊಂದು ದೇಶದಲ್ಲಿಯೇ ಬಡವರ ಸಂಭ್ರಮಾಚಾರಣೆ ಆಗಲಿದೆ.

 ಮೊನ್ನೆ ದೆಹಲಿ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರಾಗಿರುವ ಶ್ರೀ ಸಿಸೋಡಿಯಾ ರವರು 2021-22  ನೇ ಆಯವ್ಯಯ ಮಂಡಿಸುವಾಗ ಕೇಂದ್ರ ಸರ್ಕಾರದ ಆಲೋಚನೆಗೆ ಅನುಗುಣವಾಗಿ ನಮ್ಮ ಸರ್ಕಾರ ದೇಶಭಕ್ತಿ ಆಯವ್ಯಯ ಮಂಡಿಸಿದೆ ಎಂದು ಪ್ರಕಟಿಸಿರುವುದು ನಿಜಕ್ಕೂ ವಿರೋಧಿಗಳೂ ಮೆಚ್ಚವಂತದ್ದು.

ಮೋದಿಯವರು ಸಹ ಒಳಗೊಳಗೆ ಈ ಪ್ರಚಂಡ ಕೇಜ್ರಿವಾಲ್ ನಮ್ಮ ಸರ್ಕಾರದ ಪರಿಕಲ್ಪನೆಗೆ ಬೆಂಬಲಿಸಿದ್ದಾರೆ. ನಮ್ಮ ಬಿಜೆಪಿ ಪಕ್ಷದ ಮುಖ್ಯ ಮಂತ್ರಿಗಳಿರುವ ಸರ್ಕಾರಗಳಿಗೆ ಏಕೆ ಈ ಬುದ್ದಿ ಬರಲಿಲ್ಲ ಎಂದು ಗೊಣಗಿರಬಹುದು.

ಬಡವರಿಗೆ ಅನೂಕೂಲವಾಗುವ ಹಲವಾರು ಯೋಜನೆಗಳಿಗೆ ಕೇಂದ್ರ ಸರ್ಕಾರ 2022 ರ ಕಾಲಮಿತಿ ಗಡುವು ನೀಡಿರುವುದು ನಿಜಕ್ಕೂ ಅದ್ಭುತ. ದೇಶದ ಎಲ್ಲಾ ಸಂಸದರೂ ಈ ಬಗ್ಗೆ ವಿಶೇಷ ಗಮನ ಹರಿಸಲೇ ಬೇಕು. ಇಲ್ಲವಾದಲ್ಲಿ ಜನತೆ ಅವರ ವಿರುದ್ದ ಬೀದಿಗೀಳಿಯ ಬೇಕು.

ಕೇಂದ್ರ ಸರ್ಕಾರ ಸಂಸದರಿಗೆ ನೀಡಿರುವ ದಿಶಾ ಎಂಬ ಪರಮಾಧಿಕಾರ ಬಳಸಿಕೊಂಡು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸ ಬಹುದು ಅಥವಾ ಮೋದಿಯವರು ಘೋಷಣೆ ಮಾಡಿರುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸ ಬಹುದು. ಇವೆರಡು ಮಾಡದು ಸಂಸದರು ಇದ್ದರೇನು? ಬಿಟ್ಟರೇನು?

ದೇಶದ ಯಾವ ಜಿಲ್ಲೆಯ ಸಂಸದರು ಏನು ಮಾಡುತ್ತಾರೋ? ಬಿಡುತ್ತಾರೋ? ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ಸಮಿತಿಯ ಕಳೆದ 6 ದಿಶಾ ಸಮಿತಿ ಸಭೆಗಳಲ್ಲಿ 2022 ರ ಯೋಜನೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ದಿನಾಂಕ:26.03.2022 ರಂದು ನಡೆಯುವ 7 ನೇ ಸಭೆಯಲ್ಲಿ ಈ ಎಲ್ಲಾ ಯೋಜನೆಗಳಿಗೆ ಒಂದು ಅಂತಿಮ ರೂಪು ದೊರೆಯಲಿದೆ ಎಂಬ ಅನಿಸಿಕೆ ನನ್ನದಾಗಿದೆ.

ಒಂದು ವೇಳೆ ಅಧಿಕಾರಿಗಳು ಕೈಬೀಸಿ ಕೊಂಡು ಸಭೆಗೆ ಬಂದಲ್ಲಿ ದಿಶಾ ಪರಮಾಧಿಕಾರ ಬಳಸಿ ಅಂಥಹ ಅಧಿಕಾರಿಗಳ ವಿರುದ್ದ ನಿರ್ಣಯ ಮಾಡುವ ಮೂಲಕ ಬಿಸಿ ಮುಟ್ಟಿಸಲೇ ಬೇಕಿದೆ. ಇದು ದೇಶದ ಪ್ರಧಾನಿಯವರಿಗೆ ನೀಡುವ ಗೌರವದ ಜೊತೆಗೆ, ಬಡವರ ಸೇವೆಗೆ ಸದಸ್ಯರು ಅರ್ಪಣೆ ಮಾಡಿಕೊಂಡಂತೆ ಆಗಲಿದೆ.