22nd December 2024
Share

Delhi :Shakthipeeta foundation

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ ಎಸ್ ಬಸವರಾಜ್ ಅವರ ಮನವಿ ಮೇರೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು ರಾಜ್ಯದ ನದಿ ಜೋಡಣೆ ಡಿಪಿಆರ್ ಮಾಡಲು ಆದೇಶ ನೀಡಿದ್ದಾರೆ.

ನೋಡೆಲ್ ಆಫೀಸರ್ ಆಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಿರುವ ಹಿನ್ನೆಲೆಯಲ್ಲಿ ದಿನಾಂಕ :25.03.2021 ರಂದು ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲಿ ಹುಟ್ಟುವ ಜಯಮಂಗಲಿ ನದಿ ಉಗಮಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಭೆ ನಡೆಸಲು ಚಿಂತನೆ ನಡೆಸಲಾಗಿದೆ.

ಈ ಸಭೆಯಲ್ಲಿ ಜಿ.ಎಸ್. ಬಸವರಾಜ್ ರವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ಮತ್ತು ಮುಖ್ಯಮಂತ್ರಿಗಳ ಆದೇಶದ ಹಿನ್ನೆಲೆಯಲ್ಲಿ ಏನೇನು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ರೋಡ್ ಮ್ಯಾಪ್ ತಯಾರಿಸಲು ಸಿದ್ಧತೆ ನಡೆದಿದೆ.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ ಜಯಪ್ರಕಾಶ್ ರವರೊಂದಿಗೆ ತುಮಕೂರು ಸಂಸದ ಶ್ರೀ ಜಿ ಎಸ್ ಬಸವರಾಜ್ ಸಮಾಲೋಚನೆ ನಡೆಸಿದ್ದಾರೆ.

ವಿಶ್ವ ಜಲ ದಿನಾಚರಣೆ ಯಂದು ಕೈಗೊಂಡ ಮಹತ್ವದ ನಿರ್ಧಾರ ಇದಾಗಿದೆ.ರಾಜ್ಯದ ನದಿ ಜೋಡಣೆ ವಿಷಯ ಬರೀ ಅಧಿಕಾರಿಗಳಿಗೆ ಸೀಮಿತವಾಗದೆ ರೈತರು ಮತ್ತು ಸಾರ್ವಜನಿಕರು ಈ ಆಂದೋಲನದಲ್ಲಿ ಭಾಗಿಯಾಗಲು ಪೂರಕವಾಗಿದೆ.

ಕರ್ನಾಟಕ ರಾಜ್ಯದಲ್ಲಿ ಹುಟ್ಟುವ ಸಣ್ಣ ನದಿಯಿಂದ ದೊಡ್ಡ ನದಿಯವರೆಗೂ ಹುಟ್ಟುವ ಜಾಗದಿಂದ ಆರಂಭಿಸಿ ರಾಜ್ಯದ ಗಡಿ ವರೆಗೆ ಹರಿಯುವ ನದಿ ಪ್ರದೇಶದಲ್ಲಿ ರೈತರು ಮತ್ತು ಸಾರ್ವಜನಿಕರು ಪಾದಯಾತ್ರೆ ಮಾಡುವ ಮೂಲಕ ಜಲ ಜಾಗೃತಿ ಮೂಡಿಸುವುದು ಮತ್ತು ಪ್ರತಿಯೊಂದು ನದಿಗೆ ಯಾವ ಯೋಜನೆ ರೂಪಿಸಬಹುದು ಎಂಬ ಮಾಹಿತಿ ಸಂಗ್ರಹ ಅಗತ್ಯವಾಗಿದೆ.