TUMAKURU:SHAKTHIPEETA FOUNDATION
ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಈ ವರ್ಷದ 4 ನೇ ಸಭೆ ಹಾಗೂ ಶ್ರೀ ಜಿ.ಎಸ್.ಬಸವರಾಜ್ ರವರ ಅವಧಿಯ 7 ನೇ ಸಭೆ, ನಾಳೆ(26.03.2021) ನಡೆಯಲಿದೆ. ಕಳೆದ ತಿಂಗಳು ಎರಡು ವಿಷಯಾಧರಿತ ಸಭೆಗಳನ್ನು ಅಂದರೆ ಡಾಟಾ ಜಿಲ್ಲೆ 2022ಮತ್ತು ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ನಗರ ಜಲಶಕ್ತಿಗೆ ಸಂಬಂಧಿಸಿದ ಸಭೆಗಳನ್ನು ನಡೆಸಲಾಗಿದೆ.
ಕೇಂದ್ರ ಸರ್ಕಾರದ ದಿಶಾ ಮಾರ್ಗಸೂಚಿಯ ಪ್ರಕಾರ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಂಡ 30 ದಿನಗಳೊಳಗೆ ಅಗತ್ಯ ಕ್ರಮಕೈಗೊಳ್ಳ ಬೇಕೆಂದು ಸ್ಪಷ್ಟವಾಗಿ ಹೇಳಿದೆ. ತಾವು ತುಮಕೂರು ಜಿಲ್ಲಾಪಂಚಾಯತ್ ಸಿಇಓ ಆಗಿ ಹೊಸದಾಗಿ ಬಂದಿದ್ದೀರಿ. ಅದ್ದರಿಂದ 6 ಸಭೆಗಳ ಮತ್ತು ಎರಡು ವಿಷಯಾಧರಿತ ಸಭೆಗಳ ನಡವಳಿಕೆಗಳನ್ನು ಗಮನಿಸುವುದು ಸೂಕ್ತವಾಗಿದೆ.
ದೇಶದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು 2022 ರ ಕಾಲಮಿತಿ ಗಡುವು ನೀಡಿ, 2019.2022 ಮತ್ತು 2024 ರ ಕಾಲಮಿತಿಯಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿ ಪೂರ್ಣಗೊಳಿಸಲು ಕೇಂದ್ರದ ಪಾಲಿನ ಅಗತ್ಯ ಅನುದಾನ ನೀಡುತ್ತೇನೆ ಎಂದು ಘೋಶಿಸಿದ್ದಾರೆ.
ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ಸಂಸದರು ಆದ ಶ್ರೀ ಜಿ.ಎಸ್.ಬಸವರಾಜ್ ರವರು ಮೋದಿಯವರು ಘೋಷಣೆ ಮಾಡಿರುವ ಎಲ್ಲಾ ಜನಪರ ಯೋಜನೆಗಳನ್ನು ಶೇ 100 ರಷ್ಟು ಪೂರ್ಣಗೊಳಿಸಲು ಪಣ ತೊಟ್ಟಿದ್ದಾರೆ.
ಜೊತೆಗೆ ’ಆಡುಮುಟ್ಟದ ಸೊಪ್ಪಿಲ್ಲ- ಜಿ.ಎಸ.ಬಸವರಾಜ್ ಕೈ ಹಾಕದ ಯೋಜನೆಯಿಲ್ಲ’ ಎಂಬಂತೆ ಸಾಧ್ಯಾತೆ ಇರುವ ಎಲ್ಲಾ ಯೋಜನೆಗಳ ಜಾರಿಗೆ ಪ್ರಯತ್ನ ಆರಂಭಿಸಿದ್ದಾರೆ. ಜಿಲ್ಲೆಯ, ರಾಜ್ಯದ ಮತ್ತು ದೇಶದ ಯೋಜನೆಗಳ ಬಗ್ಗೆಯೂ ಗಮನ ಸೆಳೆದಿದ್ದಾರೆ. ಈ ಎಲ್ಲಾ ಮಾಹಿತಿಗಳು ಸೇರಿದಂತೆ, ಸ್ವಾತಂತ್ರ್ಯ ಪೂರ್ವದಿಂದ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಜಿಐಎಸ್ ಆಧಾರಿತ ಲೇಯರ್ ಮಾಡಲು ಆರಂಭದ ಸಭೆಯಿಂದಲೇ ಕ್ರಮ ಕೈಗೊಂಡಿದ್ದಾರೆ.
6 ಸಭೆಗಳು ಮತ್ತು ಎರಡು ವಿಷಯಾಧಾರಿತ ಸಭೆಗಳ ಪಾಲಾನಾ ವರದಿ ಗಮನಿಸಿ, ದಿಶಾ ಸಭೆಗಳ ನಿರ್ಣಯ ಪಾಲಿಸಿರುವ ಅಧಿಕಾರಿಗಳಿಗೆ ಗುಲಾಭಿ ಹೂ ನೀಡಿ ಪುರಸ್ಕಾರ ಮಾಡುವುದು ಹಾಗೂ ’ಹೋದಾ ಪುಟ್ಟಾ- ಬಂದಾ ಪುಟ್ಟಾ’ ಎಂಬ ನಾಣ್ಣುಡಿಯಂತೆ ಇರುವ ಅಧಿಕಾರಿಗಳಿಗೆ, ನಿಯಮ ಪ್ರಕಾರ ಅಗತ್ಯಕ್ರಮಕ್ಕಾಗಿ ಶೀಪಾರಸ್ಸು ಮಾಡುವುದು ಸೂಕ್ತವಾಗಿದೆ. ಹೊಸದಾಗಿ ಬಂದಿದ್ದೇನೆ. ನಾನು ಇನ್ನೂ ನೋಡಿಲ್ಲ ಎಂಬ ಉತ್ತರ ಬರಬಾರದು ಎಂಬ ಅನಿಸಿಕೆ ದಿಶಾ ಸಮಿತಿಯ ಸದಸ್ಯರದ್ದಾಗಿದೆ.